ಬೆಳಗಾವಿ: ಬಸ್ ಸ್ಟ್ಯಾಂಡ್‌ನಲ್ಲಿ ಮಲಗುತ್ತಿದ್ದ ವ್ಯಕ್ತಿ ಇಂದು ಕರ್ನಾಟಕದ ಬೆಸ್ಟ್ ಟೀಚರ್; ಇದು ರಾಜಶೇಖರ್ ರಗಟಿ ಅವರ ಕಥೆ

ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಚಳಿಯಿಂದ ರಕ್ಷಿಸಿಕೊಳ್ಳಲು ಕೇವಲ ನ್ಯೂಸ್‌ ಪೇಪರ ಅನ್ನಾ ಹೊದಿಕೆಯಾಗಿ ಬಳಸಿ ಮಲಗುತ್ತಿದ್ದ ಯುವಕನೊಬ್ಬ, ಇಂದು ಇಡೀ ಕರ್ನಾಟಕವೇ ಹೆಮ್ಮೆಪಡುವಂತಹ ಅತ್ಯುತ್ತಮ ಶಿಕ್ಷಕನಾಗಿ ರೂಪುಗೊಂಡಿದ್ದಾನೆ ಎಂದರೆ ನೀವು ನಂಬುತ್ತೀರಾ?.

ಹೌದು, ಈ ಸ್ಫೂರ್ತಿದಾಯಕ ಕಥೆ ಬೆಳಗಾವಿ ಬೆಳಗಾವಿ ಜಿಲ್ಲೆಯ ಸರ್ಕಾರಿ ಶಾಲೆ ಸರ್ಕಾರಿ ಶಾಲೆಯ ಶಿಕ್ಷಕ ರಾಜಶೇಖರ್ ರಗಟಿ ಅವರದ್ದು. ಬಡತನ, ಕಷ್ಟಗಳು ಮತ್ತು ಸವಾಲುಗಳನ್ನ ಮೆಟ್ಟಿ ನಿಂತು, ತಮ್ಮ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವನನು ಕಟ್ಟಿಕೊಡುತ್ತಿರುವ ಇವರ ಜೀವನಗಾಥೆ ಪ್ರತಿಯೊಬ್ಬರಿಗೂ ಮಾದರಿ.

Meet Rajashekar Ragati From Sleeping at Majestic Bus Stand to Winning State Best Teacher Award

ಬಸ್ ನಿಲ್ದಾಣದಿಂದ ಶಾಲೆಯವರೆಗೆ: ರಾಜಶೇಖರ್ ರಗಟಿ ಅವರ ಸ್ಫೂರ್ತಿದಾಯಕ ಕಥೆ

ವಿಜಯಪುರ ಜಿಲ್ಲೆಯ ಹಲಸಂಗಿ ಗ್ರಾಮದಲ್ಲಿ 1981ರಲ್ಲಿ ಜನಿಸಿದ ರಾಜಶೇಖರ್ ರಗಟಿ ಅವರ ಆರಂಭಿಕ ಜೀವನ ಅತ್ಯಂತ ಸಂಕಷ್ಟಗಳಿಂದ ಕೂಡಿತ್ತು. ವಿಜ್ಞಾನ ವಿಭಾಗದಲ್ಲಿ ಕಾಲೇಜು ಮೆಟ್ಟಿಲೇರಿದ್ದ ಅವರು, ಆಸಕ್ತಿ ಇಲ್ಲದ ಕಾರಣ ಅರ್ಧದಲ್ಲೇ ವ್ಯಾಸಂಗ ನಿಲ್ಲಿಸಿದರು.

ಆದ್ರೂ ವ್ಯಾಸಂಗ ನಿಲ್ಲಿಸಿದರೆಂದೂ ಬದುಕನ್ನ ನಿಲ್ಲಿಸಲು ಸಾಧ್ಯವೇ? ಹಾಗಾಗಿ ಆ ಬಳಿಕ ಬದುಕಿನ ಬಂಡಿ ಸಾಗಿಸಲು ಹುಬ್ಬಳ್ಳಿಯ ಹೋಟೆಲ್, ಮೆಡಿಕಲ್ ಶಾಪ್ ಹಾಗೂ ಕ್ಯಾಂಟೀನ್‌ಗಳಲ್ಲಿ ಸರಿಸುಮಾರು ಮೂರು ವರ್ಷಗಳ ಕಾಲ ಸಣ್ಣಪುಟ್ಟ ಕೆಲಸ ಮಾಡಿದರು.

ರಗಟಿ ಟವರ ಜೀವನದಲ್ಲಿ ಎದುರಾದ ಕಷ್ಟಗಳು ಎಷ್ಟರಮಟ್ಟಿಗೆ ಇತ್ತೆಂದರೆ, ಕೆಲವೊಮ್ಮೆ ಅವರು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದ ಪ್ಲಾಟ್‌ಫಾರ್ಮ್ ಮೇಲೆ ಪೇಪರ್ ಹೊದ್ದು ಮಲಗಬೇಕಾದ ಪರಿಸ್ಥಿತಿ ಇತ್ತು. ಆದರೆ, ಈ ಕಷ್ಟದ ದಿನಗಳು ಅವರ ಭವಿಷ್ಯವನ್ನ ನಿರ್ಧರಿಸಲು ರಾಜಶೇಖರ್‌ ಬಿಡಲಿಲ್ಲ.

ಶಿಕ್ಷಣದ ಕಡೆಗೆ ಮರಳಿದ ಪಯಣ

ಬಳಿಕ ತನ್ನ ತಂದೆಯವರ ನಿರಂತರ ಪ್ರೋತ್ಸಾಹದಿಂದಾಗಿ ರಾಜಶೇಖರ್ ಅವರು ಮತ್ತೆ ಶಿಕ್ಷಣದತ್ತ ಮುಖ ಮಾಡಿದರು. ತಮ್ಮ ವ್ಯಾಸಂಗವನ್ನು ಮುಂದುವರಿಸಿ ಬಿ.ಇಡಿ ಪದವಿಯನ್ನ ಪೂರ್ಣಗೊಳಿಸಿದರು. ಸರ್ಕಾರಿ ಉದ್ಯೋಗದ ಕನಸು ಹೊತ್ತು ಪಿಎಸ್‌ಐ, ಎಫ್‌ಡಿಎ, ಎಸ್‌ಡಿಎ ಹಾಗೂ ಕೆಎಎಸ್‌ನಂತಹ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದರು.

ಕೆಲವು ಪರೀಕ್ಷೆಗಳಲ್ಲಿ ಕೇವಲ 1-2 ಅಂಕಗಳ ಅಂತರದಿಂದ ಅವಕಾಶ ಕೈತಪ್ಪಿದರೂ, ಅವರು ಎಂದಿಗೂ ಭರವಸೆ ಕಳೆದುಕೊಳ್ಳಲಿಲ್ಲ. ತಮ್ಮ ನಿರಂತರ ಪ್ರಯತ್ನದ ಫಲವಾಗಿ 2010ರಲ್ಲಿ ಉನ್ನತ ಶ್ರೇಣಿಯೊಂದಿಗೆ ಶಿಕ್ಷಕರಾಗಿ ನೇಮಕಗೊಂಡರು. ತಾವು ಅನುಭವಿಸಿದ ಕಷ್ಟಗಳು ಹಾಗೂ ಅವಕಾಶಗಳಿಗಾಗಿ ಪಟ್ಟ ಪರದಾಟ ತಮ್ಮ ವಿದ್ಯಾರ್ಥಿಗಳಿಗೆ ಬರಬಾರದು ಎಂಬ ದೃಢ ನಿರ್ಧಾರವನ್ನು ಅವರು ಅಂದೇ ಮಾಡಿದ್ದರು.

ಬೆಳಗಾವಿ ಶಿಕ್ಷಕನಾಗಿ ಸಾಧನೆ

ಗ್ರಾಮೀಣ ಭಾಗದ ಮಕ್ಕಳಿಗೆ ಸಮಾಜ ವಿಜ್ಞಾನ ವಿಷಯವನ್ನ ಹೆಚ್ಚು ಆಸಕ್ತಿದಾಯಕವಾಗಿ ಹಾಗೂ ದೃಶ್ಯ ರೂಪದಲ್ಲಿ ಪ್ರಾಯೋಗಿಕವಾಗಿ ಕಲಿಸುವ ಉದ್ದೇಶದಿಂದ, ರಾಜಶೇಖರ್ ಅವರು ಬೆಳಗಾವಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಶಾಲೆಯೊಂದರಲ್ಲಿ 'ಸಮಾಜ ವಿಜ್ಞಾನ ಪ್ರಯೋಗಾಲಯ'ವನ್ನ ಸ್ಥಾಪಿಸಿದರು.

2022ರಲ್ಲಿ ಹಳೆಯ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ ಮೂಲಕ ಕೇವಲ ₹1,000 ದೇಣಿಗೆಯೊಂದಿಗೆ ಈ ಕಾರ್ಯ ಆರಂಭವಾಯಿತು. ನಂತರ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಸಮುದಾಯದ ಬೆಂಬಲದೊಂದಿಗೆ ಸುಮಾರು ₹50,000 ಸಂಗ್ರಹಿಸಿ ನಕ್ಷೆಗಳು, ಮಾದರಿಗಳು ಮತ್ತು ಡಿಜಿಟಲ್ ಉಪಕರಣಗಳೊಂದಿಗೆ ಈ ಪ್ರಯೋಗಾಲಯವನ್ನ ಅದ್ಭುತವಾಗಿ ನಿರ್ಮಿಸಿದರು. ಇದರ ಪರಿಣಾಮವಾಗಿ, ಎಸ್‌ಎಸ್‌ಎಲ್‌ಸಿ ಸಮಾಜ ವಿಜ್ಞಾನ ವಿಷಯದಲ್ಲಿ ಅವರ ಶಾಲೆಯು ಸತತವಾಗಿ ಶೇ. 100ರಷ್ಟು ಫಲಿತಾಂಶ ದಾಖಲಿಸುತ್ತಾ ಬರುತ್ತಿದೆ.

ಕರ್ನಾಟಕ ಸರ್ಕಾರಿ ಶಾಲೆಗೆ ಕೊಡುಗೆ

ರಾಜಶೇಖರ್ ರಗಟಿ ಅವರ ಸಾಧನೆ ಕೇವಲ ತರಗತಿಯ ನಾಲ್ಕು ಗೋಡೆಗಳಿಗೆ ಸೀಮಿತವಾಗಲಿಲ್ಲ. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ, ಅವರು ಯೂಟ್ಯೂಬ್ ಮೂಲಕ ಕಲಿಕಾ ಸಂಪನ್ಮೂಲಗಳನ್ನ ಹಂಚಿಕೊಂಡರು. ಡಿ.ಎಸ್.ಇ.ಆರ್.ಟಿ (DSERT) ಗಾಗಿ ಡಿಜಿಟಲ್ ಕಲಿಕಾ ವಿಷಯಗಳನ್ನು ಸಿದ್ಧಪಡಿಸುವಲ್ಲಿ ಮತ್ತು ಸರ್ಕಾರಿ ಶಾಲಾ ಮಕ್ಕಳಿಗಾಗಿ ವಿದ್ಯಾರ್ಥಿ ಚಟುವಟಿಕೆ ಪುಸ್ತಕಗಳನ್ನ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅವರ ಈ ಅಪಾರ ಶ್ರದ್ಧೆ, ಸಮರ್ಪಣಾಭಾವ ಹಾಗೂ ನವೀನ ಬೋಧನಾ ವಿಧಾನಗಳನ್ನ ಗುರುತಿಸಿ, ಕರ್ನಾಟಕ ಸರ್ಕಾರವು ಅವರಿಗೆ 2025-26ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ. "ಒಬ್ಬ ಶಿಕ್ಷಕ ಯಾವಾಗಲೂ ವಿದ್ಯಾರ್ಥಿಯಾಗಿರಬೇಕು" ಎಂಬುದು ಅವರ ತತ್ವವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+