ಸಿದ್ದರಾಮಯ್ಯ ಕುರಿತು ಅಶ್ವತ್ಥ್ ನಾರಾಯಣ್ ವಿವಾದ: ರಾಜಕೀಯ ನಾಯಕರು ಹೇಳಿದ್ದೇನು?
ಸಿದ್ದರಾಮಯ್ಯ ಮೇಲಿಂದ ಮೇಲೆ ಟಿಪ್ಪು ಬಗ್ಗೆ ಮಾತಾಡ್ತಾರೆ. ಟಿಪ್ಪು ಹಿಂದೂಗಳ ಕಗ್ಗೊಲೆ ಮಾಡಿದ್ದಾರೆ. ಅವನನ್ನ ಕಾಂಗ್ರೆಸ್ ಆದರ್ಶ ಮಾಡಿಕೊಂಡಿದೆ. ರಾಜಕಾರಣದಲ್ಲಿ ಟೀಕೆ ಟಿಪ್ಪಣಿ ಇದ್ದೇ ಇರುತ್ತೆ ಎಂದು ಯತ್ನಾಳ್ ಹೇಳಿದರು.
ಬೆಂಗಳೂರು,ಫೆಬ್ರವರಿ16: ಮಂಡ್ಯದಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಅವರು ಸಿದ್ದರಾಮಯ್ಯ ಅವರನ್ನು ಟಿಪ್ಪು ಸುಲ್ತಾನ್ ರೀತಿ ಹೊಡೆದು ಹಾಕಬೇಕು ಎಂಬ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ಈ ಕುರಿತು ಸಚಿವ ಅಶ್ವತ್ಥ್ ನಾರಾಯಣ ವಿರುದ್ದ ವಿಧಾನಸಭೆಯಲ್ಲಿ ಕಾಂಗ್ರೆಸ್ ನಾಯಕರು ಧರಣಿ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಮೇಲಿಂದ ಮೇಲೆ ಟಿಪ್ಪು ಬಗ್ಗೆ ಮಾತಾಡ್ತಾರೆ. ಟಿಪ್ಪು ಹಿಂದೂಗಳ ಕಗ್ಗೊಲೆ ಮಾಡಿದ್ದಾರೆ. ಅವನನ್ನ ಕಾಂಗ್ರೆಸ್ ಆದರ್ಶ ಮಾಡಿಕೊಂಡಿದೆ. ರಾಜಕಾರಣದಲ್ಲಿ ಟೀಕೆ ಟಿಪ್ಪಣಿ ಇದ್ದೇ ಇರುತ್ತೆ. ಹತ್ಯೆ ಮಾಡುವ ವಿಚಾರ ಯಾರೂ ಮಾತನಾಡಬಾರದು ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಇಂತಹ ಶಬ್ದಗಳು ರಾಜಕಾರಣಕ್ಕೆ ಶೋಭೆ ತರುವುದಿಲ್ಲ. ಹಿಂದೆ ನನಗೂ ಒಬ್ಬ ಗೋ ಹತ್ಯೆ ಕಾಯ್ದೆ ತಂದ್ರೆ, ಬಿಜಾಪುರ ಶಾಸಕನನ್ನ ಹತ್ಯೆ ಮಾಡ್ತೀನಿ ಅಂತ ಧಮಕಿ ಹಾಕಿದ್ದ. ಸಿದ್ಧಾಂತದ ಬಗ್ಗೆ ಎಷ್ಟೇ ಮಾತನಾಡಲಿ, ಏನೇ ಮಾತನಾಡಲಿ. ವ್ಯಕ್ತಿಯನ್ನ ಹತ್ಯೆ ಮಾಡುವ ಬಗ್ಗೆ ಮಾತನಾಡೋದು ಯಾರಿಗೂ ಶೋಭೆ ತರುವುದಿಲ್ಲ ಎಂದು ಯತ್ನಾಳ್ ಹೇಳಿದರು.

ಸಿದ್ದರಾಮಯ್ಯ ರಾಜಕೀಯ ವಿರೋಧಿ ಮಾತ್ರ. ಶತ್ರು ಅಲ್ಲ: ಸಿ.ಟಿ ರವಿ
ಈ ಕುರಿತು ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಸಿದ್ದರಾಮಯ್ಯ ರಾಜಕೀಯ ವಿರೋಧಿ ಮಾತ್ರ. ಶತ್ರು ಅಲ್ಲ. ಸಚಿವ ಅಶ್ವಥ್ ನಾರಾಯಣ್ ಮಾತುಗಳನ್ನ ಒಪ್ಪುವುದಿಲ್ಲ. ಸಿದ್ಧರಾಮಯ್ಯಗೆ ಭಗವಂತ ದೀರ್ಘಾಯಿಷ್ಯ ಕೊಡಲಿ ಎಂದು ಪ್ರಾರ್ಥಿಸಿದರು.
ಹಾಗೆಯೇ ಕಾಂಗ್ರೆಸ್ ವಿರುದ್ದ ವಾಗ್ದಾಳಿ ಮುಂದುವರೆಸಿದ ಶಾಸಕ ಸಿ.ಟಿ ರವಿ, ದೇಶ ಒಡೆದಿದ್ದು ಕಾಂಗ್ರೆಸ್ ನವರು.ಜಾತಿವಾರು ವಿಭಜನೆ ಮಾಡಿದ್ದ ಕಾಂಗ್ರೆಸ್. ಭಾಷೆ ಆಧಾರದಲ್ಲಿ ದೇಶ ವಿಭಜನೆ ಮಾಡಿದ್ರು. ಭ‍್ರಷ್ಟಾಚಾರದ ಬೀಜ ಬಿತ್ತಿದ್ದು ಕಾಂಗ್ರೆಸ್ ನವರು ಎಂದು ಹೇಳಿದರು.

ನನ್ನ ಬಾಯಿ ಕೊಳಕು ಮಾಡಿಕೊಳ್ಳು ಇಚ್ಛಿಸುವುದಿಲ್ಲ: ಡಿ ಕೆ ಶಿವಕುಮಾರ್
ಅವರೇನು ಕುರಿಯೇ? ಇತಿಹಾಸದಲ್ಲಿ ಟಿಪ್ಪು ಅವರ ತಲೆ ತೆಗೆದಿರುವ ಬಗ್ಗೆ ದಾಖಲೆ ಎಲ್ಲಿವೆ? ನಾನು ಆ ವ್ಯಕ್ತಿಯ ಬಗ್ಗೆ ಮಾತನಾಡಿ ನನ್ನ ಬಾಯಿ ಕೊಳಕು ಮಾಡಿಕೊಳ್ಳು ಇಚ್ಛಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಿಡಿಕಾರಿದ್ದಾರೆ
ನಾನು ಅಶ್ವತ್ಥ್ ನಾರಾಯಣ ಅವರಿಗೆ ಉತ್ತರವನ್ನು ನೀಡುವುದಿಲ್ಲ, ಅವರ ಹೇಳಿಕೆ ಖಂಡಿಸುವುದಿಲ್ಲ. ಅವರ ಹೇಳಿಕೆಗೆ ಬೊಮ್ಮಾಯಿ, ಯಡಿಯೂರಪ್ಪನವರು, ನಡ್ಡಾ ಅವರು ಉತ್ತರ ನೀಡಬೇಕು. ನಾನು ಆ ವ್ಯಕ್ತಿಯ ಬಗ್ಗೆ ಮಾತನಾಡಿ ನನ್ನ ಬಾಯಿ ಕೊಳಕು ಮಾಡಿಕೊಳ್ಳು ಇಚ್ಛಿಸುವುದಿಲ್ಲ. ಇನ್ನು ಟಿಪ್ಪು ಅವರ ವಿಚಾರದಲ್ಲಿ ರಾಷ್ಟ್ರಪತಿಗಳು ಬಂದು ಏನು ಮಾತನಾಡಿದ್ದಾರೆ ಎಂಬ ದಾಖಲೆಗಳಿವೆ ಎಂದರು.

ದ್ವೇಷ ಮತ್ತು ಹಿಂಸೆಯೇ ಅವರ ಹಿಡನ್ ಅಜೆಂಡಾ: ಹೆಚ್ ಡಿ ಕುಮಾರಸ್ವಾಮಿ
ಬಿಜೆಪಿ ನಾಯಕರ ಮಾತು ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ. ದ್ವೇಷ ಮತ್ತು ಹಿಂಸೆಯೇ ಅವರ ಹಿಡನ್ ಅಜೆಂಡಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಆವೇಶದಲ್ಲಿ ಮಾತಾಡುವಾಗ ಅವರ ಹೃದಯದಲ್ಲಿರೋದು ಹೊರಗೆ ಬರುತ್ತದೆ, ದ್ವೇಷ ಮತ್ತು ಹಿಂಸೆಯೇ ಅವರ ಹಿಡನ್ ಅಜೆಂಡಾ, ಜನರ ಮುಂದೆ ಮಾತ್ರ ಮುಖವಾಡ ಧರಿಸಿ ಬರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹರಿಹಾಯ್ದರು.

ಸಿದ್ದರಾಮಯ್ಯರನ್ನೇ ಹೊಡೆದು ಹಾಕಿ ಅನ್ನೋದು ತಪ್ಪು: ಸಿಎಂ ಇಬ್ರಾಹಿಂ
ಅಶ್ವಥ್ ನಾರಾಯಣ್ ನಿನಗೆ ಏನಾಗಿದೆ. ಸಿದ್ದರಾಮಯ್ಯರನ್ನೇ ಹೊಡೆದು ಹಾಕಿ ಅನ್ನೋದು ತಪ್ಪು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು. ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯ ಬೇರೆ ಪಾರ್ಟಿ ಇರಬಹುದು. ಅದ್ರೆ ಅವರು ವಿರೋಧ ಪಕ್ಷದ ನಾಯಕರಾಗಿದ್ದಾರೆ ಡಿಜಿಯವರು ಎಫ್ ಐಆರ್ ಹಾಕಿ ಕ್ರಿಮಿನಲ್ ಕೇಸ್ ದಾಖಲಿಸಲಿ ಎಂದು ಸಿಎಂ ಇಬ್ರಾಹಿಂ ಆಗ್ರಹಿಸಿದರು












Click it and Unblock the Notifications