ನಾಲಿಗೆ ಹರಿ ಬಿಟ್ಟು ಮಾತನಾಡಿದರೆ ನಾಲಿಗೆ ಕತ್ತರಿಸುವ ಕೆಲಸವಾಗುತ್ತದೆ : ಯತ್ನಾಳ್ಗೆ ಎಚ್ಚರಿಕೆ ಕೊಟ್ಟ ನಿರಾಣಿ
ಬೆಂಗಳೂರು,ಜನವರಿ 14: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಿಂಪ್ ಅಂತ ಭಾಷೆ ಪ್ರಯೋಗಿಸಿದ್ದು, ಯತ್ನಾಳ್ ಗೆ ಸಚಿವ ಮುರುಗೇಶ್ ನಿರಾಣಿ ಕಠೋರವಾಗಿ ಗುಡುಗಿದ್ದಾರೆ. ನಾಲಿಗೆ ಹರಿ ಬಿಟ್ಟು ಮಾತನಾಡಿದರೆ ನಾಲಿಗೆ ಕತ್ತರಿಸುವ ಕೆಲಸವಾಗುತ್ತದೆ ಎಂದು ಸಚಿವ ಮುರುಗೇಶ್ ನಿರಾಣಿ ಎಚ್ಚರಿಕೆ ಕೊಟ್ಟಿದ್ದಾರೆ.
ಈ ಕುರಿತು ಶನಿವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಿಂಪ್ ಅಂತ ಭಾಷೆ ಪ್ರಯೋಗಿಸಿದ್ದು, ಆ ಸಂಸ್ಕೃತಿಯಲ್ಲಿ ಇದ್ದವರೇ ಆ ರೀತಿ ಮಾತಾಡಿದ್ದಾರೆ. ಅಪ್ಪನಿಗೆ ಹುಟ್ಟಿದವರು ಈ ರೀತಿ ಮಾತನಾಡಲ್ಲ. ನಾಲಿಗೆ ಹರಿ ಬಿಟ್ಟು ಮಾತನಾಡಿದರೆ ನಾಲಿಗೆ ಕತ್ತರಿಸುವ ಕೆಲಸವಾಗುತ್ತದೆ. ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಪಕ್ಷದಲ್ಲಿ ಇರೋಕೆ ಆಗಲ್ಲ ಅಂದರೆ ರಾಜೀನಾಮೆ ಕೊಟ್ಟು ಹೋಗಲಿ. ರಾಜೀನಾಮೆ ಕೊಟ್ಟು ಹೋಗಿ , ಪ್ರತಿಭಟನೆ ಮಾಡಲಿ ಎಂದು ಸಚಿವ ಮುರಗೇಶ ನಿರಾಣಿ ಯತ್ನಾಳ್ ವಿರುದ್ದ ಕಿಡಿಕಾರಿದ್ದಾರೆ.
ಇನ್ನೂ ಶಾಸಕ ಯತ್ನಾಳ್ ಆಟಕ್ಕೆ ವಿಜಯಪುರದ ಜನರು ಉತ್ತರ ಕೊಡುತ್ತಾರೆ. 2ಎ ಮೀಸಲಾತಿ ಬೇಡಿಕೆ ಇಂದು, ನಿನ್ನೆಯದಲ್ಲ. ಪಂಚಮಸಾಲಿಗೆ 2ಎ ಮೀಸಲಾತಿ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವಾರಿಗೆ ಬದ್ಧತೆ ಇದೆ. 2C, 2D ಸ್ಥಾಪನೆ ಮಾಡಿ ಮೀಸಲಾತಿಗೆ ಸರ್ಕಾರ ಮುಂದಾಗಿತ್ತು. ಇಷ್ಟೆಲ್ಲಾ ಮಾಡಿದರೂ ನಮ್ಮ ಮೇಲೆ ಗೂಬೆ ಕೂರಿಸಲು ಪ್ರಯತ್ನ ಮಾಡುತ್ತಿದ್ದಾರೆ. SC, ST, ಒಕ್ಕಲಿಗ ಸಮುದಾಯ ಶಾಂತಿಯುತವಾಗಿ ಮನವಿ ಮಾಡಿದೆ ಎಂದು ಹೇಳಿದರು.

ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ಏಕೆ ಮೀಸಲಾತಿ ಕೇಳಲಿಲ್ಲ. ಅಂದು 2016ರಲ್ಲಿ ಕಾಂತರಾಜ್ ವರದಿಯಲ್ಲಿ ಮೀಸಲಾತಿ ಕೊಡಬಾರದು ಎಂದು ಹೇಳಿತ್ತು. ಆಗ ಯತ್ನಾಳ್ , ಜಯಮೃತ್ಯುಂಜಯ ಸ್ವಾಮೀಜಿಗಳು ಎಲ್ಲಿ ಮಲಗಿದ್ದರು. ರಾಜಕೀಯ ಕಾರಣಕ್ಕಾಗಿ ಪಂಚಮಸಾಲಿ ಹೋರಾಟ ನಡೆಸುತ್ತಿದ್ದಾರೆ . ಲಿಂಗಾಯಿತ ಸಮುದಾಯ ಒಡೆಯುವ ಹುನ್ನಾರ ನಡೆಸಿದ್ದಾರೆ. ಅಂದು ಸ್ವಾಮೀಜಿ ಕಾಂತರಾಜ್ ವರದಿ ವಿರೋಧಿಸಲಿಲ್ಲ ಇಂದು ಲಿಂಗಾಯತ ಸಮುದಾಯ ಒಡೆಯಲು ಹೋರಾಟ ಮಾಡುತ್ತಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಮೀಸಲಾತಿ ನೀಡಬೇಕು ಶ್ರೀಗಳು ಇದನ್ನೆಲ್ಲಾ ತಿಳಿದುಕೊಳ್ಳಬೇಕು ಎಂದು ಹೇಳಿದರು.












Click it and Unblock the Notifications