ಮತ್ತೆ ದಲಿತ ಸಿಎಂ ಕೂಗು: ಸ್ಪೋಟಕ ಹೇಳಿಕೆ ನೀಡಿದ ಕೆ ಹೆಚ್‌ ಮುನಿಯಪ್ಪ

ಬೆಂಗಳೂರು, ಏಪ್ರಿಲ್‌ 19: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ ಬಣ ಹಾಗೂ ಡಿ ಕೆ ಶಿವಕುಮಾರ್‌ ಬಣದ ನಡುವೆ ಸಿಎಂ ಸ್ಥಾನದ ಜಟಾಪಟಿ ಜೋರಾಗಿದ್ದು, ಈ ನಡುವೆ ದಲಿತ ಮುಖ್ಯಮಂತ್ರಿ ವಿಚಾರ ಮತ್ತೆ ಮುನ್ನಲೇಗೆ ಬಂದಿದೆ. ಈ ಬಗ್ಗೆ ಆಹಾರ ಸಚಿವರಾದ ಕೆ ಹೆಚ್‌ ಮುನಿಯಪ್ಪ ಅವರು ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಭಾಂಗಣದಲ್ಲಿಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಸಚಿವ ಕೆ ಎಚ್‌ ಮುನಿಯಪ್ಪ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ.ಶಿವಕುಮಾರ್ ರವರೇ ಮುಂದುವರೆಯಲ್ಲಿದ್ದು ಅದು ನಮ್ಮ ಮಟ್ಟದಲ್ಲಿನ ಚರ್ಚೆ ಅಲ್ಲ ಏನೇ ಇದ್ದರೂ ಹೈಕಮಾಂಡ್ ಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವಿದೆ ಎಂದು ಹೇಳಿದ್ದಾರೆ.

Minister KH Muniyappa Reaction on Dalit Chief Minister

ದಲಿತ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ವಿಚಾರವಾಗಿ ಮಾಧ್ಯಮಗಳು ಸೃಷ್ಟಿ ಮಾಡಿದ್ದು, ಈಗಾಗಲೇ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ರವರನ್ನು ಆಯ್ಕೆ ಮಾಡಿದ್ದು, ಅವರೇ ಮುಂದುವರೆಯುತ್ತಾರೆ ಕೆಪಿಸಿಸಿ ಅಧ್ಯಕ್ಷರಾಗಿ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ರವರೆ ಮುಂದುವರೆಯಲಿದ್ದು, ಈ ಸಂದರ್ಭದಲ್ಲಿ ಈ ಎರಡು ವಿಚಾರಗಳು ಅಪ್ರಸ್ತುತ ನಿನ್ನೆ ನಮ್ಮ ನಿವಾಸಕ್ಕೆ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೋಳಿ ರವರು ಉಪಹಾರಕ್ಕೆ ಬೇಟಿ ನೀಡಿದ್ದಾರೆ. ಈ ವೇಳೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಕೆಲವು ರಸ್ತೆಗಳಿಗೆ ಹಣ ಬಿಡುಗಡೆ ಮಾಡುವ ಕುರಿತು ಚರ್ಚೆ ನಡೆಸಿದ್ದೇವೆ ವಿನಃ ಬೇರೆ ರಾಜಕೀಯ ವಿಚಾರಗಳ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಹೇಳಿದರು.

ಈಗಾಗಲೇ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರೆ ಇದ್ದು ಇದರಲ್ಲಿ ಯಾವುದೇ ಬದಲಾವಣೆಗಳಿಲ್ಲ. ಎಲ್ಲಾ ಸಮುದಾಯಗಳಿಗೆ ಸಾಮಾಜಿಕ, ಶೈಕ್ಷಣಿಕ ,ಆರ್ಥಿಕ ಸಮಾನತೆ ಕೊಡುವುದು ಕಾಂಗ್ರೆಸ್ ಪಕ್ಷದ ಬದ್ಧತೆ ಯಾಗಿದೆ ನಾನೆ ಹೇಳಿದ್ದೆ ಧರ್ಮ ಸಿಂಗ್ ನಂತರ ಅತ್ಯಂತ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರು ಆಗಬೇಕು ಎಂದು ತದನಂತರ ಮೊದಲು ಸಿದ್ದರಾಮಯ್ಯ ರವರು ಮುಖ್ಯಮಂತ್ರಿ ಆದಾಗ ನಮ್ಮ ಪರಮೇಶ್ವರ್ ರವರು ಕೆಪಿಸಿಸಿ ಅಧ್ಯಕ್ಷರಿದ್ದಾಗ ಆಕಸ್ಮಿಕವಾಗಿ ಸೋತರು ಕೂಡ ಅವರಿಗೆ ಉಪ ಮುಖ್ಯಮಂತ್ರಿ ಮಾಡಬೇಕೆಂದು ನಾನೇ ಒತ್ತಾಯ ಮಾಡಿದ್ದು. ದಲಿತರಲ್ಲಿ ಯಾರಿಗಾದರು ಕೊಡಬೇಕೆಂದಿದೆ ಆದರೆ ಅದರ ಸಮಯ ಇನ್ನೂ ಬಂದಿಲ್ಲ ಎಂಬುದು ಕಾಣತಿದೆ. ಏಕೆಂದರೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಇರುವುದರಿಂದ ನಮ್ಮ ಹೈಕಮಾಂಡ್ ಯಾವ ಸಮಯದಲ್ಲಿ ಏನು ನಿರ್ಧಾರ ಮಾಡಬೇಕು. ಕೆಪಿಸಿಸಿ ವಿಚಾರವಿರಲಿ,ಮುಖ್ಯಮಂತ್ರಿ ವಿಚಾರ ವಿರಲಿ ಅವರೇ ನೋಡುತ್ತಾರೆ ಎಂದರು.

ಇದೇ ತಿಂಗಳು 28 ರಂದು ಜಿಲ್ಲೆಯ ಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಗೆ ಮಾನ್ಯ ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯನ್ನು ನಡೆಸಿದ್ದೇನೆ ಎಂದರು. ಈ ರಾಜ್ಯದಲ್ಲಿ 75 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಗಲಿ ಮುಖ್ಯಮಂತ್ರಿ ,ಉಪಮುಖ್ಯಮಂತ್ರಿ ತಮ್ಮ ಸಮುದಾಯಕ್ಕೆ ಸಿಕ್ಕಿಲ್ಲಾ ಎಂದು ಕೆಲವು ಸ್ವಾಮೀಜಿಗಳು ದ್ವನಿ ಎತ್ತುತ್ತಿದ್ದಾರೆ ಎಂದು ಆಹಾರ ಸಚಿವ ಕೆ ಹೆಚ್‌ ಮುನಿಯಪ್ಪ ಅವರು ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ಹಣಬಿಡುಗಡೆ ಮಾಡಬೇಕು ಎಂಬ ವಿಚಾರಗಳನ್ನು ಸತೀಶ್ ರವರೊಂದಿಗೆ ಚರ್ಚೆ ನಡೆಸಿದ್ದು ಸಾಮನ್ಯವಾಗಿ ನಾನು ಅವರ ಮನೆಗೆ ಹೋಗುತ್ತೇನೆ ಅವರು ನಮ್ಮ ಮನೆಗೆ ಕರೆದಿದ್ದೆ ಬಂದಿದ್ದಾರೆ ಇದರಲ್ಲಿ ವಿಶೇಷ ಏನು ಇಲ್ಲ ಎಂದು ಸಚಿವರಾದ ಕೆ ಹೆಚ್‌ ಮುನಿಯಪ್ಪ ಅವರು ಹೇಳಿದರು.

ಈ ಸಂದರ್ಭದಲ್ಲಿ ಹೊಸಕೋಟೆ ಶಾಸಕರಾದ ಶರತ್ ಕುಮಾರ್ ಬಚ್ಚೇಗೌಡ, ಮಾಜಿ ಶಾಸಕ ವೆಂಕಟರಮಣಯ್ಯ ,ಜಿಲ್ಲಾಧಿಕಾರಿ ಬಸವರಾಜು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಅನುರಾಧ,ಹಾಗೂ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ರಾಜಣ್ಣ,ಬಯ್ಯಪ್ಪಾ ಸದಸ್ಯರಾದ ರಾಮಚಂದ್ರಪ್ಪ, ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+