ಸೋಮೇಶ್ವರ ಹೋಟೆಲಿನ 'ಭಕ್ತ' ಅವರ ಮಗಳು ಮೃತ
ಉಡುಪಿ, ಡಿ.9: ಕಳೆದ ಭಾನುವಾರ ಮುಂಜಾನೆ ಪೆರ್ಡೂರು ಸಮೀಪ ನಡೆದ ಭೀಕರ ಅಪಘಾತದಲ್ಲಿ ಸೋಮೇಶ್ವರ ಹೋಟೆಲ್ ಮಾಲೀಕ ಮನೋಹರ್ ಭಕ್ತ ಹಾಗೂ ಇನ್ನಿಬ್ಬರು ಸಾವನ್ನಪ್ಪಿದ ಸುದ್ದಿ ಓದಿರುತ್ತೀರಿ. ಈ ಅಪಘಾತದಲ್ಲಿ ಗಾಯಗೊಂಡಿದ್ದ ಭಕ್ತ ಅವರ ಮಕ್ಕಳ ಪೈಕಿ ಒಬ್ಬರು ಮೃತಪಟ್ಟಿರುವ ಸುದ್ದಿ ಬಂದಿದೆ.
ಮನೋಹರ್ ಅವರು ಕುಟುಂಬ ಸಮೇತ ಮುಲ್ಕಿಯ ವೆಂಕಟರಮಣ ದೇಗುಲಕ್ಕೆ ಹೋಗಿ ಹಿಂತಿರುಗುವಾಗ ರಸ್ತೆ ಅಪಘಾತದಲ್ಲಿ ಮನೋಹರ್ ಸೇರಿ ಮೂವರು ಸಾವನ್ನಪ್ಪಿದ್ದರು. ಅಪಘಾತದಲ್ಲಿ ಮನೋಹರ್-ಸ್ವಾತಿ ದಂಪತಿ ಮಕ್ಕಳಾದ 8 ವರ್ಷದ ಮಾನಸ ಮತ್ತು 6 ವರ್ಷದ ಸಹನಾ ಅಪಾಯದಿಂದ ಪಾರಾಗಿದ್ದರು.
ಅದರೆ, ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿತ್ತು.ಈ ಪೈಕಿ ಬಾಲಕಿ ಸಂಜನಾ (6) ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ಸಾವನ್ನಪ್ಪಿದ್ದಾಳೆ. 8 ವರ್ಷದ ಮಾನಸ ಇನ್ನೂ ದುರ್ಘಟನೆಯ ಆಘಾತದಿಂದ ಚೇತರಿಸಿಕೊಂಡಿಲ್ಲ.

ಆಗುಂಬೆ ಘಾಟ್ ಇಳಿದು ಸೋಮೇಶ್ವರದಲ್ಲಿನ ಹೋಟೆಲಿನಲ್ಲಿ ನೀರ್ ದೋಸೆ ರುಚಿ ಸವಿಯುವುದೇ ಆನಂದ. ಗ್ರಾಹಕರಿಗೆ ಇಂಥ ರುಚಿ ಪರಿಚಯಿಸಿದ ಮನೋಹರ್ ಭಕ್ತ ಅವರ ಕುಟುಂಬದಲ್ಲಿ ಪುತ್ರಿ ಮಾನಸ ಬಿಟ್ಟರೆ ಮಿಕ್ಕವರೆಲ್ಲ ಇಹಲೋಕ ತ್ಯಜಿಸಿದ್ದಾರೆ.

ಹೆಬ್ರಿಯ ಶಿವಪುರದಲ್ಲಿ ಮನೋಹರ್ ಅವರಿದ್ದ ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮನೋರಮ ಭಕ್ತ(62), ಮನೋಹರ್ ಭಕ್ತ(42) ಮತ್ತು ಸ್ವಾತಿ ಭಕ್ತ(32) ಸಾವನ್ನಪ್ಪಿದರೆ, ಮಂಗಳವಾರ ಸಂಜನಾ ಸಾವು ಸಂಭವಿಸಿದೆ.

ಸೋಮೇಶ್ವರದ ಜನಪ್ರಿಯ ಹೋಟೆಲ್ ಗಳ ಪೈಕಿ ಮನೋಹರ್ ಭಕ್ತ ಅವರ ಹೋಟೆಲ್ ಕೂಡಾ ಒಂದಾಗಿದೆ. ಬಿಜೆಪಿ ಕಾರ್ಯಕರ್ತರೂ ಆಗಿದ್ದ ಮನೋಹರ್ ಅವರು ಕುಟುಂಬ ಸಮೇತ ಮುಲ್ಕಿಯ ವೆಂಕಟರಮಣ ದೇಗುಲಕ್ಕೆ ಹೋಗಿ ಹಿಂತಿರುಗುವಾಗ ಅಪಘಾತ ಸಂಭವಿಸಿತ್ತು.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ












Click it and Unblock the Notifications