ಉತ್ತರ ಕರ್ನಾಟಕದ ಖಾನಾವಳಿಗೆ ಯೂಟ್ಯೂಬರ್ ಆಹ್ವಾನಿಸಿದ ಸಚಿವರು!

ಬೆಂಗಳೂರು, ಜುಲೈ 24; ಉತ್ತರ ಕರ್ನಾಟಕದ ಖಾನಾವಳಿ ಊಟ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಜೋಳದ ರೊಟ್ಟಿ, ಎಣ್ಣೆಗಾಯಿ ಸೇರಿದಂತೆ ವಿವಿಧ ಬಗೆಯ ಖಾದ್ಯಗಳ ಸವಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ಬೆಂಗಳೂರು ನಗರದಲ್ಲಿಯೂ ಉತ್ತರ ಕರ್ನಾಟಕದ ಅನೇಕ ಖಾನಾವಳಿಗಳು ಇರುವುದು ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಬೃಹತ್ ಮತ್ತು ಮಧ್ಯಮ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾಗಿರುವ ಎಂ. ಬಿ. ಪಾಟೀಲ್ ಉತ್ತರ ಕರ್ನಾಟಕದ ಊಟಕ್ಕಾಗಿ ಖ್ಯಾತ ಯೂಟ್ಯೂಬರ್ ಆಹ್ವಾನಿಸಿದ್ದಾರೆ.

north-karnataka-khanavali

ವಿಜಯಪುರದ ಬಬಲೇಶ್ವರ ಕ್ಷೇತ್ರದ ಶಾಸಕ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ್ ಖ್ಯಾಯ ಯೂಟ್ಯೂಬರ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಕೃಪಾಲ್ ಅಮನ್ನಾರನ್ನು ಉತ್ತರ ಕರ್ನಾಟಕಕ್ಕೆ ಆಹ್ವಾನಿಸಿದ್ದಾರೆ.

ಸಚಿವರ ಆಹ್ವಾನ ಹೀಗಿದೆ; ಸಚಿವ ಎಂ. ಟಿ. ಪಾಟೀಲ್ ಟ್ವೀಟ್ ಮಾಡಿ ಕೃಪಾಲ್ ಅಮನ್ನಾರನ್ನು ಟ್ಯಾಗ್ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗದ ಭಾಷೆಯಲ್ಲಿಯೇ, 'ನಮ್ಮೂರಿಗೂ ಬಂದು ಹೋಗ್ರೀ @kripalamanna ಅವರೆ... ಚಲೋ ಚಲೋ ಖಾನಾವಳಿ, ಡಾಬಾಗಳು ಅದಾವು... ನಮ್ಮ ಕಡೆ 'ಪುಂಡಿ ಪಲ್ಯ' ಬಾರಿ ಇರ್ತೈತಿ' ಎಂದು ಪ್ರೀತಿಯ ಆಹ್ವಾನ ನೀಡಿದ್ದಾರೆ.

ಸಚಿವರ ಪ್ರೀತಿಯ ಆಹ್ವಾನಕ್ಕೆ ಕೃಪಾಲ್ ಅಮನ್ನಾ ಸಹ ಪ್ರತಿಕ್ರಿಯೆ ನೀಡಿದ್ದಾರೆ. 'Dhanyavaada 🙏🙏 Sir, kanditha, haven't visited Vijayapura yet. Akade du pundi palya eevarage tindila, haven't tried it yet' ಎಂದು ವಿಜಯಪುರಕ್ಕೆ ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಬಳಸುವವರಿಗೆ ಕೃಪಾಲ್ ಅಮನ್ನಾ ಪರಿಚಿತ ಹೆಸರು. ವಿವಿಧ ಪ್ರದೇಶಗಳ ತಿನಿಸುಗಳ ಬಗ್ಗೆ ಅವರು ವಿವರಣೆ ನೀಡುತ್ತಾ ಅದನ್ನು ಸವಿಯುವುದನ್ನು ನೋಡಿದವರಿಗೆ ಅಲ್ಲಿಗೆ ಭೇಟಿ ನೀಡಬೇಕು ಎಂದು ಅನ್ನಿಸುತ್ತದೆ.

ಕೃಪಾಲ್ ಅಮನ್ನಾ ಬಸವೇಶ್ವರ ಖಾನಾವಳಿಗಳ ಬಗ್ಗೆ ಹಲವಾರು ವಿಡಿಯೋಗಳನ್ನು ಮಾಡಿದ್ದಾರೆ. ಬೆಂಗಳೂರು ನಗರದಲ್ಲಿರುವ ವಿವಿಧ ಖಾನಾವಳಿ ಬಗ್ಗೆಯೂ ಅವರು ಉತ್ತಮವಾದ ವಿವರಣೆ ನೀಡಿದ್ದಾರೆ. ಕೋಟ್ಯಾಂತರ ಜನರು ಈ ವಿಡಿಯೋಗಳನ್ನು ವೀಕ್ಷಣೆ ಮಾಡಿದ್ದಾರೆ.

ಉತ್ತರ ಕರ್ನಾಟಕದ ಭಾಗದಲ್ಲಿ ಬಸವೇಶ್ವರ ಖಾನಾವಳಿ ಬಹುಪ್ರಸಿದ್ಧ. ಸಚಿವ ಎಂ. ಟಿ. ಪಾಟೀಲ್ ಈ ಖಾನಾವಳಿಯ ಫೋಟೋವನ್ನು ಹಾಕಿ, ಬಾಳೆ ಎಲೆ ಊಟದ ಚಿತ್ರವನ್ನು ಹಾಕಿ ಕೃಪಾಲ್ ಅಮನ್ನಾ ಅವರನ್ನು ನಮ್ಮೂರಿಗೂ ಬನ್ನಿ ಎಂದು ಆಹ್ವಾನ ನೀಡಿದ್ದಾರೆ.

ಕೃಪಾಲ್ ಅಮನ್ನಾ ಕರ್ನಾಟಕ ರತ್ನ ದಿ. ಡಾ.ಪುನೀತ್ ರಾಜ್‌ಕುಮಾರ್ ಜೊತೆ ಉತ್ತರ ಕರ್ನಾಟಕದ ಊಟ ಸವಿದಿದ್ದರು. ಈ ವಿಡಿಯೋಗಳು ಅವರ ಯೂಟ್ಯೂಬ್ ಚಾನೆಲ್‌ನಲ್ಲಿವೆ. ಕೆಲವು ದಿನಗಳ ಹಿಂದೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಜೊತೆ ಅವರು ಮಾತುಕತೆ ನಡೆಸಿರುವ ವಿಡಿಯೋವನ್ನು ಸಹ ಅಪ್‌ಲೋಡ್ ಮಾಡಿದ್ದಾರೆ.

ಉತ್ತರ ಕರ್ನಾಟಕ ಭಾಗದ ಊಟದ ರುಚಿಯೇ ಹಾಗೆ. ಅದರಲ್ಲಿ ಖಾರವೇ ಮುಂದೆ. ಆದರೆ ರುಚಿ ಮಾತ್ರ ಅಸಾಧಾರಣವಾದದ್ದು. ಖಡಕ್ ರೊಟ್ಟಿ, ಗಟ್ಟಿ ಮೊಸರು, ಗುರೆಳ್ಳು ಚಟ್ನಿ, ಬದನೆಕಾಯಿ ಎಣ್ಣೆಗಾಯಿ ಪಲ್ಯ, ಜೋಳದ ರೊಟ್ಟಿ, ಮಡಿಕಿ ಕಾಳು ಪಲ್ಯ, ತಾಜಾ ತರಕಾರಿ, ಚವಳಿಕಾಯಿ ಪಲ್ಯಕ್ಕೆ ಅಪಾರ ಅಭಿಮಾನಿಗಳಿದ್ದಾರೆ. ಕರ್ನಾಟಕವ ವಿವಿಧ ಭಾಗಗಳ ಜನರು ಸಹ ಉತ್ತರ ಕರ್ನಾಟಕದ ಭಾಗದ ಊಟವನ್ನು ಇಷ್ಟ ಪಡುತ್ತಾರೆ.

ಸಚಿವ ಎಂ. ಬಿ. ಪಾಟೀಲ್ ಅವರು, 'ನಮ್ಮ ಕಡೆ ಪುಂಡಿ ಪಲ್ಯ ಬಾರಿ ಇರ್ತೈತಿ' ಎಂದು ಕೃಪಾಲ್ ಅಮನ್ನಾರನ್ನು ವಿಜಯಪುರಕ್ಕೆ ಬರುವಂತೆ ಪ್ರೀತಿಯ ಆಹ್ವಾನ ನೀಡಿದ್ದಾರೆ. ಕೃಪಾಲ್ ಅಮನ್ನಾ ಯಾವಾಗ ವಿಜಯಪುರಕ್ಕೆ ಭೇಟಿ ನೀಡಿ, ಪುಂಡಿ ಪಲ್ಯ ಸವಿದು, ವಿಡಿಯೋ ಅಪ್‌ಲೋಡ್ ಮಾಡುತ್ತಾರೆ. ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+