Karnataka Covid Guidelines : ಒಳಾಂಗಣ ಪ್ರದೇಶಲ್ಲಿ ಮಾಸ್ಕ್ ಕಡ್ಡಾಯ, ತಜ್ಞರ ಸಲಹೆಯಡಿ ಇಂದೇ ಮಾರ್ಗಸೂಚಿ ಬಿಡುಗಡೆ?

ಬೆಳಗಾವಿ, ಡಿಸೆಂಬರ್ 22: ಕೊರೊನಾ ತಳಿ BF7 ಪ್ರಕರಣ ಭಾರತದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮತ್ತೆ ಕೊರೊನಾ ಆತಂಕ ಸೃಷ್ಟಿಯಾಗಿದೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಲಹೆ ಮೇರೆಗೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳಲಿದೆ. ಒಳಾಂಗಣ ಪ್ರದೇಶದಲ್ಲಿ ಮಾಸ್ಕ್‌ ಕಡ್ಡಾಯವಾಗಿ ಧರಿಸಬೇಕು. ತಜ್ಞರ ಸಲಹೆ ಆಧರಿಸಿ ಸರ್ಕಾರ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಕೋವಿಡ್ ನಿಯಂತ್ರಣ ಕುರಿತು ಸಭೆ ನಡೆಯಿತು. ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ತಜ್ಞರು ಪಾಲ್ಗೊಂಡಿದ್ದರು.

ಸಭೆಯ ನಂತರ ಬೆಂಗಳೂರಿನಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಜಾಗತಿಕವಾಗಿ ಕೋವಿಡ್ ಸ್ಥಿತಿಗತಿ ಹೇಗಿದೆ ಎಂದು ತಜ್ಞರು ಅಧ್ಯಯನ ನಡೆಸಿದ್ದಾರೆ. ಈ ಕೊರೊನಾ ಓಮಿಕ್ರಾನ್ ಹೊಸ ತಳಿ BF7 ವೇಗವಾಗಿ ಹರಡುವ ಸೋಂಕಾಗಿದೆ. ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ತಜ್ಞರು ಸಭೆ ನಡೆಯಲಿದೆ. ಅಲ್ಲಿಂದ ಬರುವ ನಿರ್ದೇಶನ ಹಾಗೂ ರಾಜ್ಯದಲ್ಲಿ ನೀಡುವ ತಜ್ಞರ ಸಲಹೆ ಆಧಾರದ ಮೇರೆಗೆ ಸೋಂಕು ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು ಎಂದರು.

Mask Mandatory Iin Indoor Area, Guidelines Will Released After Expert Advice Dr.K Sudhakar

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆಗೆ ಕ್ರಮ ವಹಿಸಲಾಗುವುದು. ಶೀತ, ಗಂಟಲು ಕೆರೆತದಂತಹ ಐಎಲ್ಎ ಮತ್ತು ತಲೆನೋವು, ಉಸಿರಾಟ ಸಮಸ್ಯೆ, ದೇಹ ಉಷ್ಣಾಂಶ ಏರಿಕೆ, ಜ್ವರ ಕಂಡು ಬರುವ ಎಸ್‌ಎಆರ್‌ಐ (ಸಾರಿ) ಕೇಸ್‌ಗಳನ್ನು ತಪಾಸಣೆಗೆ ಒಳಪಡಿಸುವಂತೆ ತಜ್ಞರ ಸೂಚಿಸಿದ್ದು, ಅದನ್ನು ಪಾಲಿಸಲಾಗುವುದು. ಆಕ್ಸಿಜನ್ ಪಾಲಂಟ್ ಮಾಡಲು ನಿರ್ಧಾರ. ಜಿಲ್ಳಾಸ್ತ್ರಗಳಲ್ಲಿ ಹಾಸಿಗೆ ಮೀಸಲಿಡುವಂತೆ ತಿಳಿಸಲಾಗಿದೆ. ಕೋವಿಡ್ ಕಟ್ಟಿಹಾಕಲು ಕೈಗೊಳ್ಳಲಿರುವ ಕ್ರಮಗಳಿಗೆ ಯಾವುದೇ ಅನುದಾನದ ಕೊರತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಈ ಕೊರೊನಾ ಓಮಿಕ್ರಾನ್ ಹೊಸ ತಳಿ BF7 ಕಂಡು ಬಂದ ಮೇಲೆ ಆಸ್ಪತ್ರೆ ದಾಖಲಾತಿ ಸಂಖ್ಯೆ ಹೆಚ್ಚುತ್ತಿದೆ. ಓಮಿಕ್ರಾನ್ ತಳಿ ಬಂದಾಗಲೂ ಇಷ್ಟು ಪ್ರಮಾಣದಲ್ಲಿ ರೋಗಿಗಳು ಆಸ್ಪತ್ರೆಗೆ ದಾಖಲಾಗಿರಲಿಲ್ಲ. ಇದು ವೇಗವಾಗಿ ಹಬ್ಬು ಸೋಂಕು ಎಂದು ಸರ್ಕಾರಕ್ಕೆ ಈಗಾಗಲೇ ಮನದಟ್ಟಾಗಿದೆ. ಈ ಬಗ್ಗೆ ಅಧ್ಯಯನ ನಡೆಸಿರುವ ತಾಂತ್ರಿಕ ಸಲಹಾ ಸಮಿತಿಯು ವರದಿ ನೀಡಿದೆ ಎಂದು ತಿಳಿಸಿದರು.

Mask Mandatory Iin Indoor Area, Guidelines Will Released After Expert Advice Dr.K Sudhakar

ಮಾಲ್, ಶಾಲಾ, ಕಚೇರಿಗಳಲ್ಲಿ ಮಾಸ್ಕ್‌ ಕಡ್ಡಾಯ?

ಸದ್ಯ ರಾಜ್ಯದಲ್ಲಿ ಕೊರೊನಾ ತೀವ್ರತರ ಪರಿಸ್ಥಿತಿ ಉದ್ಭವಿಸಿಲ್ಲ. ಆದರೆ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ರಾಜ್ಯ ಸರ್ಕಾರ ಥಿಯೇಟರ್, ಮಲ್ಟಿಫ್ಲೆಕ್ಸ, ಮಾಲ್‌ಗಳಲ್ಲಿ, ಕಚೇರಿ, ಶಾಲಾ ಕಾಲೇಜುಗಳಲ್ಲಿ ಮಾಸ್ಕ್ ಕಡ್ಡಾಯಕ್ಕೆ ಚಿಂತನೆ ನಡೆಸಿದೆ. ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆ ಕೆಲವೇ ದಿನಗಳು ಬಾಕಿ ಇದೆ. ಈ ಮಧ್ಯೆ ಕೊರೊನಾ ಹೆಚ್ಚುತ್ತಿದೆ. ಈ ಆಚರಣೆಗಳಿಗೆ ನಿಯಮ ಹೇರಿದರೂ ಅಚ್ಚರಿ ಇಲ್ಲ. ಈ ಬಗ್ಗೆ ಸರ್ಕಾರ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+