ಹೈ ಕಮಾಂಡಿಗೆ ಬೆಚ್ಚಿ ಬರಿಗೈಲ್ಲಿ ಹಿಂತಿರುಗಿದ ಮಾಲಿಕಯ್ಯಾ

minister-monger-malikayya-guttedar-sent-back-by-high-command
ಗುಲ್ಬರ್ಗ, ಫೆ. 8: ಕಾಂಗ್ರೆಸ್ 'ಹೈ ಕಮಾಂಡ್' ಗೆ ಬೆಚ್ಚಿ ಮಾಲಿಕಯ್ಯಾ ಗುತ್ತೇದಾರ್ ಬರಿಗೈಯಲ್ಲಿ ಹಿಂದಿರುಗಿದ್ದಾರೆ. ಲೋಕಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಖಾಲಿಯಿರುವ 3 ಸ್ಥಾನಗಳನ್ನು ಭರ್ತಿ ಮಾಡಬೇಕೆಂದು ಬಂಡಾಯ ಬಾವುಟ ಬೀಸಿದ್ದ ಕಾಂಗ್ರೆಸ್ ಶಾಸಕ ಮಾಲಿಕಯ್ಯಾ ಗುತ್ತೇದಾರ್ ಅವರನ್ನು ಸರಿಯಾಗಿ ವಿಚಾರಿಸಿಕೊಂಡ 'ಹೈ ಕಮಾಂಡ್' ಮಾಲಿಕಯ್ಯಾ ಅವರನ್ನು ಬರಿಗೈಲಿ ವಾಪಸ್ ಕಳುಹಿಸಿದೆ.

ಅಷ್ಟೇ ಅಲ್ಲ. ಚುನಾವಣಾ ಸಂದರ್ಭದಲ್ಲಿ ಗುಲ್ಬರ್ಗ ಅಫಜಲ್ ಪುರ ಕ್ಷೇತ್ರದ ಶಾಸಕ ಮಾಲಿಕಯ್ಯಾ ಗುತ್ತೇದಾರ್ ಹಾದಿಯಲ್ಲಿ ಬೇರೆ ಯಾರಾದರೂ ಕಾಣಿಸಿಕೊಂಡರೆ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂಬ ಸಂದೇಶವನ್ನೂ ಕಾಂಗ್ರೆಸ್ ಹೈ ಕಮಾಂಡ್ ರವಾನಿಸಿದೆ.

ಇದರಿಂದ ಚುನಾವಣೆ ಪೂರ್ವದಲ್ಲಿ ಸಿಎಂ ಸಿದ್ದರಾಮಯ್ಯಗೆ ಶಾಂತಿಕಾಲವೂ ಲಭಿಸಿದಂತಾಗಿದೆ.

ಮಾಲಿಕಯ್ಯಾ ಗುತ್ತೇದಾರ್ ಜತೆ ಕೈಜೋಡಿಸಿದ್ದ ಶಾಸಕರಾದ ರಾಜಶೇಖರ್ ಪಾಟೀಲ್, ಕೆವಿ ಕೋಳಿವಾಡಾ ಮುಂತಾದವರನ್ನೂ ಹೈ ಕಮಾಂಡ್ ಗದರಿಕೊಂಡಿದೆ. ಸಚಿವ ಸ್ಥಾನ ಬಯಸಿ ಹೈ ಕಮಾಂಡ್ ಮೇಲೆ ಒತ್ತಡ ಹೇರಬಾರದು ಎಂದು ಈ ಹಿಂದೆಯೇ ಎಚ್ಚರಿಸಲಾಗಿತ್ತು. ಆದರೂ ಕೆಲ ಶಾಸಕರು ವರಿಷ್ಠರಿಗೆ ದುಂಬಾಲು ಬೀಳುತ್ತಿದ್ದಾರೆ. ಇದೇ ಕೊನೆ. ಮತ್ತೆ ಯಾರೂ ಸಚಿವ ಸ್ಥಾನ ಬಯಸಿ, ದಿಲ್ಲಿಗೆ ಬರಬಾರದು. ಅಶಿಸ್ತು ಕಂಡುಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ದಿಲ್ಲಿ ಕಾಂಗ್ರೆಸ್ ನಾಯಕರು ಎಚ್ಚರಿಸಿದ್ದಾರೆ.

ಇದೇ ವೇಳೆ, ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಅವರನ್ನು ವಿಚಾರಿಸಿಕೊಂಡಿರುವ ಕೇಂದ್ರ ನಾಯಕರು ಮುಂದೆ ಯಾವುದೇ ಶಾಸಕರೂ ಮಂತ್ರಿ ಪದವಿಗಾಗಿ ಬಂಡಾಯವೇಳದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದೆ.

ಲೋಕಸಭಾ ಚುನಾವಣೆ ಎದುರಿಗೇ ಇರುವಾಗ ಪಕ್ಷದ ಎಲ್ಲ ನಾಯಕರು, ಶಾಸಕರು ಪಕ್ಷದ ಸಂಘಟನೆಯಲ್ಲಿ ತೊಡಗಬೇಕೇ ಹೊರತು ಮಂತ್ರಿ ಪದವಿ, ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಬಯಸಿ ಬಂಡಾವೇಳುವ ಪ್ರವೃತ್ತಿ ತೋರಬಾರದು ಎಂದು ಕರ್ನಾಟಕ ಕಾಂಗ್ರೆಸ್ಸಿಗೆ ಕೇಂದ್ರ ವರಿಷ್ಠರು ಅಖಂಡವಾಗಿ ಎಚ್ಚರಿಸಿದ್ದಾರೆ.

ಇದೇ ವೇಳೆ ಲೋಕಸಭಾ ಚುನಾವಣೆ ಮುಗಿಯಲಿ ಸೂಕ್ತ ಸ್ಥಾನಮಾನ ನೀಡುವುದಾಗಿಯೂ ಅಲ್ಲಿಯವರೆಗೆ ಚಕಾರವೆತ್ತದೆ ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದೂ ಪಕ್ಷದ ಹಿರಿಯ ಶಾಸಕ ಮಾಲಿಕಯ್ಯಾ ಗುತ್ತೇದಾರ್ ಅವರಿಗೆ ಕಾಂಗ್ರೆಸ್ ನಾಯಕರು ಎಚ್ಚರಿಕೆ-ಮಿಶ್ರಿತ ಭರವಸೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+