ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಣ್ಯಕೋಟಿ ಯೋಜನೆ ಭಾಗವಾಗಿ 31 ಹಸು ದತ್ತು ಪಡೆದ ಸಚಿವ ಪ್ರಭು ಚವ್ಹಾಣ್

|
Google Oneindia Kannada News

ಬೆಂಗಳೂರು, ಜುಲೈ 29: ಪುಣ್ಯಕೋಟಿ ದತ್ತು ಯೋಜನೆ ಯೋಜನೆ ಅಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದರಂತೆ ಸರ್ಕಾರಿ ಮತ್ತು ಖಾಸಗಿ ಗೋಶಾಲೆಗಳಲ್ಲಿ 31 ಗೋವುಗಳನ್ನು ದತ್ತು ಪಡೆದಿರುವುದಾಗಿ ಕರ್ನಾಟಕ ಪಶುಸಂಗೋಪನಾ ಸಚಿವ ಪ್ರಭು ಬಿ. ಚವ್ಹಾಣ್ ಹೇಳಿದ್ದಾರೆ.

ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೋರ್ಟಲ್ ಅನ್ನು ಬಿಡುಗಡೆ ಮಾಡಿದ್ದರು. ಈ ಬಗ್ಗೆ ಸಚಿವ ಪ್ರಭು ಬಿ. ಚವ್ಹಾಣ್ ಅವರು ಹಸುಗಳ ಪೋಷಣೆ ಮತ್ತು ಆರೈಕೆ ಉತ್ತೇಜನೆ ದತ್ತು ಸ್ವೀಕಾರದ ಉದ್ದೇಶವೆಂದು ತಿಳಿಸಿದ್ದಾರೆ.

ದೇಶದ ಮೊದಲ ಪುಣ್ಯಕೋಟಿ ಯೋಜನೆ ಯಶಸ್ವಿಗೊಳಿಸಲು ಚಾವ್ಹಾಣ್‌ ಕರೆದೇಶದ ಮೊದಲ ಪುಣ್ಯಕೋಟಿ ಯೋಜನೆ ಯಶಸ್ವಿಗೊಳಿಸಲು ಚಾವ್ಹಾಣ್‌ ಕರೆ

ಈ ದಿನ 31 ಗೋವುಗಳನ್ನು ದತ್ತು ತೆಗೆದುಕೊಂಡು ಅವುಗಳ ರಕ್ಷಣೆ ಹಾಗೂ ಪೋಷಣೆಗೆ ಸಹಾಯ ಮಾಡಿದ್ದು, ನನ್ನ ಹಿಂದಿನ ಜನ್ಮದ ಪುಣ್ಯವಾಗಿದೆ. ಈ ಹಿಂದೆ ನನ್ನ ಜನ್ಮದಿನದಂದು ಬೀದರ್ ಗೋಶಾಲೆಯಲ್ಲಿ ಗೋವುಗಳನ್ನು ದತ್ತು ಪಡೆದಿದ್ದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜನ್ಮದಿನದಂದು ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ 11 ಗೋವುಗಳನ್ನು ದತ್ತು ಪಡೆದಿದ್ದಾರೆ. ಇದು ನಮಗೆಲ್ಲರಿಗೂ ಮಾದರಿಯಾಗಿದೆ ಎಂದು ಸಚಿವ ಪ್ರಭು ಬಿ. ಚವ್ಹಾಣ್ ಹೇಳಿದರು.

ಪುಣ್ಯಕೋಟಿ ಯೋಜನೆಯ ಅನುಷ್ಠಾನ ಹೆಚ್ಚಾಗಲು ಸಚಿವ ಚವ್ಹಾಣ್, ಎಲ್ಲ ಶಾಸಕರು, ಜನರು ಮತ್ತು ಸಂಘ ಸಂಸ್ಥೆಗಳು ಗೋವುಗಳನ್ನು ದತ್ತು ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಸರ್ಕಾರಿ ಹಾಗೂ ಖಾಸಗಿ ಗೋಶಾಲೆಗಳಲ್ಲಿ ನಾನು ಸೇರಿದಂತೆ ಸಾರ್ವಜನಿಕರು 100 ಗೋವುಗಳನ್ನು ದತ್ತು ಪಡೆದಿದ್ದಾರೆ. 1,314 ಮಂದಿ ಗೋಶಾಲೆಗಳಿಗೆ ದೇಣಿಗೆ ನೀಡಿದ್ದಾರೆ ಎಂದರು.

ರೈತರಿಂದ ಗೋ ಮೂತ್ರ, ಸಗಣಿ ಖರೀದಿಸಲಿದೆ ಸರ್ಕಾರರೈತರಿಂದ ಗೋ ಮೂತ್ರ, ಸಗಣಿ ಖರೀದಿಸಲಿದೆ ಸರ್ಕಾರ

ರಾಜ್ಯಾದ್ಯಂತ ಪುಣ್ಯಕೋಟಿ ದತ್ತು ಯೋಜನೆ ಪೋರ್ಟಲ್‌ನಲ್ಲಿ 123 ಗೋಶಾಲೆಗಳು ನೋಂದಣಿಯಾಗಿದ್ದು, 60 ಗೋಶಾಲೆಗಳ ನೋಂದಣಿ ಪ್ರಗತಿಯಲ್ಲಿದೆ. 16,650 ಜಾನುವಾರುಗಳನ್ನು ಈ ಯೋಜನೆಯಡಿ ನೋಂದಾಯಿಸಲಾಗಿದೆ. ಈ ಯೋಜನೆ ಜಾರಿಯಿಂದ ದೇಶದಲ್ಲೇ ಇಂತಹ ಕಾರ್ಯಕ್ರಮ ರೂಪಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ ಎಂದು ತಿಳಿಸಿದರು.

 ದೇಶದಲ್ಲೇ ಮೊದಲ ರಾಜ್ಯ

ದೇಶದಲ್ಲೇ ಮೊದಲ ರಾಜ್ಯ

ಗೋಹತ್ಯೆ ನಿಷೇಧ ಕಾಯಿದೆ ಜಾರಿಯಾದ ನಂತರ ಜಿಲ್ಲೆಗಳಲ್ಲಿ ಸರ್ಕಾರಿ ಗೋಶಾಲೆ ಸ್ಥಾಪನೆಯಾಗಿದೆ. ಪುಣ್ಯಕೋಟಿ ದತ್ತು ಯೋಜನೆ ಜಾರಿಗೊಳಿಸಿದ ದೇಶದಲ್ಲೇ ಮೊದಲ ರಾಜ್ಯ ಕರ್ನಾಟಕ. 2022-23ರ ಬಜೆಟ್‌ನಲ್ಲಿ ಪುಣ್ಯಕೋಟಿ ದತ್ತು ಯೋಜನೆ ಜಾರಿಗೊಳಿಸಲಾಗಿದೆ. ಸಾರ್ವಜನಿಕರ ಸಹಕಾರದೊಂದಿಗೆ ಗೋಶಾಲೆಗಳನ್ನು ಆರ್ಥಿಕವಾಗಿ ಸದೃಢಗೊಳಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ಚವ್ಹಾಣ್ ತಿಳಿಸಿದರು.

 ಗೋವು ದತ್ತು ಸ್ವೀಕಾರ, ಗೋಶಾಲೆಗೆ ದೇಣಿಗೆ

ಗೋವು ದತ್ತು ಸ್ವೀಕಾರ, ಗೋಶಾಲೆಗೆ ದೇಣಿಗೆ

ರೈತರು ತಂದಿರುವ ಜಾನುವಾರುಗಳು ವೃದ್ಧ, ಅನಾರೋಗ್ಯ ಪೀಡಿತ, ನಿರ್ಗತಿಕ, ಗಂಡು ಕರುಗಳು ಹಾಗೂ ನ್ಯಾಯಾಲಯ ಮತ್ತು ಪೊಲೀಸ್ ವಶದಲ್ಲಿರುವ ಜಾನುವಾರುಗಳಿಗೆ ಆಶ್ರಯ ನೀಡಿ ಪೋಷಣೆ ಮಾಡಲಾಗುತ್ತದೆ. ಪುಣ್ಯಕೋಟಿ ದತ್ತು ಯೋಜನೆಯಡಿ ಗೋಶಾಲೆಯಲ್ಲಿ ಗೋವುಗಳನ್ನು ಸಾಕಲು ಸಾರ್ವಜನಿಕರಿಗೆ ಗೋವು ದತ್ತು ಸ್ವೀಕಾರ, ಗೋಶಾಲೆಗೆ ದೇಣಿಗೆ ಹಾಗೂ ಜಾನುವಾರು ಪೋಷಣೆ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.

 215ಕ್ಕೂ ಹೆಚ್ಚು ಖಾಸಗಿ ಗೋಶಾಲೆಗಳಲ್ಲಿ ಆಶ್ರಯ

215ಕ್ಕೂ ಹೆಚ್ಚು ಖಾಸಗಿ ಗೋಶಾಲೆಗಳಲ್ಲಿ ಆಶ್ರಯ

ಸಾರ್ವಜನಿಕರು ಗೋವುಗಳನ್ನು ದತ್ತು ಪಡೆದು ಗೋಸಂರಕ್ಷಣೆಯಲ್ಲಿ ಪಾಲ್ಗೊಳ್ಳುವಂತೆ ಚವ್ಹಾಣ್ ಮನವಿ ಮಾಡಿದರು. ಕರ್ನಾಟಕದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ಗೋಶಾಲೆಗಳಿಂದ ಜಾನುವಾರುಗಳನ್ನು ದತ್ತು ಪಡೆಯುವುದನ್ನು ಉತ್ತೇಜಿಸಲು, ರಾಜ್ಯ ಸರ್ಕಾರವು ಜುಲೈ 28 ರಂದು ಹಸು ದತ್ತು ಯೋಜನೆಗೆ ಚಾಲನೆ ನೀಡಿತ್ತು. ರಾಜ್ಯದ 215ಕ್ಕೂ ಹೆಚ್ಚು ಖಾಸಗಿ ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಆಶ್ರಯ ನೀಡಲಾಗಿದ್ದು, ಸುಮಾರು 100 ಸರ್ಕಾರಿ ಗೋಶಾಲೆಗಳನ್ನು ಹಂತ ಹಂತವಾಗಿ ಆರಂಭಿಸಲಾಗುತ್ತಿದೆ ಎಂದು ಸಚಿವ ಚವ್ಹಾಣ್ ಹೇಳಿದ್ದರು.

 ದತ್ತು ಪಡೆಯಲು ತಿಳಿಸುವಂತೆ ಮನವಿ

ದತ್ತು ಪಡೆಯಲು ತಿಳಿಸುವಂತೆ ಮನವಿ

ಪುಣ್ಯಕೋಟಿ ದತ್ತು ಪೋರ್ಟಲ್‌ನಲ್ಲಿ ಪ್ರತಿ ಜಾನುವಾರುಗಳಿಗೆ ವಾರ್ಷಿಕ 11,000 ರೂ.ಗಳನ್ನು ಪಾವತಿಸುವ ಮೂಲಕ ಜಾನುವಾರು ದತ್ತು (ಎಡಿಒಪಿಟಿ) ಯೋಜನೆಯಡಿ ಜಾನುವಾರುಗಳನ್ನು ದತ್ತು ಪಡೆಯಲು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವಂತೆ ಸಚಿವ ಪ್ರಭು ಚವ್ಹಾಣ್ ಬಳ್ಳಾರಿಯಲ್ಲಿ ಯೋಜನೆ ಬಗ್ಗೆ ಮಾಹಿತಿ ನೀಡಿದ್ದರು.

English summary
Karnataka Animal Husbandry Minister Prabhu B. said that 31 cows have been adopted in government and private cowsheds, one in each district under Punyakoti Dattu Yojana Yojana. Chavan said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X