ಕನಕ ಭಕ್ತರಿಗಾಗಿ ತೆರೆದಿದೆ 'ಕನಕ ಕಿಂಡಿ' ವೆಬ್ಬಾಗಿಲು
ಕೊಣಾಜೆ, ನ.22: ದಾಸ ಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರ ಅಧ್ಯಯನ ಕುರಿತಾಗಿ ಎಲ್ಲರಿಗೂ ಪ್ರಯೋಜನವಾಗಲಿ ಎಂದು ಮಂಗಳೂರು ವಿಶ್ವವಿದ್ಯಾಲಯವು 'ಕನಕನಕಿಂಡಿ' ಎಂಬ ಹೆಸರಿನಲ್ಲಿ ವೆಬ್ ಸೈಟ್ ಚಾಲ್ತಿಗೆ ಬಂದಿದೆ. ಮಂಗಳೂರು ವಿವಿ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಕನಕದಾಸ ಅಧ್ಯಯನ ಪೀಠದ ಹತ್ತರ ಸಂಭ್ರಮಾಚರಣೆ ಸಮಾರಂಭದಲ್ಲಿ ವಿವಿಯ ಉಪ ಕುಲಪತಿ ಪ್ರೊ.ಟಿ.ಸಿ. ಶಿವಶಂಕರ ಮೂರ್ತಿ ಈ ವಿಷಯ ತಿಳಿಸಿದ್ದಾರೆ.
'ಕನಕಕಿಂಡಿ' ವೆಬ್ಬಾಗಿಲು ದರ್ಶನಕ್ಕೆ ಇಲ್ಲಿ ಭೇಟಿ ನೀಡಿ.

ಮಂಗಳೂರು ವಿವಿಯ ವತಿಯಿಂದ 'ಕನಕ ಚಿಂತನ' ಪ್ರಚಾರೋಪನ್ಯಾಸ ಹಾಗೂ 'ಕನಕ ತತ್ವ ಚಿಂತನ ಪ್ರಚಾರೋಪನ್ಯಾಸ' ಕಾರ್ಯಕ್ರಮ 'ಕುಲಕುಲವೆಂದು ಹೊಡೆದಾಡದಿರಿ' - ಸಮಕಾಲೀನ ಸಂವಾದ ಕಾರ್ಯಕ್ರಮವನ್ನು ಗುರುವಾರ ವಿವಿಯ ಹಳೆಯ ಸೆನೆಟ್ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರ, ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ಉದ್ಘಾಟಿಸಿದರು.
'ಜಾತಿ ವ್ಯವಸ್ಥೆ ಇಂದು ಅಗೋಚರವಾಗಿ ಹಿಂದೆಂದಿಗಿಂತಲೂ ಅಪಾಯಕಾರಿ ಮಟ್ಟದಲ್ಲಿ ಬೆಳೆಯುತ್ತಿದೆ. ಸಮಕಾಲೀನ ವಿದ್ಯಮಾನಗಳತ್ತ ಗಮನ ಹರಿಸಿದಾಗ ಜಾತಿ ವ್ಯವಸ್ಥೆಯನ್ನು ಯಥಾ ಸ್ಥಿತಿಯಲ್ಲಿ ಮುಂದುವರಿಸಿಕೊಂಡು ಹೋಗುವ ಹುನ್ನಾರ ಈಗ ನಡೆಯುತ್ತಿದೆ. ಇದರೊಂದಿಗೆ ಅನಿಯಂತ್ರಿತ ಖಾಸಗೀಕರಣ, ಕೋಮುವಾದ ಮತ್ತು ಸರ್ವಾಧಿಕಾರ ಧೋರಣೆ ಸಮಾಜವನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಅಮೀನ್ ಮಟ್ಟು ಅಭಿಪ್ರಾಯಪಟ್ಟರು.
ಮಡೆಸ್ನಾನ, ಬೆತ್ತಲೆಸೇವೆ ಹಾಗೂ ಮೂಢನಂಬಿಕೆಗಳಂತಹ ವೌಢ್ಯಗಳು ತೊಲಗದೆ ಸಮಾಜ ಎಂದಿಗೂ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಇದನ್ನು ನಿಯಂತ್ರಿಸಲು ಸರಕಾರ ಕಾನೂನು ರಚಿಸಲು ಮುಂದಾದಾಗ ಇದಕ್ಕೂ ಅಪಸ್ವರ ಕೇಳಿ ಬರುತ್ತಿದೆ.
ಹಿಂದೂ ಸಮಾಜವನ್ನು ರಕ್ಷಿಸುತ್ತೇವೆ ಎಂದು ಪ್ರೋತ್ಸಾಹ ಕೊಡುವ ಹಿಂದೂ ಸಂಘಟನೆಗಳ ಹೋರಾಟ ಪ್ರಾಮಾಣಿಕವಾಗಿದ್ದರೆ ಅವರಿಗೆ ಕನಕದಾಸರು, ಬಸವಣ್ಣ ಮುಂತಾದವರು ಮಾದರಿಯಾಗಬೇಕಿತ್ತು. ಅಂಥವರ ತತ್ವಗಳನ್ನು ಹಿಂದೂ ಮುಖಂಡರು ಅನುಸರಿಸಿಕೊಂಡು ಬಂದಿದ್ದರೆ ಇವತ್ತು ಹಿಂದೂ ಧರ್ಮವು ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದಂತೆ ವಿಶ್ವವ್ಯಾಪಿಯಾಗಬಹುದಿತ್ತು ಎಂದರು.
ಕನಕದಾಸರು ಕೇವಲ ದಾಸ ಶ್ರೇಷ್ಠರಲ್ಲ. ಅವರಲೊಬ್ಬ ಸಮಾಜ ಸುಧಾರಕನೂ ಇದ್ದ. ಮನುಜನ ಸರ್ವಾಂಗೀಣ ಅಭಿವೃದ್ಧಿಗೆ ಜಾತಿ ಒಂದು ತೊಡಕು ಎಂಬುದನ್ನು ಅವರು ಅಂದಿನ ಕಾಲದಲ್ಲೇ ಕಂಡುಕೊಂಡಿದ್ದರು. ಇದಕ್ಕಾಗಿ ಜಾತಿ ಪಿಡುಗನ್ನು ತೊಲಗಿಸಲು ಅವರು ಮಾಡಿರುವ ಹೋರಾಟಗಳು ಇಂದಿಗೂ ಪ್ರಸ್ತುತ ಎಂದು ಅಮೀನ್ ಮಟ್ಟು ನುಡಿದರು.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications