ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 28 ಮತ್ತು 29ರಂದು ನಡೆಯಬೇಕಿದ್ದ ಎಪಿಪಿ ಪರೀಕ್ಷೆ ಮುಂದೂಡಿಕೆ

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು ಮೇ 25: ಇದೇ 28 ಮತ್ತು 29ರಂದು ಆಯೋಜಿಸಲಾಗಿದ್ದ ಸಹಾಯಕ ಸರ್ಕಾರಿ ಅಭಿಯೋಜಕರ (ಎಪಿಪಿ) ನೇಮಕ ಕುರಿತ ಮುಖ್ಯ ಪರೀಕ್ಷೆಯನ್ನು ಮುಂದೂಡಲಾಗಿದೆ.

ಹಿಂದೆ ಕೋವಿಡ್ ಮತ್ತು ಬೇರೆ ಬೇರೆ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿದ್ದ ಪರೀಕ್ಷೆ ಈ ಬಾರಿ ಅಡಳಿತಾತ್ಮಕ ಕಾರಣಕ್ಕೆ ಮುಂದೂಡಲಾಗುತ್ತಿದೆ ಎಂದು ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಪ್ರಭಾರಿ ನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ.

ಆದರೆ ಆ 'ಆಡಳಿತಾತ್ಮಕ' ಕಾರಣ ಏನು ಎಂದು ಅಭ್ಯರ್ಥಿಗಳು ಕೇಳುತ್ತಿದ್ದಾರೆ. ಇದು ಸದ್ಯ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಇದು ಅಭ್ಯರ್ಥಿಗಳಲ್ಲಿ ಕುತೂಹಲ ಕೆರಳಿಸಲು ಕಾರಣವಾಗಿದೆ.

Karnataka: May 28 and 29 APPs Examination postponed

ಪಿಎಸ್ ಐ ಅಕ್ರಮ ನೇಮಕ ಪ್ರಕರಣದ ಹಿನ್ನೆಲೆಯಲ್ಲಿ ಕೆಪಿಎಸ್ ಸಿ ಹಲವು ಪರೀಕ್ಷೆಗಳ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿರುವ ಬೆನ್ನೆಲ್ಲೆ ಎಪಿಪಿ ನೇಮಕ ಮುಖ್ಯ ಪರೀಕ್ಷೆ ಮುಂದೂಡಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಏಕೆ ಪರೀಕ್ಷೆ ಮುಂದೂಡಲಾಗಿದೆ, ನಿಜವಾದ ಕಾರಣವೇನು ಎಂದು ಅಭ್ಯರ್ಥಿಗಳು ಪ್ರಶ್ನಿಸುತ್ತಿದ್ದಾರೆ.

ಸಹಾಯಕ ಸರ್ಕಾರಿ ವಕೀಲರ ನೇಮಕಾತಿ ಸಮಿತಿಯ ಸಭೆಯ ನಿರ್ಣಯದಂತೆ ರಾಜ್ಯದ ನಾಲ್ಕು ಕೇಂದ್ರಗಳಲ್ಲಿ ಮೇ 28 ಮತ್ತು 29ರಂದು ಆಯೋಜಿಸಲಾಗಿದ್ದ ಮುಖ್ಯ ಪರೀಕ್ಷೆಯನ್ನು ಆಡಳಿತಾತ್ಮಕ ಕಾರಣಗಳಿಂದ ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಪರೀಕ್ಷಾ ದಿನ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದರೆ ಆಡಳಿತಾತ್ಮಕ ಕಾರಣದ ಬಗ್ಗೆ ಕುತೂಹಲ ಮೂಡಿದೆ.

ಮೊದಲೇ ಎಪಿಪಿಗಳಿಲ್ಲದೆ ನ್ಯಾಯಾಲಯಗಳಲ್ಲಿ ಅಪರಾಧ ಪ್ರಕರಣಗಳನ್ನು ನಡೆಸಲು ಕಷ್ಟವಾಗಿರುವಾಗ ಮತ್ತೆ ಪರೀಕ್ಷೆ ಮುಂದೂಡಿರುವುದು ಹಲವು ಗೊಂದಲಗಳಿಗೆ ಕಾರಣವಾಗಿದೆ. ಅದಕ್ಕಾಗಿ ಸಜ್ಜಾಗುತ್ತಿದ್ದ ಅಭ್ಯರ್ಥಿಗಳಿಗೂ ಸಹ ನಿರಾಶೆ ಮೂಡಿಸಿದೆ.

ಹೊಸ ವಿಧಾನದಲ್ಲಿ ಪರೀಕ್ಷೆ ನಡೆಸಲು ಅಭಿಯೋಜನಾ ಇಲಾಖೆ ಬಯಸಿತ್ತು. ಆದರೆ ಹಳೆಯ ವಿಧಾನದಲ್ಲಿಯೇ ಮುಂದುವರಿಸಬೇಕೆಂದು ವಕೀಲರ ಸಂಘ ಆಗ್ರಹಿಸಿತ್ತು.,

ಬೆಂಗಳೂರು ಸಹಾಯಕ ಸರ್ಕಾರಿ ಅಭಿಯೋಜಕರ ಪರೀಕ್ಷೆ ಆರಂಭವಾಗುವುದನ್ನು ಮನಗಂಡು, ಬೆಂಗಳೂರು ವಕೀಲರ ಸಂಘ ಇತ್ತೀಚೆಗೆ ಪ್ರಾಸಿಕ್ಯೂಷನ್ಸ್‌ ಮತ್ತು ಸರ್ಕಾರಿ ಮೊಕದ್ದಮೆ ವಿಭಾಗದ ನಿರ್ದೇಶಕರನ್ನು ಭೇಟಿ ಮಾಡಿ, ಹಳೆಯ ವಿಧಾನದಲ್ಲಿಯೇ ಪರೀಕ್ಷೆ ನಡೆಸಬೇಕು. ಪರೀಕ್ಷೆಗೂ ಮುನ್ನ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟಿಸಿ ಕನಿಷ್ಠ 15 ದಿನ ಕಾಲಾವಕಾಶ ನೀಡಬೇಕು ಎಂದು ಕೋರಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಹೈಕೋರ್ಟ್ ನಿರ್ದೇಶನ:

ಹೈಕೋರ್ಟ್ ನಿರ್ದೇಶನ ಹಿನ್ನೆಲೆಯಲ್ಲಿ ಅಭಿಯೋಜನಾ ಇಲಾಖೆಯಲ್ಲಿ ಖಾಲಿ ಇದ್ದ ಎಪಿಪಿಗಳ ನೇಮಕವನ್ನು ಭರ್ತಿ ಮಾಡಲು ಕ್ರಮ ಕೈಗೊಂಡಿದೆ. ಆದರೆ ನಾನಾ ಕಾರಣಗಳಿಂದಾಗಿ ಅದು ಮುಂದೆ ಹೋಗುತ್ತಲೇ ಇದೆ. ಇದು ನ್ಯಾಯಾಂಗದ ಪರಿಣಾಮದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ. 300ಕ್ಕೂ ಅಧಿಕ ಎಎಪಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಪ್ರಾಥಮಿಕ ಪರೀಕ್ಷೆಗೆ ಸಾವಿರಾರು ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಇದೀಗ ಮುಖ್ಯ ಪರೀಕ್ಷೆಗೆ ಸುಮಾರು 2 ಸಾವಿರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

Recommended Video

Virat Kohli ಕ್ಯಾಪ್ಟನ್ ಆದಾಗ ಏನ್ ಮಾಡಿದ್ರು ಗೊತ್ತಾ! | #cricket | Oneindia Kannada

English summary
APPs Examination postponed: Curiosity raised among aspirants on the administrative reasons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X