Get Updates
Get notified of breaking news, exclusive insights, and must-see stories!

ಶಾಂತಿ ಕದಡುವವರ ವಿರುದ್ಧ ದೂರಿಗೆ ಹೆಲ್ಪ್‌ಲೈನ್‌ ಸೆಟ್‌ಅಪ್‌ ಮಾಡಿ ಎಂದ ಸಚಿವ ಎಂಬಿ ಪಾಟೀಲ್‌: ಏನಿದು 'Peaceful Karnataka'?

ಬೆಂಗಳೂರು, ಜೂನ್‌ 05: ರಾಜ್ಯದಲ್ಲಿ ಶಾಂತಿ ಕದಡುವವರ ವಿರುದ್ಧ ದೂರು ನೀಡಲು ಹೆಲ್ಪ್‌ಲೈನ್‌ ಸೆಟ್‌ಅಪ್‌ ಮಾಡಬೇಕೆಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್‌ ಒತ್ತಾಯಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು ಗೃಹ ಸಚಿವ ಡಾ ಪರಮೇಶ್ವರ್‌, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟ್ಯಾಗ್‌ ಮಾಡಿದ್ದಾರೆ.

ಕರ್ನಾಟಕದಲ್ಲಿ ಯಾವುದೇ ರೀತಿಯ ದ್ವೇಷ ಹರಡದಂತೆ ಮತ್ತು ಅಂತಹ ಅನಪೇಕ್ಷಿತ ಘಟನೆಗಳ ಬಗ್ಗೆ ಕಣ್ಗಾವಲು ಇರಿಸಲು 'ಶಾಂತಿಯುತ ಕರ್ನಾಟಕ' ಎಂಬ ಹೊಸ ಸಹಾಯವಾಣಿಯನ್ನು ಸ್ಥಾಪಿಸುವಂತೆ ಡಾ ಪರಮೇಶ್ವರ, ಪ್ರಿಯಾಂಕ್‌ ಖರ್ಗೆ, ಡಿಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ನಮ್ಮ ಗುರಿ ಅಭಿವೃದ್ಧಿ ಮತ್ತು ಪ್ರಗತಿ ಹಾಗೂ 'ಬ್ರಾಂಡ್ ಕರ್ನಾಟಕ' ರಕ್ಷಿಸುವುದು ಎಂದು ಎಂಬಿ ಪಾಟೀಲ್‌ ಟ್ವೀಟ್‌ ಮಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಮುಖ್ಯಸ್ಥ ಮತ್ತು ಸಂಸದ ತೇಜಸ್ವಿ ಸೂರ್ಯ, ಜೂನ್ 3 ರಂದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಎಲ್ಲಾ ಕಾನೂನು ದೌರ್ಜನ್ಯಗಳನ್ನು ತಡೆಯಲು ಪಕ್ಷದ ಕರ್ನಾಟಕ ಕಾನೂನು ಘಟಕದಿಂದ ಶೀಘ್ರದಲ್ಲೇ ಸಹಾಯವಾಣಿಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದ್ದರು.

ಕಾನೂನು ಘಟಕವು ತನ್ನ ಎಲ್ಲಾ ವಕೀಲರ ಸಭೆಯನ್ನು ನಡೆಸಿದೆ ಎಂದು ಹೇಳಿದ ಅವರು, ಕಾಂಗ್ರೆಸ್ ಸರ್ಕಾರದ ಎಲ್ಲಾ ಕಾನೂನು ದೌರ್ಜನ್ಯಗಳು, ಅಧಿಕಾರ ದುರುಪಯೋಗ, ಸುಳ್ಳು ಪ್ರಕರಣಗಳು ಮತ್ತು ಸುಳ್ಳು ಎಫ್‌ಐಆರ್‌ಗಳನ್ನು ಎದುರಿಸಲು ಸಿದ್ಧ ಎಂದು ತಿಳಿಸಿದ್ದರು.

MB Patil Request Congress Govt to Set up Helpline

ಒಂದು ವಾರದೊಳಗೆ ಸಹಾಯವಾಣಿ ಸಂಖ್ಯೆಯನ್ನು ಪ್ರಕಟಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದರು.

'ಈ ಸಹಾಯವಾಣಿ ಸಂಖ್ಯೆ ರಾಜ್ಯದ ಕಾರ್ಯಕರ್ತರ ಬಳಕೆಗಾಗಿ ಇದೆ. ಇದು 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ. ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿದಾಗ ಅಥವಾ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಾಗ ಅವರು ಈ ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆಯಬಹುದು' ಎಂದು ಅವರು ಹೇಳಿದ್ದರು.

MB Patil Request Congress Govt to Set up Helpline

'ರಾಜ್ಯದ ಮೂಲೆ ಮೂಲೆಗಳಲ್ಲಿ ಇರುವ ನಮ್ಮ ವಕೀಲರ ತಂಡವು ಕಾರ್ಯಕರ್ತರಿಗೆ ಸಹಾಯ ಮಾಡಲು ಧಾವಿಸುತ್ತದೆ'; ಎಂದೂ ತೇಜಸ್ವಿ ಸೂರ್ಯ ಭರವಸೆ ನೀಡಿದ್ದರು.

ಕಾರ್ಯಕರ್ತರ ಪರವಾಗಿ ನ್ಯಾಯಾಲಯ ಮತ್ತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾರ್ಮಿಕರಿಗೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದರು.

ಇದಕ್ಕೆ ಕೌಂಟರ್‌ ನೀಡಲು ಎಂಪಿ ಪಾಟೀಲ್‌ ಟ್ವೀಟ್‌ ಮಾಡಿದ್ದಾರೆ ಎನ್ನಲಾಗುತ್ತಿದೆ. ಹಿಂದುತ್ವವಾದಿ ಚಕ್ರವರ್ತಿ ಸೂಲಿಬೇಲಿ ಅವರ ವಿರುದ್ಧ ಹರಿಹಾಯ್ದಿದ್ದ ಎಂಪಿ ಪಾಟೀಲ್‌, ಸಮಾಜದಲ್ಲಿ ಶಾಂತಿಗೆ ಭಂಗ ತಂದರೆ ಜೈಲಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದರು.

MB Patil Request Congress Govt to Set up Helpline

ಬಿಜೆಪಿ ಹೇಳಿದ್ದೇನು?

ಕರ್ನಾಟಕ ಬಿಜೆಪಿ ಕಾನೂನು ಘಟಕವು ಪಿಐಎಲ್ ಮತ್ತು ರಿಟ್ ಅರ್ಜಿಗಳ ಮೂಲಕ ನ್ಯಾಯಾಲಯದ ಬಾಗಿಲು ತಟ್ಟುವ ಕೆಲಸ ಮಾಡಲಿದೆ. ಆ ಮೂಲಕ ಸಮಾಜದ ಹಿತಾಸಕ್ತಿ ಕಾಪಾಡಲು ಹಿರಿಯ ವಕೀಲರು ಮತ್ತು ತಜ್ಞರ ತಂಡವನ್ನು ಸಜ್ಜುಗೊಳಿಸುವ ನಿರೀಕ್ಷೆಯಿದೆ ಎಂದು ಅವರು ರಾಜ್ಯ ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕುಂಟು ನೆಪ ಹೇಳಿ ಹಬ್ಬ ಹರಿದಿನಗಳನ್ನು ತಡೆಯುವ ಯತ್ನ ನಡೆದಿತ್ತು ಎಂದು ಆರೋಪಿಸಿದ ಬಿಜೆಪಿ, ಇಂತಹ ಪರಿಸ್ಥಿತಿ ಬಂದರೆ ಬೆಂಗಳೂರು, ಧಾರವಾಡ, ಕಲಬುರಗಿಯಲ್ಲಿ ವಕೀಲರ ತಂಡ ಹೋರಾಟಕ್ಕೆ ಸಜ್ಜಾಗುತ್ತಿದೆ ಎಂದು ತಿಳಿಸಿದೆ.

ಹೊಸ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಮ್ಮ ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಿರುವುದು, ಸುಳ್ಳು ಆರೋಪ ಹೊರಿಸಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದೆ.

ಇತ್ತೀಚೆಗೆ ರಾಯಚೂರಿನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನನ್ನು ಬಂಧಿಸಿದ ಉದಾಹರಣೆಯನ್ನು ಬಿಜೆಪಿ ಉಲ್ಲೇಖಿಸಿದೆ.

ಬಲಪಂಥೀಯ ಕಾರ್ಯಕರ್ತ ರಾಜು ತ್ಯಾಂಪಕ್ ಎಂಬಾತ ಮುಸ್ಲಿಂ ಮಹಿಳೆಯರು ಬೇಬಿ ಮೇಕಿಂಗ್ ಫ್ಯಾಕ್ಟರಿ ಎಂದು ವಾಟ್ಸಾಪ್ ಸ್ಟೇಟಸ್ ಹಾಕಿದ್ದು, ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ವೈರಲ್ ಆಗಿತ್ತು. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸುಮಾರು 300-400 ಪುರುಷರು ಲಿಂಗಸುಗೂರು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ, ಪ್ರಕರಣ ದಾಖಲಿಸಿ ಬಲಪಂಥೀಯನನ್ನು ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+