ಮಂಗಳೂರು ಏರ್‌ಪೋರ್ಟ್‌ನಲ್ಲಿ ಬಾಂಬ್ ಇಟ್ಟಿದ್ದಾಗಿ ಬೆದರಿಸಿದ ಉಗ್ರಗಾಮಿ ಸಂಘಟನೆ
ಮಂಗಳೂರು, ಡಿಸೆಂಬರ್ 29: ರಾಜಧಾನಿ ಬೆಂಗಳೂರಿನಲ್ಲಿ ಶಾಲೆಗಳಿಗೆ ಬಾಂಬ್ ಇಟ್ಟಿದ್ದಾಗಿ ಈ ಮೇಲೆ ಸಂದೇಶ ಕಳಹಿಸಿದ್ದ ದುಷ್ಕರ್ಮಿಗಳ ಕೃತ್ಯ ಬೆಳಕಿಗೆ ಬಂದಿತ್ತು. ಇದೀಗ ನಿತ್ಯ ಸಾವಿರಾರು ಮಂದಿ ಪ್ರಯಾಣ ಮಾಡುವ ಕರಾವಳಿಯ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಉಗ್ರ ಸಂಘಟನೆಯೊಂದು ಸಂದೇಶ ರವಾನಿಸಿದೆ.
ಹೌದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Mangaluru Airport) ಹುಸಿ ಬಾಂಬ್ ಬೆದರಿಕೆ ಬಂದಿದೆ. ಉಗ್ರ ಸಂಘಟನೆ ಘೋಷಿಸಿಕೊಂಡವರಿಂದಲೇ ಇ-ಮೇಲ್ ಮೂಲಕ ಡಿಸೆಂಬರ್ 26ರಂದು ಸಂದೇಶ ಬಂದಿದೆ. ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದು, ಸ್ಪೋಟಿಸುವುದಾಗಿ [email protected] ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿತ್ತು.

ಸಂದೇಶ ನೋಡುತ್ತಿದ್ದಂತೆ ಅದಾನಿ ಆಡಳಿತದ ಮಂಗಳೂರು ವಿಮಾನ ನಿಲ್ದಾಣದ ಮುಖ್ಯಸ್ಥುರು ಬಜಪೆ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದರು. ಪೊಲೀಸರು ಕೂಡಲೇ ಎಫ್‌ಐಆರ್ ದಾಖಲಿಸಿಕೊಂಡು ತನಿಖೆಗೆ ಇಳಿದರು. ಸದ್ಯ ಕೋರ್ಟ್ ಅನುಮತಿ ಸಮೇತ ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ) 507 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಮಾಣ ನಿಲ್ದಾಣ ಸಂಪೂರ್ಣ ಶೋಧ
'ಫನಿಂಗ್ (FUNING) ಹೆಸರು ಉಗ್ರ ಸಂಘಟನೆಯಿಂದ ಈ ಮೇಲ್ ಐಡಿ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಡಿಸೆಂಬರ್ 26ರಂದು ಹುಸಿ ಬಾಂಬ್ ಕರೆ ಬಂದಿದೆ. ಇದನ್ನು ಏರ್‌ಪೋರ್ಟ್ ಆಡಳಿತ ಮಂಡಳಿಯು ಮರುದಿನ ನೋಡಿದ್ದಾರೆ.ಇವರು ನೀಡಿದ ದೂರಿನ ಮೇಲೆ ಹೈ ಅಲರ್ಟ್ ಆದ ಪೊಲೀಸರು, ನಿಲ್ದಾಣದಲ್ಲಿ ಇಂಚಿಂಚೂ ಜಾಗವನ್ನು ತಪಾಸಣೆಗೆ ಒಳಪಡಿಸಿದ್ದಾರೆ.
ಬಾಂಬ್ ಸ್ಕ್ವಾಡ್, ಭದ್ರತಾ ತಂಡದ ಸದಸ್ಯರೆಲ್ಲರು ಬಾಂಬ್ ಇಟ್ಟ ಬಗ್ಗೆ ಅಗತ್ಯ ಎಲ್ಲ ಪರಿಶೀಲನೆ ನಡೆಸಿದ್ದಾರೆ. ತೀವ್ರ ಶೋಧದ ಬಳಿಕ ಇದು ಹುಸಿ ಬಾಂಬ್ ಎಂಬುದು ಖಚಿತವಾಗಿದೆ. ಸದ್ಯ ಎಫ್‌ಐಆರ್ ದಾಖಲಾಗಿದ್ದು, ಎಲ್ಲ ಆಯಾಮದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಮುಂದಿನ ಹಂತದ ಕ್ರಮಗಳನ್ನು ಕೈಗೊಳ್ಳಲಿದ್ದಾರೆ.
ಏಳು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ?
ಇದರೊಂದಿಗೆ ಮುಂಬೈ, ಅಹ್ಮದಾಬಾದ್, ಲಕ್ನೊ, ಜೈಪುರ, ಗುವಾಹಟಿ, ತಿರುವನಂತಪುರಂನ ವಿಮಾನ ನಿಲ್ದಾಣಗಳು ಸೇರಿದಂತೆ ಅದಾನಿ ಗ್ರೂಪ್ ಹಾಗೂ ಖಾಸಗಿ ಮಾಲಕತ್ವದ 7 ವಿಮಾನ ನಿಲ್ದಾಣಗಳಿಗೆ ಈ ಹುಸಿ ಬಾಂಬ್ ಬೆದರಿಕೆ ಬಂದಿದೆ ಎನ್ನಲಾಗಿದೆ. ಸದ್ಯ ತನಿಖೆ ಮುಂದುವರಿದಿದ್ದು, ಇ ಮೇಲ್ ಸಂದೇಶ ಕಳುಹಿಸಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.












Click it and Unblock the Notifications