ಮಾತೆ ಮಹಾದೇವಿ ವಿರುದ್ಧ ಒನ್ ಇಂಡಿಯಾ ಓದುಗರ ಆಕ್ರೋಶ

Posted By: Gururaj
Subscribe to Oneindia Kannada
   Mate Mahadevi statement about Shivakumara swamiji oneindia readers outraged on facebook

   ಬೆಂಗಳೂರು, ಸೆಪ್ಟೆಂಬರ್ 14 : ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳ ವಿರುದ್ಧ ಹೇಳಿಕೆ ನೀಡಿರುವ ಮಾತೆ ಮಹಾದೇವಿ ಅವರು ವಿರುದ್ಧ ಒನ್ ಇಂಡಿಯಾ ಕನ್ನಡದ ಓದುಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

   'ಕೇಂದ್ರ ಸರ್ಕಾರ ನಿಮ್ಮನ್ನು ಭಾರತ ರತ್ನ ಪ್ರಶಸ್ತಿಗೆ ಪರಿಗಣಿಸಿದೆ. ಹಾಗಾಗಿ ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ತಟಸ್ಥರಾಗಿ ಇರಿ' ಎಂದು ಬಿಜೆಪಿ ಮುಖಂಡರು ಒತ್ತಡ ಹೇರಿದ್ದಾರೆ ಎಂದು ಕೂಡಲಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಬುಧವಾರ ಹೇಳಿಕೆ ನೀಡಿದ್ದರು.

   'ಭಾರತ ರತ್ನ'ಕ್ಕಾಗಿ ಸಿದ್ದಗಂಗಾ ಶ್ರೀ ತಪ್ಪು ಹೇಳಿಕೆ: ಮಾತೆ ಮಹಾದೇವಿ

   'ಬಿಜೆಪಿ ಮುಖಂಡರಾದ ಯಡಿಯೂರಪ್ಪ, ವಿ.ಸೋಮಣ್ಣ ಹಾಗೂ ಜಿ.ಎಸ್.ಬಸವರಾಜು ಸೇರಿ ಈ ಷಡ್ಯಂತ್ರ ರೂಪಿಸಿದ್ದಾರೆ. ಅವರೊಂದಿಗೆ ಅಖಿಲ ಭಾರತ ವೀರಶೈವ ಮಹಾಸಭಾದ ಮುಖಂಡರು ಕೈ ಜೋಡಿಸಿದ್ದಾರೆ' ಎಂದು ಮಾತೆ ಮಹಾದೇವಿ ಆರೋಪಿಸಿದ್ದರು.

   ರಾಜ್ಯ ಸರಕಾರದ 'ಲಿಂಗಾಯತ ರಾಜಕೀಯ'ಕ್ಕೆ ಭಾರೀ ಹಿನ್ನಡೆ

   ನಮ್ಮ ಓದುಗರು ಮಾತೆ ಮಹಾದೇವಿ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀಗಳೇ ಭಾರತದ ರತ್ನ ಅವರಿಗೆ ಸರ್ಕಾರ ಯಾವ ಪ್ರಶಸ್ತಿಯನ್ನು ನೀಡಬೇಕಾಗಿಲ್ಲ. ರಾಜಕೀಯ ಲಾಭಕ್ಕಾಗಿ ಇಂತಹ ಹೇಳಿಕೆ ನೀಡಬೇಡಿ ಎಂದು ಓದುಗರು ಮಾತೆ ಮಹಾದೇವಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಓದುಗರ ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ...

   ಮೌನವಾಗಿದ್ದು ಲಿಂಗಾಯತ ಸ್ವತಂತ್ರ ಧರ್ಮದ ಯುದ್ಧ ಗೆದ್ದರೆ ಬಿಎಸ್ ವೈ?

   ಶ್ರೀಗಳಿಂದ ಪ್ರಶಸ್ತಿಗೆ ಗೌರವ

   ಶ್ರೀಗಳಿಂದ ಪ್ರಶಸ್ತಿಗೆ ಗೌರವ

   ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಏನು ನೋಬೆಲ್ ಪ್ರಶಸ್ತಿ ಬಂದರೂ ಶ್ರೀಗಳಿದ ಆ ಪ್ರಶಸ್ತಿ ಗೌರವ ಹೆಚ್ಚುತ್ತದೆ. ಅವರ ಆಸೆ ಲೋಕಕಲ್ಯಾಣ ಮಾತ್ರ ಎಂದು ಅರುಣ್ ಜೋಶಿ ಎಂಬುವವರು ಪ್ರತಿಕ್ರಿಯೆ ನೀಡಿದ್ದಾರೆ.

   ದೇವ ಸ್ವರೂಪಿ

   ದೇವ ಸ್ವರೂಪಿ

   'ದೇವ ಸ್ವರೂಪಿ ಸಿದ್ದಗಂಗಾ ಶ್ರೀಗಳ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿರುವ ಇವರನ್ನು ಇವರ ಜಾತಿಯ ಜನ ನಂಬಿದ್ದಾರಲ್ಲ' ಎಂದು ಶೇಷಗಿರಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ವಿರಕ್ತ ಮಠ

   ವಿರಕ್ತ ಮಠ

   'ತುಂಬ ವರ್ಷಗಳ ಹಿಂದೆ ಶ್ರೀಗಳು ನಮ್ಮದು ವಿರಕ್ತ ಮಠ ಯಾವ ಪ್ರಶಸ್ತಿ, ಬಿರುದುಗಳು ಬೇಡ ಎಂದು ಹೇಳಿಕೆ ನೀಡಿದ್ದರು' ಎಂದು ಹರೀಶ್ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

   ಕೀಳಾಗಿ ಹೇಳಿಕೆ ನೀಡಬೇಡಿ

   ಕೀಳಾಗಿ ಹೇಳಿಕೆ ನೀಡಬೇಡಿ

   'ಅಮ್ಮ ತಾಯಿ ಈ ಮಾತನ್ನು ದಯವಿಟ್ಟು ನಮ್ಮ ದೇವರ (ನಡೆದಾಡುವ ದೇವರ) ಬಗ್ಗೆ ಕೀಳಾಗಿ ಹೇಳಿಕೆ ನೀಡಬೇಡಿ' ಎಂದು ಲಕ್ಷಣ್ ರಾಜು ಪ್ರತಿಕ್ರಿಯಿಸಿದ್ದಾರೆ.

   ನಮ್ಮ ಪಾಲಿಗೆ ಅವರೇ ಭಾರತ ರತ್ನ

   'ಶ್ರೀಗಳೇ ನಮ್ಮ ಪಾಲಿಗೆ ಭಾರತ ರತ್ನ' ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

   ದೇವರ ಆಶೀರ್ವಾದವೇ ದೊಡ್ಡ ರತ್ನ

   ವಿಠ್ಠಲ್ ರಾವ್ ಕುಲಕರ್ಣಿ ಎಂಬುವವರು 'ದೇವರ ಆಶೀರ್ವಾದವೇ ಅವರಿಗೆ ದೊಡ್ಡ ರತ್ನ' ಎಂದು ಪ್ರತಿಕ್ರಿಯಿಸಿದ್ದಾರೆ.

   ಅವರು ಸದಾ ಮಿನುಗುವ ವಿಶ್ವರತ್ನ

   ಅವರು ಸದಾ ಮಿನುಗುವ ವಿಶ್ವರತ್ನ

   'ದೇಶದ ಸೇವೆಗಾಗಿ ಮಹಾನ್ ರತ್ನಗಳನ್ನೇ ಶ್ರೀಗಳು ನೀಡಿದ್ದಾರೆ. ಕೇವಲ ಭಾರತ ರತ್ನದಿಂದ ಅವರ ಸೇವೆ ಅಳೆಯಲು ಸಾಧ್ಯವಿಲ್ಲ' ಎಂದು ಪ್ರದೀಪ್ ಪ್ರತಿಕ್ರಿಯೆ ನೀಡಿದ್ದಾರೆ.

   ಇವರ ಆಕಾಂಕ್ಷೆ ಏನು?

   ಶಿವಾನಂದ ಹಿರೇಮಠ್ ಎಂಬುವವರು, 'ಯಾವುದೇ ಒಂದು ಧರ್ಮವನ್ನು ಮುನ್ನಡೆಸಿಕೊಂಡು ಹೋಗಲು ಇವರು ಎಷ್ಟು ಸಮರ್ಥರು ಎಂದು ಪ್ರಶ್ನಿಸಿದ್ದಾರೆ'

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Oneindia Kannada readers opposes Basava Dharma Peeta president Mate Mahadevi statement on Siddganga Mutt Shivakumara swamiji. Here are comments by readers.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ