Milk Shortage: ಬೆಂಗಳೂರು ಸೇರಿ ಕರ್ನಾಟಕದಲ್ಲಿ ಹಾಲಿನ ಅಭಾವ, ಬೇರೆಡೆ ಪೂರೈಕೆ ನಿಲ್ಲಿಸಲು ಒತ್ತಾಯ
ಕರ್ನಾಟಕ ರಾಜ್ಯದಾದ್ಯಂತ ಹಾಲಿನ ಕೊರತೆ ಹೆಚ್ಚಾಗಿದೆ. ಈ ಬಗ್ಗೆ ಹಾಲು ಉತ್ಪಾದನೆ, ಪೂರೈಕೆ ಬಗ್ಗೆ ಖಚಿತಪಡಿಸುವಂತೆ ಆಗ್ರಹವು ಕೇಳಿ ಬಂದಿದೆ.
ಬೆಂಗಳೂರು, ಮಾರ್ಚ್ 09: ಕರ್ನಾಟಕ ರಾಜ್ಯದಾದ್ಯಂತ ಹಾಲಿನ ಕೊರತೆ ಹೆಚ್ಚಾಗಿದೆ. ಈ ಬಗ್ಗೆ ಹಾಲು ಉತ್ಪಾದನೆ, ಪೂರೈಕೆ ಬಗ್ಗೆ ಖಚಿತಪಡಿಸುವಂತೆ ಆಗ್ರಹವು ಕೇಳಿ ಬಂದಿದೆ.
ನಂದಿನಿಯ ಮೇಲೆ ಅಮಿತ್ ಶಾ ಅವರ ವಕ್ರದೃಷ್ಟಿ ಬಿದ್ದಿದ್ದಕ್ಕೂ, ಹಾಲಿನ ಅಭಾವ ಸೃಷ್ಟಿಯಾಗಿದ್ದಕ್ಕೂ ಸಂಬಂಧವಿದೆಯೇ @BSBommai ಅವರೇ?
— Karnataka Congress (@INCKarnataka) March 9, 2023
ರಾಜ್ಯದಲ್ಲಿ ಹಾಲಿನ ಉತ್ಪಾದನೆ ಕುಂಠಿತವಾಗಿದೆಯೇ ಅಥವಾ ನಂದಿನಿ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿಸಲಾಗಿದೆಯೇ?
ಇದೆಲ್ಲವೂ ನಂದಿನಿಯನ್ನು ಗುಜರಾತಿನ ಅಮುಲ್ಗೆ ಬಲಿ ಕೊಡಲು ಪೂರ್ವಸಿದ್ಧತೆಯೇ @BJP4Karnataka?
ಬೇಸಿಗೆ ಆರಂಭವಾಗಿದ್ದು, ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಬೇಡಿಕೆಯಷ್ಟು ಸಮರ್ಪಕವಾಗಿ ಹಾಲು ಪೂರೈಕೆ ಆಗುತ್ತಿಲ್ಲ. ಹೀಗೆಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘವು (BBHA) ಕರ್ನಾಟಕ ಹಾಲು ಒಕ್ಕೂಟ (KMF) ಮತ್ತು ರಾಜ್ಯ ಸರ್ಕಾರಕ್ಕೆ ಕೆಎಂಎಪ್ ಉತ್ಪನ್ನಗಳ ಸ್ಥಿರತೆ, ಪೂರೈಕೆ ಮತ್ತು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮನವಿ ಮಾಡಿದೆ.

ಹಾಲು ಮತ್ತು ಹಾಲಿನ ಉತ್ಪನ್ನಗಳ ಬಳಕೆಯಲ್ಲಿನ ಏರಿಕೆ ಈ ಬಿಕ್ಕಟ್ಟನ್ನು ಸೃಷ್ಟಿಸರಿಬಹುದು ಅಂತಲೂ ಅಂದಾಜಿಸಲಾಗಿದೆ. ಬುಧವಾರ ಕರ್ನಾಟಕ ರಾಜ್ಯದಲ್ಲಿ ಸುಮಾರು 41 ಲಕ್ಷ ಲೀಟರ್ ಹಾಲು ಬಳಕೆಯಾಗಿದೆ. ಆ ಪೈಕಿ ಬೆಂಗಳೂರು ಒಂದೇ 23 ಲಕ್ಷ ಲೀಟರ್ ಹಾಲು ಬಳಕೆ ಮಾಡಿದೆ. ಆದರೆ ಬೆಂಗಳೂರಿಗೆ 25 ಲಕ್ಷ ಹಾಲು ಅವಶ್ಯಕತೆ ಇದೆ ಎನ್ನಲಾಗಿದೆ. 2022 ರಲ್ಲಿ ಕರ್ನಾಟಕ ನಿತ್ಯ ಸರಿಸುಮಾರು 84 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತಿತ್ತು, ಅದು ಈಗ ದಿನಕ್ಕೆ 71ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದೆ ಎಂದು ತಿಳಿದು ಬಂದಿದೆ.
ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ ರಾವ್ ಅವರು, ನಾವು ಮೊದಲು ದೇಶಿಯ ಅಗತ್ಯತೆಗಳನ್ನು ನೋಡಿಕೊಂಡು ಇಲ್ಲಿನ ಮಾರುಕಟ್ಟೆಗೆ ಬೇಡಿಕೆಯಷ್ಟು ಹಾಲು ಪೂರೈಸಬೇಕು. ಬಳಿಕವೇ ಹೆಚ್ಚಿನದನ್ನು ಬೇರೆಡೆ ಪೂರೈಸಬೇಕು. ಇದನ್ನು ಮನಗಂಡು ಸರ್ಕಾರ ತಕ್ಷಣವೇ ಇತರ ರಾಜ್ಯಗಳಿಗೆ ಹಾಲು ನೀಡುವುದನ್ನು ನಿಲ್ಲಿಸಿ ಸ್ಥಳೀಯವಾಗಿ ಪೂರೈಕೆ ಮಾಡಬೇಕು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಸುಮಾರು 41 ನಲವತ್ತೊಂದು ಲಕ್ಷ ಲೀಟರ್ ಹಾಲನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲಾಗುತ್ತದೆ. ಉಳಿದ 30 ಲಕ್ಷ ಲೀಟರ್ ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ ಮತ್ತು ಸುವಾಸನೆಯ ಹಾಲಿನ ಉತ್ಪಾದನೆಗೆ ಬಳಸಲ್ಪಡುತ್ತದೆ. ಈ ಹಾಲಿನ ಉತ್ಪನ್ನಗಳಿಗೆ ಬೇಸಿಗೆ ವೇಳೆ ಹೆಚ್ಚಿನ ಬೇಡಿಕೆ ಇರುತ್ತದೆ. ಇದನ್ನು ಹೊರತುಪಡಿಸಿ, ನಾವು (ಸಂಘಗಳು) ಒಪ್ಪಂದಗಳ ಪ್ರಕಾರ ಇತರ ರಾಜ್ಯಗಳಿಗೆ ಹಾಲು ಪೂರೈಸಬೇಕಿದೆ ಎಂದು ಕರ್ನಾಟಕ ಹಾಲು ಉತ್ಪಾದಕರ ಸಂಘದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

2022ರಲ್ಲಿ ಪ್ರತಿದಿನ ಏಳು ಲಕ್ಷ ಕೆಜಿ ಮೊಸರು ಮಾರಾಟವಾಗುತ್ತಿತ್ತು. ನೆನ್ನೆ ಬುಧವಾರ KMF ಒಂದೇ ದಿನದಲ್ಲಿ 10 ಲಕ್ಷ ಕೆಜಿ ಮೊಸರು ಮಾರಾಟ ಮಾಡಿ ದಾಖಲೆ ಬರೆದಿದೆ. ಆಂಧ್ರಪ್ರದೇಶ ಸರ್ಕಾರವು ನಡೆಸುತ್ತಿರುವ 'ವಿಜಯ ವಜ್ರ' ಯೋಜನೆಗೆ ಸುಮಾರು 40,000 ಲೀಟರ್‌ಗಳನ್ನು ಸರಬರಾಜು ಮಾಡಲಾಗುತ್ತಿದೆ. ಅಂಗನವಾಡಿ ಮಕ್ಕಳಿಗೆ ಉಚಿತ ವಿತರಣೆ.
ಕರ್ನಾಟಕ ಸರ್ಕಾರ ನಡೆಸುತ್ತಿರುವ ಕ್ಷೀರ ಭಾಗ್ಯ ಕಾರ್ಯಕ್ರಮಕ್ಕೆ ಇನ್ನೂ 50,000 ಲೀಟರ್ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೂಲಕ ಕೆಎಂಎಫ್‌ಗೆ ವಾರ್ಷಿಕವಾಗಿ ಬೆಂಗಳೂರಿನಲ್ಲಿ ಬೇಡಿಕೆಯಲ್ಲಿ ಶೇಕಡಾ 12ರಷ್ಟು ಹಾಗೂ ಕರ್ನಾಟಕದಾದ್ಯಂತ ಶೇಕಡಾ 22ರಷ್ಟು ಬೇಡಿಕೆ ಸೃಷ್ಟಿಯಾಗಿದೆ. ಇದು ಅಗತ್ಯದಷ್ಟು ಪೂರೈಕೆಗೆ ಸವಾಲಾಗಿದೆ.












Click it and Unblock the Notifications