Get Updates
Get notified of breaking news, exclusive insights, and must-see stories!

National Highway: 30 ದಿನ ಮಂಗಳೂರು-ಮೂಡಬಿದ್ರಿ ಹೆದ್ದಾರಿ ರಸ್ತೆ ಬಂದ್, ಸಂಚಾರ ಸಲಹೆಗಳು ಇಲ್ಲಿವೆ

ಮಂಗಳೂರು: ಮಂಗಳೂರು ತಾಲೂಕಿನ ಬಜಪೆ ಎಡಪದವಿನ ಮಚ್ಚೂರು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕಾಮಗಾರಿ ನಡೆಯುತ್ತಿದೆ. ಪ್ರಸ್ತುತ ಮಂಗಳೂರಿನಿಂದ ಮೂಡಬಿದ್ರೆ ಕಡೆಗೆ ಹಾಗೂ ಮೂಡಬಿದ್ರೆಯಿಂದ ಮಂಗಳೂರು ಕಡೆಗೆ ವಾಹನಗಳ ಓಡಾಟಕ್ಕೆ ಇದ್ದ ಹಳೆ ರಸ್ತೆಯು ಘನ ವಾಹನಗಳ ಓಡಾಟದಿಂದ ಬಿರುಕು ಬಿಟ್ಟು ಅಲ್ಲಲ್ಲಿ ಕುಸಿಯಲು ಪ್ರಾರಂಭಿಸಿದೆ. ಹೀಗಾಗಿ ಸಂಚಾರ ಸಲಹೆಗಳನ್ನು ನೀಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ದಿನಾಂಕ ಫೆಬ್ರವರಿ 12 ರಿಂದ ಮಾರ್ಚ್ 13 ರವರೆಗೆ 30 ದಿನಗಳ ಕಾಲ ರಸ್ತೆ ದುರಸ್ಥಿ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಈ ಸಂಬಂಧ ಮಂಗಳೂರಿನಿಂದ ಮೂಡಬಿದ್ರೆ ರಸ್ತೆ ಬಂದ್ ಆಗಲಿರಲಿದೆ. ಪರ್ಯಾಯ ಮಾರ್ಗಗಳನ್ನು ನೀಡಲಾಗಿದೆ.

Mangaluru-Moodbidri NH 169

ಸದರಿ ರಸ್ತೆ ದುರಸ್ಥಿ ಕಾಮಗಾರಿ ನಡೆಯುವ ಸಮಯ ಸಾರ್ವಜನಿಕ ಹಿತದೃಷ್ಠಿಯಿಂದ ಮಂಗಳೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಮತ್ತು ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ತಾತ್ಕಾಲಿಕವಾಗಿ ಈ ಕೆಳಗಿನ ಬದಲಿ ರಸ್ತೆಗಳನ್ನು ಉಪಯೋಗಿಸಬೇಕಿದೆ.

ಪರ್ಯಾಯ ಮಾರ್ಗಗಳು

1. ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಬರುವಂತಹ ಲಾರಿಗಳು ವಿದ್ಯಾಗಿರಿ ಮುಲ್ಕಿ ಕ್ರಾಸ್‌ನಲ್ಲಿ ಬಲಕ್ಕೆ ತಿರುಗಿ ಕಿನ್ನಿಗೋಳಿ ರಸ್ತೆಯಲ್ಲಿ ಸಂಚರಿಸಿ ಪಕ್ಷಿಕೆರೆ ಕ್ರಾಸ್ ನಲ್ಲಿ ಬಲಕ್ಕೆ ತಿರುಗಿ ಮುಲ್ಕಿ ಜಂಕ್ಷನ್ - ಸುರತ್ಕಲ್ ಮೂಲಕ ಮಂಗಳೂರು ಕಡೆಗೆ ಸಂಚರಿಸುವುದು. ಅಲ್ಲಿಂದ ಮಂಗಳೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಸಂಚರಿಸುವ ಲಾರಿಗಳು ಇದೇ ರಸ್ತೆಯಲ್ಲಿ ಸಂಚರಿಸಬೇಕಿದೆ.

2. ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಇತರ ಎಲ್ಲಾ ಲಘುವಾಹನಗಳು ವಿದ್ಯಾಗಿರಿ ಮುಲ್ಕಿ ಕ್ರಾಸ್‌ನಲ್ಲಿ ಬಲಕ್ಕೆ ತಿರುಗಿ ಕಿನ್ನಿಗೋಳಿ ರಸ್ತೆಯಲ್ಲಿ ಸಂಚರಿಸಬೇಕು. ಮೂರುಕಾವೇರಿ- ಕಟೀಲು-ಪೆರ್ಮುದೆ-ಬಜಪೆ- ಮೂಲಕ ಅಥವಾ ಪಕ್ಷಿಕೆರೆ ಕ್ರಾಸ್ ನಲ್ಲಿ ಎಡಕ್ಕೆ ತಿರುಗಿ ಹಳೆಯಂಗಡಿ- ಸುರತ್ಕಲ್ ಮೂಲಕ ಮಂಗಳೂರು ಕಡೆಗೆ ಸಂಚರಿಬೇಕು. ಮಂಗಳೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಸಂಚರಿಸುವ ಇತರ ಎಲ್ಲಾ ಲಘು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸಬೇಕು.

3. ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಬರುವ ಸಾರ್ವಜನಿಕ ರೂಟ್ ಬಸ್ಸುಗಳು ಮತ್ತು ಸ್ಥಳೀಯರ ಲಘು ವಾಹನಗಳು ಮಾತ್ರ ದಡ್ಡಿ ಕಲ್ಪನೆ ದೂಮಚೆಡವು ಕ್ರಾಸ್ ಬಳಿ ಬಲಕ್ಕೆ ತಿರುಗಿ - ಪುಮಾರ್ ಪದವು ಕ್ರಾಸ್ - ಮಂಜನ ಕಟ್ಟೆ ಕ್ರಾಸ್ - ಅರ್ಜುನಕೋಡಿ - ಈಶ್ವರಕಟ್ಟೆ ಕ್ರಾಸ್ - ಮುಚ್ಚೂರು ಕ್ರಾಸ್ ಬಳಿ ಬಲಕ್ಕೆ ತಿರುಗಿ ಕೈಕಂಡ ಗುರುಪುರ ಮೂಲಕ ಮಂಗಳೂರು ಕಡೆಗೆ ಸಂಚರಿಸಬೇಕು.

4. ಮಂಗಳೂರು ಕಡೆಯಿಂದ ಗುರುಪುರ-ಕೈಕಂಬ ಮೂಲಕ ಮೂಡಬಿದ್ರೆ ಕಡೆಗೆ ಹೋಗುವ ಸಾರ್ವಜನಿಕ ಬಸ್ಸುಗಳು ಮತ್ತು ಸ್ಥಳೀಯರ ಲಘು ವಾಹನಗಳು ಮಾತ್ರ ಗಂಜಿಮಠದಿಂದ ಮುಂದೆ ಮುಚ್ಚೂರು ಕ್ರಾಸ್ ಬಳಿ ಎಡಕ್ಕೆ ತಿರುಗಬೇಕು. ಅಲ್ಲಿಂದ ಈಶ್ವರ ಕಟ್ಟೆ ಕ್ರಾಸ್-ಅರ್ಜುನಕೋಡಿ - ಮಂಜನ ಕಟ್ಟೆ ಕ್ರಾಸ್ -ಪುಮಾರ್ ಪದವು ಕ್ರಾಸ್- ದಡ್ಡಿ ಕಲ್ಪನೆ ದೂಮಚೆಡವು ಕ್ರಾಸ್ ಬಳಿ ಎಡಕ್ಕೆ ಸಂಚರಿಸಿ ಮೂಡಬಿದ್ರೆ ಕಡೆಗೆ ಸಂಚರಿಸಬಹುದು.

5. ಮಂಗಳೂರು ಕಡೆಯಿಂದ ಮೂಡಬಿದ್ರೆ ಮೂಲಕ -ಕಾರ್ಕಳ ಕಡೆಗೆ ಸಂಚರಿಸುವ ಎಲ್ಲಾ ಲಾರಿಗಳು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸುರತ್ಕಲ್-ಮುಲ್ಕಿ-ಪಡುಬಿದ್ರೆಯಿಂದಾಗಿ ಕಾರ್ಕಳ ಕಡೆಗೆ ಸಂಚರಿಸಬೇಕು. ಮಾರ್ಗ ಬದಲಾವಣೆ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾದ್ಯತೆಗಳು ಇದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+