Mann Ki Baat 100: ಈವರೆಗಿನ ಮನ್ ಕೀ ಬಾತ್‌ಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡ ಕನ್ನಡಿಗರು ಇವರು
ಬೆಂಗಳೂರು, ಏಪ್ರಿಲ್ 30: ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ತಿಂಗಳು ನಡೆಸಿಕೊಡುವ ರೇಡಿಯೋ ಕಾರ್ಯಕ್ರವಾದ 'ಮನ್ ಕಿ ಬಾತ್' 99 ಸಂಚಿಕೆ ಮುಗಿಸಿದೆ. ಇಂದು ಏಪ್ರಿಲ್ 30ರಂದು 100ನೇ ಸಂಚಿಕೆ ನಡೆಯಲಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಹಾಗಾದರೆ ಇದುವರೆಗೆ ನಡೆದ ಸರಣಿಗಳಲ್ಲಿ ಕರ್ನಾಟಕದ ಎಷ್ಟು ಮಂದಿ ಪ್ರಧಾನಿ ಜೊತೆ ಮಾತನಾಡಿದ್ದಾರೆ. ನಮ್ಮ ರಾಜ್ಯದ ಎಷ್ಟು ಸಾಧಕರನ್ನು ಪ್ರಧಾನಿ ಮೋದಿ ಸ್ಮರಿಸಿದ್ದಾರೆ.
ವಿಶೇಷ ಸಾಧಕರೊಂದಿಗೆ ಮಾತನಾಡಿದ್ದನ್ನು ತಿಂಗಳ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಪ್ರಸ್ತಾಪಿಸಿದ್ದಾರೆ. ಕೆಲವರನ್ನು ಹಾಡಿ ಹೊಗಳಿದ್ದಾರೆ. ರಾಜ್ಯ ದೇಶಕ್ಕೆ ಪೂಕರವಾದ ಅನೇಕ ಸಲಹೆ-ಸೂಚನೆಗಳನ್ನು ತಮ್ಮ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಕೊರೊನಾ ಸಮಯದಲ್ಲಿ ಜನರಿಗೆ ಧೈರ್ಯ ತುಂಬಿದ್ದಾರೆ. ಹೀಗೆ ಅನೇಕ ವಿಚಾರಗಳಿಗೆ ಸಾಕ್ಷಿಯಾದ 'ಮನ್ ಕಿ ಬಾತ್'ನಲ್ಲಿ ಕನ್ನಡಿಗರು, ಅವರ ಸಾಧನೆಗಳು ಸ್ಥಾನ ಗಿಟ್ಟಿಸಿಕೊಂಡಿವೆ. ಆ ಕುರಿತು ಕೆಲವು ಮಾಹಿತಿ ಇಲ್ಲಿದೆ.

ವಿದ್ಯಾರ್ಥಿನಿ ಚಿನ್ಮಯಿ ಜತೆ ಪ್ರಧಾನಿ ಮಾತು
ಸಂಸ್ಕೃತ ಹೇಳಿಕೊಡುವ 'ಸಂಸ್ಕೃತಿ ಭಾರತಿ' ಸಂಸ್ಥೆಯಲ್ಲಿ ಓದುತ್ತಿದ್ದ ಬೆಂಗಳೂರಿನ ಚಿನ್ಮಯಿ ಜೊತೆಗೆ ಪ್ರಧಾನಿ ಮೋದಿ ಮನ್ ಕಿ ಬಾತ್‌ನಲ್ಲಿ ಮಾತನಾಡಿದ್ದರು. ಅಷ್ಟೇ ಅಲ್ಲದೇ ಆ ಬಾಲಕಿ ಜೊತೆಗೆ ಪ್ರಧಾನಿ ಸಹ ಸಂಸ್ಕೃತದಲ್ಲೇ ಮಾತನಾಡಿದ್ದರು. ವಿಶೇಷವಾಗಿತ್ತು. 39ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಸಂಸ್ಥೆಯ ವಿದ್ಯಾರ್ಥಿನಿ ಚಿನ್ಮಯಿ ಅವರ ತಂದೆ ಸಂಸ್ಥೆಯ ಸಹ ಸಂಘಟನಾ ಮಂತ್ರಿಯಾಗಿದ್ದಾರೆ. ಪ್ರಧಾನಿ ಜತೆಗಿನ ಮಗಳ ಮಾತುಕತೆಗೆ ಅವರು ಹರ್ಷ ವ್ಯಕ್ತಪಡಿಸಿದ್ದರು.
ಬೆಂಗಳೂರಿನ ಸುರೇಶ್ ಕುಮಾರ್ ಸಾಧನೆ ಬಣ್ಣಿಸಿದ ಮೋದಿ
ರಾಜ್ಯ ರಾಜಧಾನಿ ಬೆಂಗಳೂರು ನಿವಾಸಿ ಪರಿಸರ ಪ್ರೇಮಿ ಸುರೇಶ್ ಕುಮಾರ್ ಅವರ ಸಾಧನೆಯನ್ನು ಮೋದಿ ಇದೇ ರೇಡಿಯೋ ಕಾರ್ಯಕ್ರಮದಲ್ಲಿ ಬಣ್ಣಿಸಿದ್ದರು. ಅವರಿಂದ ಕಲಿಯುವುದು ಸಾಕಷ್ಟಿದೆ ಎಂದು ಹೇಳಿದ್ದರು. ಚಾಮರಾಜನಗರ; ಮನ್ ಕೀ ಬಾತ್ ಪ್ರೇರಣೆ, ಬದುಕು ಕಟ್ಟಿಕೊಂಡ ಮಹಿಳೆಯು ಸುರೇಶ್ ಕುಮಾರ್ ಅವರಲ್ಲಿ ಪ್ರಕೃತಿ ಹಾಗೂ ಪರಿಸರದ ರಕ್ಷಣೆಯ ಬಗ್ಗೆ ಬಹಳ ಉತ್ಸಾಹ ತುಂಬಿದ್ದಾರೆ.
20 ವರ್ಷಗಳ ಹಿಂದೆ ಅವರು ನಗರದ ಸಹಕಾರನಗರದ ಒಂದು ಅರಣ್ಯವನ್ನು ಪುನಃ ಹಸಿರಿನಿಂದ ನಳನಳಿಸುವಂತೆ ಮಾಡುವುದಕ್ಕೆ ಮುಂದಾಗಿದ್ದರು. ಈ ಕೆಲಸ ಕಷ್ಟದಿಂದ ಕೂಡಿತ್ತು, ಆದರೆ 20 ವರ್ಷಗಳ ಹಿಂದೆ ನೆಟ್ಟ ಆ ಗಿಡಗಳು ಇಂದು ಸುಮಾರು 40 ರಿಂದ 45 ಅಡಿ ಎತ್ತರಕ್ಕೆ ಬೆಳೆದು ಬೃಹತ್ ಮರಗಳಾಗಿವೆ ಎಂದು ಅವರು ವಿವರಿಸಿದ್ದರು.

ಜೋಗುಳ ಹಾಕಿ ಪ್ರಧಾನಿ ಮನಗೆದ್ದ ಮಂಜುನಾಥ್
ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಪೆನ್ ಎ ಲೋರಿ (ಜೋಗುಳ ಗೀತೆ ರಚನೆ) ಸ್ಪರ್ಧೆಯಲ್ಲಿ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಬಿ.ಎಂ. ಮಂಜುನಾಥ್ ಅವರು ಮೊದಲ ಸ್ಥಾನ ಪಡೆದರು. ಈ ಜೋಗುಳ ಗೀತೆ ಬಗ್ಗೆ ಪ್ರಧಾನಿ ಮೋದಿಯವರು ಮನ್ ಕಿ ಬಾತ್ ನಲ್ಲಿ ಪ್ರಸ್ತಾಪಿಸಿದ್ದರು. 'ಏಕತಾ ದಿವಸದ ಅಂಗವಾಗಿ ಭಕ್ತಿಗೀತೆ, ಜೋಗುಳಪದ (ಲಾಲಿ ಹಾಡು) ಮತ್ತು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಅದಕ್ಕೆ ಮಲಗು ಕಂಡು ಎಂಬ ಜೋಗುಳ ಗೀತೆಯನ್ನು ಮಂಜುನಾಥ್ ಬರೆದು ಕಳುಹಿಸಿದ್ದರು. ಇದನ್ನು ಇಷ್ಟಪಟ್ಟು ಮೋದಿ ಆ ಬಗ್ಗೆ ಮಾತನಾಡಿದ್ದರು.
ಚನ್ನಪಟ್ಟಣ ಗೊಂಬೆ ಬಗ್ಗೆ ಪ್ರಸ್ತಾಪಿಸಿದ ಮನ್ ಕಿ ಬಾತ್
ಕೊರೊನಾ ಸಮಯದಲ್ಲಿ ಪ್ರಧಾನಿ ಮೋದಿ ಮನ್ ಕಿ ಬಾತ್‌ನಲ್ಲಿ ಮಂಡ್ಯ ಜಿಲ್ಲೆಯ ಚನ್ನಪಟ್ಟಣದ ಸಾಂಪ್ರದಾಯಿಕ ಬೊಂಬೆಗಳ ಬಗ್ಗೆ ಮಾತನಾಡಿದ್ದರು. ಭಾರತವನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಜವಾಬ್ದಾರಿ ನಮ್ಮ ಮೇಲಿದೆ. ಹೀಗಾಗಿ ನಮ್ಮ ದೇಶದಲ್ಲಿ ಸ್ಥಳೀಯ ಆಟಿಕೆಗಳ ಶ್ರೀಮಂತ ಸಂಪ್ರದಾಯವಿದೆ. ಉತ್ತಮ ಆಟಿಕೆಗಳನ್ನು ತಯಾರಿಸುವಲ್ಲಿ ಪರಿಣತಿಯನ್ನು ಹೊಂದಿರುವ ಅನೇಕ ಪ್ರತಿಭಾವಂತ ಮತ್ತು ನುರಿತ ಕುಶಲಕರ್ಮಿಗಳು ಇದ್ದಾರೆ. ಭಾರತದ ಕೆಲವು ಭಾಗಗಳಿಂದು ಆಟಿಕೆ ತಯಾರಿಕಾ ಕೇಂದ್ರಗಳಾಗಿ ಬೆಳೆಯುತ್ತಿವೆ ಎಂದು ಚನ್ನಪಟ್ಟಣವನ್ನು ಬಣ್ಣಿಸಿದ್ದರು.
ಕರ್ನಾಟಕದ ವಿದ್ಯಾರ್ಥಿಗಳ ಈ ಹಿಂದೊಮ್ಮೆ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದರು. ವಿವಿಧ ವಿಚಾರಗಳ ಕುರಿತು ವಿದ್ಯಾರ್ಥಿಗಳು ತಮಗೆ ಪತ್ರ ದಿದ್ದು, ಅವುಗಳನ್ನು ಓದಲು ಹೆಚ್ಚು ಸಂತೋಸವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆ ಬಗ್ಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಟ್ವೀಟ್ ಮಾಡಿದ್ದರು.
ಗದಗಿನ ಕಲಾಚೇತನ ಪ್ರಸ್ತಾಪ
ಗದಗ ಜಿಲ್ಲೆಯ ಕಲಾಚೇತನ ಸಂಸ್ಥೆಯ ಕಾವೆಂಶ್ರೀ ಕಲಾಸೇವೆಯನ್ನು ಪ್ರಸ್ತಾಪಿಸಿದ್ದರು.ಕರ್ನಾಟಕದ ಕಲೆ ಮತ್ತು ಸಂಸ್ಕೃತಿ ಪುನರುಜ್ಜಿವನ ಗೊಳಿಸುವಲ್ಲಿ ಕಾಲಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ (ಕಾವೆಂಶ್ರೀ) 25 ವರ್ಷಗಳಿಂದ ಪಟ್ಟು ಬಿಡದ ರೀತಿಯಲ್ಲಿ ತೊಡಗಿಕೊಂಡಿದ್ದಾರೆ. ಅವರ ಕಲಾಪೋಷಣೆ ತಪಸ್ಸಿನಂತೆ ಮುಂದುವರಿಯುತ್ತಿದೆ ಎಂದು ಪ್ರಧಾನಿ ಹೇಳಿದ್ದರು.
ಇದಷ್ಟೇ ಅಲ್ಲದೇ ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕನನ್ನು ಸ್ಮರಿಸಿದ್ದರು. ಕಲಾವಿದರು, ಸಾಹಿತಿಗಳು, ಆರೋಗ್ ಸೇರಿದಂತೆ ಸಾರ್ವಜನಿಕ ವಲದದಲ್ಲಿ ವಿಶೇಷ ಸೇವೆ-ಸಾಧನೆ ಮಾಡಿದವರನ್ನು ಸೇರಿದಂತೆ ಸಾಕಷ್ಟು ಕನ್ನಡಿಗರನ್ನು ಪ್ರಧಾನಿ ಸ್ಮರಿಸಿದ ಮಾತನಾಡಿದ್ದಾರೆ.












Click it and Unblock the Notifications