Karnataka Election: ನಯಾಪೈಸೆ ಸಾಲಶೂಲವಿಲ್ಲದ ನಮ್ಮ ಜನಪ್ರತಿನಿಧಿಗಳು
ಬೆಂಗಳೂರು ಮಾರ್ಚ್ 27: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು ದಿನಾಂಕ ಘೋಷಣೆಯಾಗುವುದೊಂದೆ ಬಾಕಿ ಇದೆ. ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಗೆ ಸಜ್ಜಾಗಿದ್ದು, ಕಳೆದ ಬಾರಿ ಚುನಾವಣೆಯಲ್ಲಿ ಗೆದ್ದ ಶಾಸಕರು ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಕಾಯುತ್ತಿದ್ದಾರೆ. 2018ರ ಚುನಾವಣೆಯಲ್ಲಿ ಸಲ್ಲಿಸಿದ ಅಫಿಡವಿಟ್ ಪ್ರಕಾರ, 2018 ರ ಚುನಾವಣೆಯಲ್ಲಿ ಗೆದ್ದ ಶಾಸಕರಲ್ಲಿ 97 ಪ್ರತಿಶತದಷ್ಟು ಜನರು ಕೋಟ್ಯಾಧಿಪತಿಗಳು ಆಗಿದ್ದಾರೆ. ಈ ಪೈಕಿ ಕೆಲವರು ಸಾಲವನ್ನೇ ಮಾಡಿಲ್ಲ. ಆ ಜನಪ್ರತಿನಿಧಿಗಳು ಯಾರು? ಅವರ ವಿವರ ಈ ಕೆಳಗಿನಂತಿದೆ.
2018ರ ಚುನಾವಣೆಯಲ್ಲಿ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಕುಡಚಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪಿ. ರಾಜೀವ್ 1,08,60,392 ರೂ. ಆಸ್ತಿಯನ್ನು ಹೊಂದಿದ್ದಾರೆ. ಆದರೆ ಅವರು ಯಾವುದೇ ಸಾಲವನ್ನು ಮಾಡಿಲ್ಲ. ಅದೇ ರೀತಿ ಬೆಳಗಾವಿ ದಕ್ಷಿಣ ಕ್ಷೇತ್ರದ ಅಭಯಕುಮಾರ ಪಾಟೀಲ್ 9,57,73,303 ರೂ. ಆಸ್ತಿಯನ್ನು ಹೊಂದಿದ್ದರೆ, ಯಾವುದೇ ಸಾಲವಿರುವುದಾಗಿ ದಾಖಲಿಸಿಲ್ಲ. ಹೀಗೆ ಕೆಲವರು ಸಾಲವನ್ನೇ ಹೊಂದಿರದ ಜನಪ್ರತಿನಿಧಿಗಳ ಪಟ್ಟಿ ಇಲ್ಲಿದೆ.

| ಸಂಖ್ಯೆ | ಕ್ಷೇತ್ರದ ಹೆಸರು | ಹೆಸರು | ಪಕ್ಷದ ಹೆಸರು | ಆಸ್ತಿ | ಸಾಲರಹಿತ |
| 1 | ಕುಡಚಿ | ಪಿ.ರಾಜೀವ್ | ಬಿಜೆಪಿ | 1,08,60,392 | 0 |
| 2 | ಬೆಳಗಾವಿ ದಕ್ಷಿಣ | ಅಭಯಕುಮಾರ ಪಾಟೀಲ್ | ಬಿಜೆಪಿ | 9,57,73,303 | 0 |
| 3 | ಮುಧೋಳ | ಗೋವಿಂದ ಮಕ್ತಪ್ಪ ಕಾರಜೋಳ | ಬಿಜೆಪಿ | 2,08,35,222 | 0 |
| 4 | ಜಮಖಂಡಿ | ಸಿದ್ದು ಬಿ ನ್ಯಾಮಗೌಡ | INC | 9,73,42,544 | 0 |
| 5 | ಇಂಡಿ> | ಯಶವಂತರಾಯಗೌಡ ಪಾಟೀಲ್ | INC | 90,75,288 | 0 |
| 6 | ಶೋರಾಪುರ | ನರಸಿಂಹನಾಯಕ್ | ಬಿಜೆಪಿ | 8,45,90,840 | 0 |
| 7 | ಸಿಂಧನೂರು | ವೆಂಕಟರಾವ್ ನಾಡಗೌಡ | ಜೆಡಿ(ಎಸ್) | 6,18,69,813 | 0 |
| 8 | ಯಲಬುರ್ಗಾ | ಹಾಲಪ್ಪ ಆಚಾರ್ | ಬಿಜೆಪಿ | 4,08,40,811 | 0 |
| 9 | ಸಿರ್ಸಿ | ಹೆಗಡೆ ವಿಶ್ವೇಶ್ವರ್ | ಬಿಜೆಪಿ | 7,46,18,553 | 0 |
| 10 | ಹಂಗಲ್ | ಚನ್ನಬಸಪ್ಪ ಮಹಾಲಿಂಗಪ್ಪ ಉದಾಸಿ | ಬಿಜೆಪಿ | 4,00,94,000 | 0 |
| 11 | ಕೂಡ್ಲಿಗಿ | ಎನ್ ವೈ ಗೋಪಾಲಕೃಷ್ಣ | ಬಿಜೆಪಿ | 4,65,42,876 | 0 |
| 12 | ಹೊಳಲ್ಕೆರೆ | ಎಂ ಚಂದ್ರಪ್ಪ | ಬಿಜೆಪಿ | 9,39,51,852 | 0 |
| 13 | ಚನ್ನಗಿರಿ | ಕೆ ಮಾಡಾಳು ವಿರೂಪಾಕ್ಷಪ್ಪ | ಬಿಜೆಪಿ | 5,73,05,811 | 0 |
| 14 | ತುಮಕೂರು ಗ್ರಾಮಾಂತರ | ಗೌರಿಶಂಕರಸ್ವಾಮಿ ಡಿ ಸಿ | ಜೆಡಿ(ಎಸ್) | 1,86,49,437 | 0 |
| 15 | ಕೋಲಾರ | ಕೆ ಶ್ರೀನಿವಾಸಗೌಡ | ಜೆಡಿ(ಎಸ್) | 8,85,53,676 | 0 |
| 16 | ಪುಲಕೇಶಿನಗರ | ಆರ್. ಅಖಂಡ ಶ್ರೀನಿವಾಸ್ ಮೂರ್ತಿ | INC | 20,16,95,000 | 0 |
| 17 | ರಾಜಾಜಿ ನಗರ | ಎಸ್ ಸುರೇಶ್ ಕುಮಾರ್ | ಬಿಜೆಪಿ | 3,58,41,660 | 0 |
| 18 | ಆನೇಕಲ್ | ಬಿ.ಶಿವಣ್ಣ | INC | 21,01,37,849 | 0 |
| 19 | ಅರಕಲಗೂಡು | ಎ ಟಿ ರಾಮಸ್ವಾಮಿ | ಜೆಡಿ(ಎಸ್) | 4,08,11,816 | 0 |
| 20 | ಮಂಗಳೂರು | ಯು ಟಿ ಅಬ್ದುಲ್ ಖಾದರ್ ಅಲಿ ಫರೀದ್ | INC | 2,47,16,913 | 0 |
| 21 | ಕೃಷ್ಣರಾಜ | ಎಸ್ ಎ ರಾಮದಾಸ್ | ಬಿಜೆಪಿ | 39,69,351 | 0 |
| 22 | ಟಿ ನರಸೀಪುರ | ಅಶ್ವಿನ್ ಕುಮಾರ್.ಎಂ | ಜೆಡಿ(ಎಸ್) | 88,79,846 | 0 |
| 23 | ಕೊಳ್ಳೇಗಾಲ | ಎನ್ ಮಹೇಶ್ | ಬಿಎಸ್ಪಿ | 75,66,426 | 0 |












Click it and Unblock the Notifications