ಸರ್ಜಾ ಪರ ನಿಂತ ನಟಿ ಹರ್ಷಿಕಾ ಪೂಣಚ್ಚಗೆ ಬೆದರಿಕೆ, ಹಣದ ಆಮಿಷ
ಬೆಂಗಳೂರು, ಅಕ್ಟೋಬರ್ 27: ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿ ಆಗಿದ್ದ ನಟ ಅರ್ಜುನ್ ಸರ್ಜಾ ಪರ ನಿಂತಿದ್ದ ನಟಿ ಹರ್ಷಿಕಾ ಪೂಣಚ್ಚ ಅವರಿಗೆ ಬೆದರಿಕೆ ಸಂದೇಶಗಳು ಬರುತ್ತಿವೆ ಹಾಗೂ ಹಣದ ಆಮಿಷ ಸಹ ಒಡ್ಡಾಲಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಅಳಲು ತೋಡಿಕೊಂಡಿರುವ ನಟಿ ಹರ್ಷಿಕಾ ಪೂಣಚ್ಚ ಅವರು, 'ನನಗೆ ಎರಡು ದಿನಗಳಿಂದ ಹೆಸರಾಂತ ವ್ಯಕ್ತಿಗಳಿಂದ ಬೆದರಿಕೆ ಸಂದೇಶಗಳು, ಕರೆಗಳು ಬರುತ್ತಿವೆ, ನನ್ನನ್ನು ಸುಮ್ಮನಾಗಿಸಲು ಹಣದ ಆಮೀಷ ಒಡ್ಡುತ್ತಿದ್ದಾರೆ' ಎಂದು ಹೇಳಿದ್ದಾರೆ.
ಶ್ರುತಿ ಹರಿಹರನ್ ಅವರು ಅರ್ಜುನ್ ಸರ್ಜಾ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ ಪ್ರಕರಣಕ್ಕೆ ಸಂಬಧಿಸಿದಂತೆ ಹರ್ಷಿಕಾ ಪೂಣಚ್ಚ ಅವರು ಅರ್ಜುನ್ ಸರ್ಜಾ ಪರ ವಹಿಸಿ ಹೇಳಿಕೆಗಳನ್ನು ನೀಡಿದ್ದರು. ಇದೇ ಕಾರಣಕ್ಕೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಅವರು ಹೇಳಿದ್ದಾರೆ.
| Array |
'ಪೊಲೀಸ್ ದೂರು ನೀಡುತ್ತೇನೆ'
'ಬೆದರಿಕೆ ಕರೆ, ಸಂದೇಶಗಳು ಹೀಗೆ ಮುಂದುವರೆದರೆ ನಾನು ಪೊಲೀಸ್ ಠಾಣೆ ಮೆಟ್ಟಿಲೇರುತ್ತೇನೆ. ಕೆಚ್ಚೆದೆಯ ಕನ್ನಡಿತಿಯಾದ ನಾನು ಸದಾ ಸತ್ಯದ ಪರ' ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
| Array |
ಅವಕಾಶ ಎಲ್ಲಾ ಮಾಡಿದವರು ಆರೋಪಿಸುತ್ತಿದ್ದಾರೆ
ಜೊತೆಗೆ ಉದ್ದದ ಪತ್ರವನ್ನು ಬರೆದಿರುವ ನಟಿ ಹರ್ಷಿಕ ಪೂಣಚ್ಚ, ಕೆಲವು ವರ್ಷಗಳ ಹಿಂದೆ, ಹಣ, ಅವಕಾಶ, ಶ್ರೀಮಂತ ಬದುಕಿಗಾಗಿ ಎಲ್ಲವನ್ನೂ ಮಾಡಿದ ಅವಕಾಶವಾದಿ ಹೋರಾಟಗಾರ್ತಿ ನಟಿಯರೇ ಇಂದು ಅದೇ ಗಂಡಸರ ವಿರುದ್ಧ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಬರೆದಿದ್ದಾರೆ.
| Array |
ಗಾಂಜಾ ಸೇದುತ್ತಿದ್ದ ಹೋರಾಟಗಾರ್ತಿ ನಟಿಯರು
ಇಂದು ಇತರರ ಮೇಲೆ ಆರೋಪ ಮಾಡುತ್ತಿರುವ ನಟಿಯರೇ ವಿದೇಶಗಳಲ್ಲಿ ಖ್ಯಾತ ನಿರ್ಮಾಪಕರುಗಳ ಜೊತೆ ಗಾಂಜಾ ಸೇದುತ್ತಾ, ಲಲ್ಲೆ ಹೊಡೆಯುತ್ತಿದ್ದುದನ್ನು, ನಾನು ಹೇಳಲಾಗದ ಕಾರ್ಯಗಳನ್ನು ಮಾಡಿರುವುದನ್ನು ನಾನು ಕಂಡಿದ್ದೇನೆ ಎಂದು ಹರ್ಷಿಕಾ ಹೇಳಿದ್ದಾರೆ. ಜೊತೆಗೆ ಕೆಲವು ವಿಡಿಯೋಗಳನ್ನೂ ನೋಡಿದ್ದೇನೆ ಎಂದು ಸಹ ಅವರು ಬರೆದುಕೊಂಡಿದ್ದಾರೆ.

ಬಾಂಬ್ ಸಿಡಿಸಿರುವ ಹರ್ಷಿಕಾ
#ಮೀಟೂ ನಟಿಯರು ಗಾಂಜಾ ಸೇದುತ್ತಾ, ಯಾವ, ಯಾವ ನಟರ ಹೆಸರನ್ನು ಹೇಗೆ ಹಾಳು ಮಾಡಬಹುದು ಎಂದು ಮಾತನಾಡಿಕೊಳ್ಳುತ್ತಿದ್ದ ವಿಡಿಯೋವನ್ನು ಸಹ ನಾನು ನೋಡಿದ್ದೇನೆ ಎಂದು ಹೊಸ ಬಾಂಬ್ ಅನ್ನು ಹರ್ಷಿಕಾ ಟ್ವಿಟ್ಟರ್‌ನಲ್ಲಿ ಸಿಡಿಸಿದ್ದಾರೆ.

ಎರಡೂ ಕೈ ಇಂದ ಮಾತ್ರವೇ ಚಪ್ಪಾಳೆ
ಎರಡೂ ಕೈ ಇಲ್ಲದೆ ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ, ನಟಿಯರು ಅವಕಾಶ ನೀಡಿದ್ದಕ್ಕಾಗಿಯೇ ಲೈಂಗಿಕ ಕಿರುಕುಳ ಆಗಿವೆ. ಈಗ ಆರೋಪಿಸುತ್ತಿರುವ ನಟಿಯರು ಕಿರುಕುಳ ನಡೆದಾಗಲೇ ನಮಗಿದು ಸರಿ ಬರುತ್ತಿಲ್ಲ ಎಂದು ಹೇಳಿದಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ನಾನು ಹಾಗೆ ಹೇಳಿದ್ದೇನೆ ಆದರೂ ನಾನು ಚಿತ್ರರಂಗದಲ್ಲಿ ಇಷ್ಟು ವರ್ಷ ಉಳಿದುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.












Click it and Unblock the Notifications