ಕಳಚಿದ ಕೊಂಡಿ: ಅಲ್ಲಿಗೆ ಕರ್ನಾಟಕ ಮೂಲದ ಮತ್ತೊಂದು ರಾಷ್ಟ್ರೀಕೃತ ಬ್ಯಾಂಕ್ ಕಥೆ ಮುಕ್ತಾಯ
ಏಪ್ರಿಲ್ ಒಂದು, ಕೊರೊನಾ ಭೀತಿಯ ನಡುವೆ 2020-21ರ ಸಾಲಿಗೆ ಹೊಸ ಆರ್ಥಿಕ ವರ್ಷ ಆರಂಭಗೊಂಡಿದೆ. ಅದ್ಯಾಕೆ ಇದೇ ದಿನವನ್ನು 'ಮೂರ್ಖರ ದಿನ' ಎಂದು ಕರೆಯಲಾಗುತ್ತೋ ಗೊತ್ತಿಲ್ಲ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಂಚೂಣಿಯಲ್ಲಿದ್ದ ಕರ್ನಾಟಕದ ಮೂಲದ ಮಗುದೊಂದು ಬ್ಯಾಂಕ್ ಇಂದಿನಿಂದ (ಏ 1) ಮುಂಬೈ ಮೂಲದ ಬ್ಯಾಂಕ್ ಜೊತೆ ಅಧಿಕೃತವಾಗಿ ವಿಲೀನಗೊಂಡಿದೆ.
ಅಲ್ಲಿಗೆ ನಾಲ್ಕು ರಾಷ್ಟ್ರೀಕೃತ ಬ್ಯಾಂಕುಗಳ ತವರು ಮನೆಯಾಗಿದ್ದ ಕರ್ನಾಟಕಕ್ಕೆ, ತನ್ನದೆಂದು ಹೇಳಿಕೊಳ್ಳಲು ಈಗ ಉಳಿದಿರುವುದು ಒಂದು ಬ್ಯಾಂಕ್ ಮಾತ್ರ.
ಇಂದಿನಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ವೈಯಕ್ತಿಕ ಆದಾಯ ತೆರಿಗೆಯ ಹೊಸ ಸ್ಲ್ಯಾಬ್ ಅಡಿಯಲಿ ಬರಲಿದೆ. ಜೊತೆಗೆ, ಈ ಹಿಂದೆ ಘೋಷಿಸಲಾದ ಬ್ಯಾಂಕ್ ವಿಲೀನ ಇಂದಿನಿಂದ ಅಧಿಕೃತವಾಗಲಿದೆ.

ಲಾಭದಲ್ಲಿದ್ದ ವಿಜಯಾ ಬ್ಯಾಂಕ್, ನಷ್ಟದಲ್ಲಿದ ಬ್ಯಾಂಕ್ ಆಫ್ ಬರೋಡಾ
ಈ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆ ವಿಲೀನಗೊಂಡಿತ್ತು. ಇದಾದ ನಂತರ, ವಿಜಯಾ ಬ್ಯಾಂಕ್, ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡ ಜೊತೆ ಮರ್ಜ್ ಆಗಿತ್ತು. ಲಾಭದಲ್ಲಿದ್ದ ವಿಜಯಾ ಬ್ಯಾಂಕ್, ನಷ್ಟದಲ್ಲಿದ ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನಗೊಂಡಿದ್ದು ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು. ದೇನಾ ಬ್ಯಾಂಕ್ ಕೂಡಾ ಇದರ ಜೊತೆ ವಿಲೀನಗೊಂಡಿತ್ತು.

ಕಾರ್ಪೋರೇಷನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಇಂಡಿಯಾ ಜೊತೆ ವಿಲೀನ
ಈಗ, ಮಂಗಳೂರಿನಲ್ಲಿ ಹೆಡ್ ಕ್ವಾಟ್ರಸ್ ಹೊಂದಿರುವ ಕಾರ್ಪೋರೇಷನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಅಧಿಕೃತವಾಗಿ ಇಂದು (ಏ 1) ವಿಲೀನಗೊಂಡಿದೆ. ಆಂಧ್ರ ಬ್ಯಾಂಕ್ ಕೂಡಾ ಯುಬಿಐ ಜೊತೆ ವಿಲೀನಗೊಂಡಿದೆ. ಇದು ಹೈದರಾಬಾದ್ ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ.

ಭಾರತದ ಹಳೆಯ ಬ್ಯಾಂಕ್ ಗಳಲ್ಲಿ ಒಂದಾದ ಕಾರ್ಪೋರೇಷನ್ ಬ್ಯಾಂಕ್
ಭಾರತದ ಹಳೆಯ ಬ್ಯಾಂಕ್ ಗಳಲ್ಲಿ ಒಂದಾದ ಕಾರ್ಪೋರೇಷನ್ ಬ್ಯಾಂಕ್ 12.03.1906ರಂದು ಉಡುಪಿಯಲ್ಲಿ, ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಸಿಂ ಸಾಹೇಬ್ ಬಹಾದೂರ್ ನೇತೃತ್ವದಲ್ಲಿ ಆರಂಭಗೊಂಡಿತ್ತು. ತದನಂತರ ಬ್ಯಾಂಕಿನ ಕೇಂದ್ರ ಕಚೇರಿ ಮಂಗಳೂರಿಗೆ ಶಿಫ್ಟ್ ಆಯಿತು. ಸಾರ್ವಜನಿಕ ವಲಯದಲ್ಲಿ ಎರಡನೇ ಅತಿದೊಡ್ಡ ಎಟಿಎಂ ಹೊಂದಿರುವ ಬ್ಯಾಂಕ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಬ್ಯಾಂಕ್, ಸುಮಾರು 2,200 ಶಾಖೆಯನ್ನು ಹೊಂದಿದೆ. ಇನ್ನು ಈ ಬ್ಯಾಂಕ್ ನೆನಪು ಮಾತ್ರ.

ಕರ್ನಾಟಕ ಮೂಲದ ಬ್ಯಾಂಕ್ ಎಂದು ಹೇಳಿಕೊಳ್ಳಲು ಇರುವುದು ಕೆನರಾ ಬ್ಯಾಂಕ್ ಒಂದೇ
ಏಪ್ರಿಲ್ ಒಂದರಿಂದ ಕರ್ನಾಟಕ ಮೂಲದ ಇನ್ನೊಂದು ಬ್ಯಾಂಕ್ ಉಡುಪಿಯಲ್ಲಿ (ಮಣಿಪಾಲ) ಪ್ರಧಾನ ಕಚೇರಿ ಹೊಂದಿರುವ ಸಿಂಡಿಕೇಟ್ ಬ್ಯಾಂಕ್ ಕೂಡಾ ವಿಲೀನಗೊಳ್ಳುತ್ತಿದೆ. ಈ ಬ್ಯಾಂಕ್, ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಕೆನರಾ ಬ್ಯಾಂಕ್ ಜೊತೆ ಮರ್ಜ್ ಗೊಳ್ಳಲಿದೆ. ಅಲ್ಲಿಗೆ, ಕರ್ನಾಟಕ ಮೂಲದ ಬ್ಯಾಂಕ್ ಎಂದು ಹೇಳಿಕೊಳ್ಳಲು ಇರುವುದು ಕೆನರಾ ಬ್ಯಾಂಕ್ ಒಂದೇ.
-
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bank Jobs: ಸರ್ಕಾರಿ ಬ್ಯಾಂಕ್ ಕೆಲಸಕ್ಕೆ ಇನ್ಮುಂದೆ ಸಿಬಿಲ್ ಸ್ಕೋರ್ ಕಡ್ಡಾಯ -
ಇನ್ಮುಂದೆ KPSC ಮೂಲಕ ಪ್ರತಿ ವರ್ಷ ಗ್ರೂಪ್ A, B ಅಧಿಕಾರಿಗಳ ನೇಮಕಾತಿ: ಕೃಷ್ಣ ಬೈರೇಗೌಡ ಸ್ಪಷ್ಟನೆ -
ಮಾರ್ಚ್ 19ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಔಷಧಿ ಪೂರೈಸುವ ಕೆಸ್ಎಂಸಿಎಲ್ಗೆ ಐಎಎಸ್ ಅಧಿಕಾರಿ ಮುಖ್ಯಸ್ಥ, ಇ-ಔಷಧಿ ಸಾಫ್ಟವೇರ್ ಜಾರಿ: ದಿನೇಶ್ ಗುಂಡೂರಾವ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ












Click it and Unblock the Notifications