Siganduru: ಸಿಗಂದೂರಿಗೆ ಹೋಗಲು ಪ್ಲಾನ್ ಮಾಡಿದ್ದರೆ 2 ತಿಂಗಳು ಮುಂದೂಡಿ! ಏಕೆ ಅಂತೀರಾ ಇಲ್ಲಿ ನೋಡಿ..
Siganduru Traffic Jam: ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 2.44 ಕಿಲೋ ಮೀಟರ್ ಉದ್ದದ ಸಿಗಂದೂರು ಬ್ರಿಡ್ಜ್ ಇತ್ತೀಚೆಗೆ ಉದ್ಘಾಟನೆ ಆಗಿದೆ. ಅದರ ಬೆನ್ನಲ್ಲೆ ಚೌಡೇಶ್ವರಿ ದೇವಿ ಭಕ್ತರು ಆಗಮಿಸುವ ಸಂಖ್ಯೆ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದರ ಪರಿಣಾಮವೆಂಬಂತೆ ಪಾರ್ಕಿಂಗ್, ಜನ ಸಂಚಾರಕ್ಕೆ ಸಾಕಷ್ಟು ತೊಂದರೆ ಆಗಿದೆ. ವಾಹನ ನಿಲ್ಲಿಸುವುದು ಒಂದು ಕಡೆಯಾದರೆ, ದೇವಸ್ಥಾನ ಇರುವುದು ಮತ್ತೊಂದು ಕಡೆ. ಈ ಜಡಿ ಮಳೆ ನಡುವೆ ಆಗಮಿಸಿದ್ದ ಭಕ್ತರು ಹೈರಾಣಾಗಿದ್ದಾರೆ..
ಹೌದು, ಈವರೆಗೆ ಸಿಗಂದೂರು ಚೌಡೇಶ್ವರಿ ದೇವಿ ನೋಡಲು ತೆರಳಿದವರು ಲಾಂಜ್ ಮೂಲಕ ನೇತ್ರಾವತಿ ನದಿಯಲ್ಲಿ ಮೇಲೆ ಹಾದು ಹೋಗಬೇಕಿತ್ತು. ಆಗಲೂ ಅಪಾರ ಜನ ಬರುತ್ತಿದ್ದರು. ಲಾಂಜ್ ಸಂಚಾರಕ್ಕೆ ಈಗ ಬ್ರೇಕ್ ಬಿದ್ದಿದೆ. 743 ಕೊಟಿ ರೂಪಾಯಿ ವೆಚ್ಚದಲ್ಲಿ 740 ಮೀಟರ್ ಉದ್ದದ ಕೇಬಲ್ ಬ್ರಿಡ್ಜ್ ನಿರ್ಮಿಸಲಾಗಿದೆ. ಇದು ಕರ್ನಾಟಕದ ಅತೀ ಉದ್ದದ ಬ್ರಿಡ್ಜ್ ಆಗಿದೆ. ಇತ್ತೀಚೆಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಉದ್ಘಾಟಿಸಿದರು. ಅದಾದ ಬಳಿಕ ಸೇತುವೆ ನೋಡಲು ಬರುವವರು, ಹೊಸ ಸೇತುವೆ ಮೇಲೆ ಖಾಸಗಿ ವಾಹನ ತರುವವರ ಸಂಖ್ಯೆ ಹೆಚ್ಚಾಗಿದೆ. ಬ್ರಿಡ್ಜ್ ಮೇಲೆ ನಿಂತು ಫೋಟೋ ತೆಗೆದು ಭಕ್ತರು ಖಷಿ ಪಡೆಯುತ್ತಿದ್ದಾರೆ. ಇದು ಸಹಜ ಕೂಡ. ಸಾರ್ವಜನಿಕ ಸಾರಿಗೆ ಬಸ್ ಗಳಿಂದ ಸಿಗಂದೂರಿಗೆ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ ಆಗಿದೆ.

ಸಿಗಂದೂರು ಪ್ಲಾನ್ 2 ತಿಂಗಳು ಮುಂದೂಡಿ
ಚೌಡೇಶ್ವರಿ ದೇವಸ್ಥಾನಕ್ಕೆ ನೇರ ಸಾರಿಗೆ ಸಂಪರ್ಕ ಸಾಧ್ಯವಾದ ಬೆನ್ನಲ್ಲೆ ಇಲ್ಲಿಗೆ ಬರುವವರು ಸಂಖ್ಯೆ ಹೆಚ್ಚಾಗಿದೆ. ಒಂದು ಕಿಲೋ ಮೀಟರ್ ದೂರದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ಬಂದರೂ ಸಹಿತ ಜನದಟ್ಟಣೆ ಜಾಸ್ತಿಯೇ ಇದೆ. ರಸ್ತೆಯುದ್ದಕ್ಕೂ ವಾಹನಗಳು ನಿಂತಿವೆ. ಜಡಿ ಮಳೆಯಲ್ಲಿ ಜನರು ತುಂಬಿ ತುಳುಕುತ್ತಿದ್ದಾರೆ. ಯಾರಾದರೂ ಇಲ್ಲಿಗೆ ಬರುವ ಪ್ಲಾನ್ ಮಾಡಿದ್ದರೆ ಮುಂದಿನ ಎರಡು ತಿಂಗಳ ಬರದಂತೆ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಮನವಿ ಮಾಡಿದ್ದಾರೆ. ಇನ್ಸ್‌ಟಾಗ್ರಾಮ್ ನಲ್ಲಿ anugrahayatra ಮತ್ತು namma_sihimogge ಶಿವಮೊಗ್ಗ ಹೆಸರಿನ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.
ವಿಡಿಯೋದಲ್ಲಿ ಜನಜಂಗಳಿ, ವಾಹನ ದಟ್ಟಣೆ ಹಾಗೂ ಗುಂಪಾಗಿ ನಿಲ್ಲಿಸಿದ ವಾಹನಗಳು ಕಾಣಿಸುತ್ತವೆ. ಇಲ್ಲಿಗೆ ಸದ್ಯಕ್ಕೆ ಯಾರು ಬರಬೇಡಿ. ಸರಿಯಾದ ವ್ಯವಸ್ಥೆ ಇಲ್ಲದಂತಾಗಿದೆ. ಅವ್ಯವಸ್ಥೆ ಇದೆ. ದೇವಿಯ ದರ್ಶನಕ್ಕೆ ಕಿಲೋ ಮೀಟರ್ ದೂರದಲ್ಲಿ ವಾಹನ ನಿಲ್ಲಿಸಿ ಬರಬೇಕು. ಒಂದೇ ಸಮನೆ ಮಳೆ ಬರುತ್ತಿದೆ. ಯಾರಾದರೂ ಸಿಗಂದೂರಿಗೆ ಬರುವ ಪ್ಲಾನ್ ಮಾಡಿದ್ದ ಮುಂದೂಡಿದರೆ ಒಳಿತು ಎಂದು ಮನವಿ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.
ಅಗತ್ಯ ವ್ಯವಸ್ಥೆ ಕಲ್ಪಿಸಬೇಕು: ಜನಾಗ್ರಹ
ಮಳೆಗಾಲ ಬಂತೆಂದರೆ ಅನೇಕ ಮಂದಿ ಮಾನ್ಸೂನ್ ಪ್ರವಾಸ ಆರಂಭಿಸುತ್ತಾರೆ. ಈ ಬಾರಿಯ ವಿಶೇಷ ಏಕೆಂದರೆ, ಹೊಸ ಬ್ರಿಡ್ಜ್ ಓಪನ್ ಆಗಿರುವುದು ಪ್ರವಾಸಿಗರಲ್ಲಿ, ಭಕ್ತರಲ್ಲಿ ಕುತೂಹಲ ಹೆಚ್ಚಾಗುವಂತೆ ಮಾಡಿದೆ. ಅದರ ಮೇಲೆ ಪ್ರಯಾಣ ಮಾಡಿ ಅನುಭವ ಹೊಂದಬೇಕೆಂಬ ಬಯಕೆ ಹೆಚ್ಚಾಗಿದೆ. ಕೆಲವೆಡೆ ರೀಲ್ಸ್ ಮಾಡುವುದು, ವಾಹನ ನಿಲ್ಲಿಸಿ ಫೋಟೋ ತೆಗೆದುಕೊಳ್ಳುತ್ತಿರುವುದು ಕಂಡು ಬಂದಿದೆ. ಅದೇನೆ ಇದ್ದರೂ ಸರ್ಕಾರ ಬ್ರಿಡ್ಜ್ ನಿರ್ಮಿಸಿದ ಮೇಲೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ದೂರದೃಷ್ಟಿ ಇಟ್ಟುಕೊಂಡು ಪಾರ್ಕಿಂಗ್ ವ್ಯವಸ್ಥೆ, ಜನದಟ್ಟಣೆ ಆಗದಂತೆ ಕ್ರಮ ಸೇರಿ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಜನರ ಆಗ್ರಹವಾಗಿದೆ.
ಸಿಗಂದೂರು ಟೂರ್ ಪ್ಯಾಕೇಜ್ ಘೋಷಣೆ
ಹಾವೇರಿ ಜಿಲ್ಲೆಯಲ್ಲಿ ಎರಡು ಕಡೆಯಿಂದ ಸಿಗಂದೂರಿಗೆ ವಿಶೇಷ ಪ್ರವಾಸ ಬಸ್ ವ್ಯವಸ್ಥೆ ಮಾಡಲಾಗಿದೆ. ಹಾವೇರಿ ಬಸ್ ನಿಲ್ದಾಣ ಮತ್ತು ರಾಣಿಬೆನ್ನೂರಿನಿಂದ ಏಕದಿನ ಪ್ರವಾಸ ಇದಾಗಿದೆ. ಈ ಪ್ರವಾಸ ಪ್ಯಾಕೇಜ್‌ಗೆ ಹೆಚ್ಚಿನ ಬೇಡಿಕೆ ಇದೆ. ಅಲ್ಲದೇ ಖಾಸಗಿ ವಾಹನಗಳನ್ನು ಬಾಡಿಗೆ ಮಾಡಿಕೊಂಡು ಬರುವವರ ಸಂಖ್ಯೆ ಸಹ ಹೆಚ್ಚಾಗಿದೆ. ಇದು ಈ ಧಾರ್ಮಿಕ ಸ್ಥಳದಲ್ಲಿ ಜನದಟ್ಟಣೆಗೆ ಕಾರಣವಾಗಿದೆ.












Click it and Unblock the Notifications