ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ದುಬಾರಿ

Posted By:
Subscribe to Oneindia Kannada

ಬೆಂಗಳೂರು, ಜೂನ್ 24 : ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳು ದುಬಾರಿಯಾಗಲಿವೆ. ಶೇ 30 ರಷ್ಟು ಶುಲ್ಕ ಹೆಚ್ಚಳ ಮಾಡುವ ಖಾಸಗಿ ಕಾಲೇಜುಗಳ ಬೇಡಿಕೆಗೆ ಸರ್ಕಾರ ಒಪ್ಪಿಗೆ ಕೊಟ್ಟಿದೆ.

ಕರ್ನಾಟಕ ಖಾಸಗಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಸಂಘ (ಕಾಮೆಡ್‌-ಕೆ) ಮತ್ತು ಸರ್ಕಾರ ಈ ಕುರಿತ ಒಪ್ಪಂದಕ್ಕೆ ಗುರುವಾರ ಸಹಿ ಹಾಕಿವೆ. ಶುಲ್ಕ ಹೆಚ್ಚಿಸಲು ಸರ್ಕಾರ ಒಪ್ಪಿಗೆ ಕೊಟ್ಟ ಹಿನ್ನಲೆಯಲ್ಲಿ ಸರ್ಕಾರಿ ಕೋಟಾದ ಶೇ 40ರಷ್ಟು ಸೀಟುಗಳನ್ನು ಬಿಟ್ಟುಕೊಡಲು ಕಾಮೆಡ್ ಕೆ ಒಪ್ಪಿಗೆ ನೀಡಿದೆ. [ಸೀಟು ಹಂಚಿಕೆ, ಸರ್ಕಾರಕ್ಕೆ ಸೆಡ್ಡು]

medical

ಎಷ್ಟಾಗಲಿದೆ ಶುಲ್ಕ? : ಹೊಸ ಒಪ್ಪಂದದ ಪ್ರಕಾರ ವೈದ್ಯಕೀಯ ಕೋರ್ಸ್ ಸರ್ಕಾರಿ ಕೋಟಾದ ಶುಲ್ಕ 55 ಸಾವಿರದಿಂದ 70 ಸಾವಿರ ರೂ.ಗೆ ಏರಿಕೆಯಾಗಲಿದೆ. ಕಾಮೆಡ್‌-ಕೆ ಸೀಟುಗಳ ಶುಲ್ಕ 4.25 ಲಕ್ಷದಿಂದ 5.75 ಲಕ್ಷಗಳಿಗೆ ಏರಿಕೆಯಾಗುತ್ತದೆ. [ಇಂಜಿನಿಯರಿಂಗ್ ಪ್ರವೇಶ ಶುಲ್ಕ ಶೇ 10ರಷ್ಟು ಹೆಚ್ಚಳ]

ದಂತ ವೈದ್ಯಕೀಯ ಕೋರ್ಸ್‌ಗಳಲ್ಲಿ ಸರ್ಕಾರಿ ಕೋಟಾದ ಶುಲ್ಕ 35 ಸಾವಿರದಿಂದ 45 ಸಾವಿರಕ್ಕೆ ಏರಿಕೆಯಾಗಲಿದೆ. ಕಾಮೆಡ್-ಕೆ ಕೋಟಾದ ಶುಲ್ಕ 2.75 ಲಕ್ಷದಿಂದ 3.90 ಲಕ್ಷಕ್ಕೆ ಏರಿಕೆಯಾಗಲಿದೆ. [ಕಾಮೆಡ್ ಕೆ ಪರೀಕ್ಷೆಯಲ್ಲಿ ಕನ್ನಡಿಗರದ್ದೇ ಮೇಲುಗೈ]

ಸೀಟು ಕೊಡಲು ಹಿಂದೇಟು : ಕಾಮೆಡ್‌-ಕೆ ತನ್ನ ವ್ಯಾಪ್ತಿಯ ಕಾಲೇಜುಗಳಲ್ಲಿನ ಶೇ 40ರಷ್ಟು ವೈದ್ಯ ಮತ್ತು ದಂತವೈದ್ಯ ಸರ್ಕಾರಿ ಸೀಟುಗಳನ್ನು ಬಿಟ್ಟುಕೊಡಲು ಮೊದಲು ಹಿಂದೇಟು ಹಾಕಿತ್ತು. ಇದರಿಂದಾಗಿ ಸುಮಾರು 1,500 ಸೀಟುಗಳು ಸರ್ಕಾರದ ಕೈ ತಪ್ಪುವ ಭೀತಿ ಎದುರಾಗಿತ್ತು.

ಆದರೆ, ಈಗ ಸರ್ಕಾರ ಶುಲ್ಕ ಹೆಚ್ಚಳಕ್ಕೆ ಒಪ್ಪಿಗೆ ನೀಡಿರುವುದರಿಂದ ಸೀಟುಗಳನ್ನು ಬಿಟ್ಟುಕೊಡಲು ಕಾಮೆಡ್-ಕೆ ಒಪ್ಪಿಗೆ ನೀಡಿದೆ. ಕರ್ನಾಟಕದಲ್ಲಿ 12 ಖಾಸಗಿ ವೈದ್ಯ ಮತ್ತು 24 ದಂತ ವೈದ್ಯಕೀಯ ಕಾಲೇಜುಗಳಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Medical and Dental course fees to go up by 30 percent for both government as well as COMEDK quota seats. The agreement on this was signed between the colleges and the government on June 24, 2016.
Please Wait while comments are loading...