ಭಾರತ ಹಿಂದೂ ರಾಷ್ಟ್ರ ಆಗಲಿದೆ ಎನ್ನುವುದು ಈ ಕಾರಣಕ್ಕೆ ಹಾಸ್ಯಾಸ್ಪದ: ಸಚಿವ ಎಚ್.ಸಿ. ಮಹದೇವಪ್ಪ
ಕಳೆದ ಒಂದು ವಾರದಿಂದ ದೇಶದಲ್ಲಿ ಹಿಂದೂ ರಾಷ್ಟ್ರ ಪರಿಕಲ್ಪನೆ ವಿಚಾರ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಭಾರತವು ಹಿಂದೂ ರಾಷ್ಟ್ರವಾಗಿದ್ದು, ದೇಶದ ಹೊಣೆ ಹಿಂದೂಗಳ ಮೇಲಿದೆ ಎಂದು ಆರ್‌ಎಸ್‌ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಅವರು ಹೇಳಿದ ಮೇಲೆ ಈ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ.
ಈ ವಿಚಾರವಾಗಿ ರಿಯಾಕ್ಟ್ ಮಾಡಿರುವ ಸಚಿವ ಡಾ ಎಚ್.ಸಿ ಮಹದೇವಪ್ಪ ಅವರು, ಈ ಕ್ಷಣಕ್ಕೂ ಜಾತೀಯ ಅಸಮಾನತೆಯ ಕೂಪವಾಗಿರುವ ಸಾಮಾಜಿಕ ವ್ಯವಸ್ಥೆಯನ್ನು ಸರಿ ಪಡಿಸಬೇಕೆಂಬ ಕನಿಷ್ಠ ಕಾಳಜಿ ಇಲ್ಲದೇ, ಅಸಮಾನತೆಯನ್ನೇ ಪೋಷಿಶಿಸಿಕೊಂಡು ಬದುಕಿರುವ ಮೋಹನ್ ಭಾಗವತ್ ಅಂತಹವರು, ಆಗಾಗ್ಗೆ ಪ್ರತ್ಯಕ್ಷರಾಗಿ, ಭಾರತ ಹಿಂದೂ ರಾಷ್ಟ್ರ ಆಗಲಿದೆ ಎಂದು ಹೇಳುವುದು ಹಾಸ್ಯಾಸ್ಪದ ಎಂದಿದ್ದಾರೆ.

ಭಾರತವು ಸರ್ವ ಜಾತಿ ಮತ್ತು ಧರ್ಮಗಳನ್ನು ಸಮಾನವಾಗಿ ಒಳಗೊಂಡಂತಹ ಜಾತ್ಯಾತೀತ ದೇಶ. ಇದನ್ನೇ ನಮ್ಮ ದೇಶದ ಸಂವಿಧಾನ ಸ್ಪಷ್ಟವಾಗಿ ಹೇಳಿದೆ. ಆದರೆ, ಒಂದು ದಿನವೂ ಈ ದೇಶದ ಸಂವಿಧಾನದ ಪುಟಗಳಲ್ಲಿ ಏನಿದೆ ಎಂಬುದನ್ನು ಕಣ್ಣೆತ್ತಿಯೂ ನೋಡದೇ ಬರೀ ಮನುಸ್ಮೃತಿಯನ್ನೇ ಭಾಗವತ್ ಅವರಿಗೆ ಧರ್ಮ ಎಂದರೆ ಏನೆಂಬುದು ಈವರೆಗೂ ತಿಳಿದಿಲ್ಲ.
ಈ ನೆಲದಲ್ಲಿ ಸ್ವಾಮಿ ವಿವೇಕಾನಂದರಿಂದ ಹಿಡಿದು ಬಹಳಷ್ಟು ಮಂದಿ ಸಂತರು, ಧರ್ಮ ಎಂದರೆ ಏನು ಎಂಬ ಸಂಗತಿಯನ್ನು ಸ್ಪಷ್ಟವಾಗಿ ಹೇಳಿ ಹೋಗಿದ್ದಾರೆ. ಜೊತೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅಂತಹ ಮಹನೀಯರೂ ತಮಗೆ ಕುಡಿಯಲು ನೀರುಕೊಡದ, ತಮ್ಮನ್ನು ಸಮಾನವಾಗಿ ಕಾಣದ ಹಿಂದೂ ಧರ್ಮದ ಅಮಾನವೀಯತೆಯನ್ನು ಪ್ರಶ್ನಿಸಿ, ಆ ಧರ್ಮವನ್ನೇ ತೊರೆದಿದ್ದಾರೆ.
ಹೀಗಿರುವಾಗ ಭಾರತ ಹಿಂದೂ ರಾಷ್ಟ್ರ ಆಗುತ್ತದೆ ಎಂದು ಆಗಾಗ್ಗೆ ಹೇಳುತ್ತಲೇ ಇರುವ ಮೋಹನ್ ಭಾಗವತ್ ಅವರು ಮೊದಲು ದೇಶದ ಜನರ ಕ್ಷಮೆ ಯಾಚಿಸಲಿ.
ನೊಂದಾಯಿತವಲ್ಲದ ಮತ್ತು ಬ್ರಿಟಿಷರಿಗೆ ಕ್ಷಮಾಪಣಾ ಪತ್ರಗಳನ್ನು ಬರೆದುಕೊಂಡು ಇರುತ್ತಿದ್ದ ಸಾವರ್ಕರ್ ಸಿದ್ಧಾಂತ ಪ್ರೇರಿತ RSS ಸಂಸ್ಥೆಯ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕೆಡಿಸಿ ದೇಶದ ಐಕ್ಯತೆ ಮತ್ತು ಸಾಮರಸ್ಯದ ಆತ್ಮವನ್ನು ಹಾಳು ಮಾಡುತ್ತಿರುವ ಮೋಹನ್ ಭಾಗವತ್ ಅವರು Extra Constitutional Authority ಆಗಿ ವರ್ತಿಸುವ ಪ್ರವೃತ್ತಿಯನ್ನು ಮೊದಲು ನಿಲ್ಲಿಸಲಿ ಎಂದು ಅವರು ಆಗ್ರಹಿಸಿದ್ದಾರೆ.
ಮನುಸ್ಮೃತಿ ಎಣೆದ ಜಾತಿಯ ಜೇಡರ ಬಲೆಯಲ್ಲಿ ದಲಿತರಿಗೆ ಇನ್ನೂ ಸಮಾನತೆ ಇಲ್ಲ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವು ನೆಟ್ಟಿಗರು ಈ ಜಾತಿ ವ್ಯವಸ್ಥೆಯ ಆಧಾರದ ಮೇಲೆ ಅಲ್ಲವೇ ರಾಜಕೀಯ ನಡೆಯುತ್ತಿರುವುದು ಎಂದೂ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications