ಬರ ಪರಿಹಾರ ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯವೇ ಹೊರತು, ಭಿಕ್ಷೆಯಲ್ಲ
ಬೆಂಗಳೂರು, ನವೆಂಬರ್ 10: ಬರ ಪರಿಹಾರಕ್ಕೆ ಹಣ ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯವೇ ಹೊರತು, ಅದು ನಾವು ಕೇಳಿತ್ತಿರುವ ಭಿಕ್ಷೆಯಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
3
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) November 9, 2023
ಯಡಿಯೂರಪ್ಪನವರೆ, ಮಹಾರಾಷ್ಟ್ರ,ತಮಿಳುನಾಡು ಬಿಟ್ಟರೆ ಅತಿ ಹೆಚ್ಚು GST ಕೊಡುಗೆಯಲ್ಲಿ ಕರ್ನಾಟಕವೇ ಮೂರನೆಯದು.
ನಮ್ಮಿಂದ ಹೆಚ್ಚಿನ ತೆರಿಗೆ ಪಾಲು ಪಡೆದಿರುವ ಮೋದಿ ಸರ್ಕಾರ ನಮ್ಮ ರಾಜ್ಯಕ್ಕೆ ಏನು ಕೊಡುಗೆ ನೀಡಿದೆ.? ಹೇಳಿ ನೋಡೋಣ.!
ಬರ ಪರಿಹಾರಕ್ಕೆ ಹಣ ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯವೇ ಹೊರತು, ಅದು ನಾವು ಕೇಳಿತ್ತಿರುವ…
ಈ ಕುರಿತು ಸರಣಿ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್ ಅವರು, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರೆ, ಮಹಾರಾಷ್ಟ್ರ,ತಮಿಳುನಾಡು ಬಿಟ್ಟರೆ ಅತಿ ಹೆಚ್ಚು GST ಕೊಡುಗೆಯಲ್ಲಿ ಕರ್ನಾಟಕವೇ ಮೂರನೆಯದು. ನಮ್ಮಿಂದ ಹೆಚ್ಚಿನ ತೆರಿಗೆ ಪಾಲು ಪಡೆದಿರುವ ಮೋದಿ ಸರ್ಕಾರ ನಮ್ಮ ರಾಜ್ಯಕ್ಕೆ ಏನು ಕೊಡುಗೆ ನೀಡಿದೆ.? ಹೇಳಿ ನೋಡೋಣ ಎಂದು ಪ್ರಶ್ನಿಸಿದ್ದಾರೆ.

ಮಾನ್ಯ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರೆ, ನಿಮ್ಮ ನೇತೃತ್ವದಲ್ಲಿ ಬರ ಅಧ್ಯಯನ ಮಾಡುತ್ತಿರುವುದನ್ನು ನಾನು ಶ್ಲಾಘಿಸುತ್ತೇನೆ. ನಿಮ್ಮ ಮೂಲಕವಾದರೂ ರಾಜ್ಯದ ಜನರ ಸಂಕಷ್ಟ ಮೋದಿಯವರಿಗೆ ಅರಿವಾಗಲಿ. ಈಗಾಗಲೇ ಬರದಿಂದ 31 ಸಾವಿರ ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ. SDRF&NDRF ನಿಯಮದ ಅನುಸಾರ 17,900 ಕೋಟಿ ಪರಿಹಾರ ರಾಜ್ಯಕ್ಕೆ ಬರಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೇಂದ್ರಕ್ಕೆ ಮನವಿ ಕೂಡ ಸಲ್ಲಿಸಿದೆ, ಈ ಪರಿಹಾರದ ಹಣ ನಿಮಗೆ ಕೊಡಿಸಲು ಸಾಧ್ಯವೇ.? ಎಂದು ಬಿ ಎಸ್ ಯಡಿಯೂರಪ್ಪ ಅವರನ್ನ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಯಡಿಯೂರಪ್ಪನವರೆ, ಪುಕ್ಕಟೆ ಭಾಗ್ಯಗಳಿಂದ ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ಹೇಳಿದ್ದೀರಿ. ಜನರಿಗೆ ಆರ್ಥಿಕ ಸ್ವಾತಂತ್ರ್ಯ ಕಲ್ಪಿಸುವುದನ್ನು ನೀವು ಪುಕ್ಕಟೆ ಭಾಗ್ಯ ಎಂದು ಹೇಳಿರುವುದು ಖೇದಕರ, ಹೋಗಲಿ, ನಿಮ್ಮ ಪ್ರಕಾರ ಪುಕ್ಕಟೆ ಭಾಗ್ಯಗಳಿಂದ ರಾಜ್ಯದ ಖಜಾನೆ ಖಾಲಿಯಾಗಿದೆ ಎಂದಿಟ್ಟುಕೊಳ್ಳೋಣ. ಆದರೆ ನಮ್ಮ ರಾಜ್ಯದಿಂದ ಅತಿ ಹೆಚ್ಚು ತೆರಿಗೆ ಪಡೆದು, ನಮ್ಮ ರಾಜ್ಯಕ್ಕೆ ನಿಮ್ಮ ಮೋದಿಯವರು ಒಂದು ನಯಾಪೈಸೆ ಪರಿಹಾರ ಕೊಡದಷ್ಟು ಅಶಕ್ತರಾಗಿದ್ದಾರೆ. ಹಾಗಾದರೆ ಮೋದಿ ಸರ್ಕಾರ ದಿವಾಳಿಯಾಗಿದೆ ಎಂದರ್ಥವಲ್ಲವೇ.? ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications