ಶಿರಸಿ ಮಾರಿಕಾಂಬ ದೇವಾಲಯದಲ್ಲಿ ದಸರಾ ಸಂಭ್ರಮ
ಶಿರಸಿ, ಅಕ್ಟೋಬರ್, 21 : ನಮ್ಮ ನಾಡಹಬ್ಬದ ಸಂಭ್ರಮ ಪ್ರತಿ ಜಿಲ್ಲೆಯಲ್ಲೂ ಮೆರಗು ಕಟ್ಟುತ್ತಿದೆ. ದಸರಾ ಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ನಾಡಿನೆಲ್ಲೆಡೆ ಜರುಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬ ದೇವಾಲಯದಲ್ಲೂ ನಾನಾ ಕಾರ್ಯಕ್ರಮಗಳು ಜರುಗಲಿದೆ.
ಉತ್ತರ ಕನ್ನಡ ಜಿಲ್ಲೆ ಶಿರಸಿಯ ಪ್ರಖ್ಯಾತ ಮಾರಿಕಾಂಬಾ ದೇವಸ್ಥಾನದ ಸಭಾ ಮಂಟಪದಲ್ಲಿ ಅಕ್ಟೋಬರ್ 23ರ ಶುಕ್ರವಾರದಿಂದ ಅ.30 ರ ಶುಕ್ರವಾರದವರೆಗೆ ಪ್ರತಿನಿತ್ಯ ಸಂಜೆ ನವರಾತ್ರಿ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲಿದ್ದಾರೆ.[ಶಾಸ್ತ್ರೋಕ್ತವಾಗಿ ನವರಾತ್ರಿ ಉತ್ಸವ ಆಚರಿಸುವ ಬಗೆ ಹೇಗೆ?]

ಅಕ್ಟೋಬರ್ 23ರಿಂದ 30ರವರೆಗೆ ನಡೆಯಲಿರುವ ಕಾರ್ಯಕ್ರಮ ಪಟ್ಟಿ:
* ಅ.23 - ಶುಕ್ರವಾರ - ಮೇಘನಾ ಕುಲಕಣರ್, ಶಿರಸಿಯ ಸ್ಮಿತಾ ಹೆಗಡೆ ಮತ್ತು ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ಸದಸ್ಯರಿಂದ ಗಾಯನ ಮತ್ತು ನೃತ್ಯ ಪ್ರದರ್ಶನ
* ಅ.24 - ಶನಿವಾರ - ಇಂದುಮತಿ ಸಾಲಿಮಠ, ರವಿ ಭಜಂತ್ರಿ, ಅಜಯ್ ಸಾರಾಪುರೆ 'ಹಾಸ್ಯಸಂಜೆ'
* ಅ.25 - ಭಾನುವಾರ - ಆಶಾ ಗಣಪತಿ ಎಂ, ಕಿರಣ ಹಾನಗಲ್ಲ 'ಸಂಗೀತಸುಧೆ'
* ಅ.26 - ಪೂರ್ಣಿಮಾ ಭಟ್ಟ ಹಾಗೂ ಗದಗಿನ ವಿಜಯಕುಮಾರ ಪಾಟೀಲ ಗಾಯನ
* ಅ.27 - ಕುಮಾರಿ ಹಿತ ಅಮೃತ ಅವರಿಂದ ಭರತನಾಟ್ಯ, ಹಾವೇರಿಯ ಅಭಿನಯ ಶೇಷಗಿರಿ ಕಲಾ ತಂಡದವರಿಂದ ಶಿರಸಿಯ ಡಾ.ಶ್ರೀಪಾದ ಭಟ್ಟ ನಿರ್ದೇಶನದ 'ಇವ ನಮ್ಮವ' ನಾಟಕ. [ಬುಡಾಪೆಸ್ಟ್ ಬೆಂಗಳೂರು ಸಂಗೀತ ಹಬ್ಬದಲ್ಲಿ ಜಾನಪದ ಸುಧೆ]
* ಅ.28 - ಬೆಳಗಾವಿ ವಿಜಯಕುಮಾರ ಎನ್. ಸುಣಗಾರ ಅವರಿಂದ 'ಕೊಳಲು ವಾದನ', ಬೆಂಗಳೂರಿನ ಬಾಲಚಂದ್ರ ನಾಕೋಡ ಅವರಿಂದ ಸಂಗೀತಸುಧೆ
* ಅ.29 - ಪುಣೆಯ ಪಂ. ಕೆ. ಉಪೇಂಧ್ರ ಭಟ್ಟ ಅವರಿಂದ ದಾಸವಾಣಿ ನಂತರ ಕುಮಟಾ ಮಂಜುನಾಥ ಭಟ್ಟ ಅವರಿಂದ ಗಾಯನ ನಡೆಯಲಿದೆ.
* ಅ. 30 - ಸಂಜೆ ನವರಾತ್ರಿಯ ಕಾರ್ಯಕ್ರಮಗಳು, ಬಳಿಕ ಬಹುಮಾನ ವಿತರಣೆ












Click it and Unblock the Notifications