ಮಂಗಳೂರು ಚಲೋಗೆ ಬೆಂಗಳೂರಲ್ಲಿ ತಡೆ, ನಾಯಕರು ವಶಕ್ಕೆ

Recommended Video

      ಮಂಗಳೂರು ಚಲೋಗೆ ಬೆಂಗಳೂರಲ್ಲಿ ತಡೆ , ನಾಯಕರು ಪೊಲೀಸರ ವಶಕ್ಕೆ| Oneindia Kannada

      ಬೆಂಗಳೂರು, ಸೆಪ್ಟೆಂಬರ್ 05 : 'ಮಂಗಳೂರು ಚಲೋ' ಜಾಥಾ ಹೊರಟಿದ್ದ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಮಂಗಳೂರಿಗೆ ಹೊರಟಿದ್ದ ಜಾಥಾವನ್ನು ಪೊಲೀಸರು ಬೆಂಗಳೂರಿನಲ್ಲಿಯೇ ತಡೆದರು.

      ಮಂಗಳವಾರ ಬೆಳಗ್ಗೆ ಫ್ರೀಡಂಪಾರ್ಕ್‌ನಿಂದ ಬಿಜೆಪಿ ನಾಯಕರು ಮಂಗಳೂರಿಗೆ ಬೈಕ್ ಜಾಥಾ ಹೊರಡಬೇಕಿತ್ತು. ಆದರೆ, ಫ್ರೀಡಂಪಾರ್ಕ್‌ಗೆ ಬರದಂತೆ ನಗರದ ಹಲವು ಕಡೆ ಕಾರ್ಯಕರ್ತರನ್ನು ಪೊಲೀಸರು ತಡೆದರು. ಆದರೂ, ಹಲವು ಬೈಕ್‌ಗಳಲ್ಲಿ ಕಾರ್ಯಕರ್ತರು ಆಗಮಿಸಿದ್ದರು.

      Mangalauru Chalo : BJP leaders detained in Bengaluru

      ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪ್ರತಾಪ್ ಸಿಂಹ, ಮಾಜಿ ಡಿಸಿಎಂ ಆರ್.ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಅರವಿಂದ್ ಲಿಂಬಾವಳಿ ಸೇರಿದಂತೆ ಹಲವು ನಾಯಕರು ಆಗಮಿಸಿದ್ದರು. ಆದರೆ, ಜಾಥಾ ಹೊರಡಲು ಪೊಲೀಸರು ಅವಕಾಶ ನೀಡಲಿಲ್ಲ.

      ಮೊದಲು ಕಾರ್ಯಕರ್ತರು ಆಗಮಿಸಿದ್ದ ಬೈಕ್‌ಗಳನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದುಕೊಂಡರು. ಇದನ್ನು ಖಂಡಿಸಿ ಬಿಜೆಪಿ ನಾಯಕರು ಧರಣಿ ಆರಂಭಿಸಿದರು. ತಕ್ಷಣ ಪೊಲೀಸರು ಅವರನ್ನು ವಶಕ್ಕೆ ಪಡೆಯಲು ಮುಂದಾದರು. ಆಗ ರಸ್ತೆ ಮಧ್ಯೆ ಕುಳಿತು ನಾಯಕರು ಧರಣಿ ಆರಂಭಿಸಿದರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

      ಆಗ ಪೊಲೀಸರು ನಾಯಕರು, ಕಾರ್ಯಕರ್ತರನ್ನು ವಶಕ್ಕೆ ಪಡೆಯಲು ಮುಂದಾದರು. ಈ ವೇಳೆ ಪ್ರತಾಪ್ ಸಿಂಹ ಅವರು ಮಫ್ತಿಯಲ್ಲಿದ್ದ ಪೊಲೀಸರಿಂದ ಬಿಡಿಸಿಕೊಳ್ಳಲು ಪ್ರಯತ್ನ ನಡೆಸಿದರು. ನಾಯಕರನ್ನು ಸುತ್ತುವರೆದ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದು, ಸಿರ್ಸಿ ಸರ್ಕಲ್ ಬಳಿ ಇರುವ ಸಿಎಆರ್ ಮೈದಾನಕ್ಕೆ ಕರೆದುಕೊಂಡು ಹೋದರು.

      ವಿವಿಧ ಜಿಲ್ಲೆಗಳಲ್ಲಿಂದ ಹೊರಟಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರ, ಬೆಳಗಾವಿ, ಬಳ್ಳಾರಿ ಮುಂತಾದ ಕಡೆ ಮಂಗಳೂರು ಚಲೋ ಹೊರಟಿದ್ದ ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಿಂದೂ ಸಂಘಟನೆಗಳ ಮುಖಂಡರ ಹತ್ಯೆಗಳನ್ನು ಖಂಡಿಸಿ ಮಂಗಳೂರು ಚಲೋ ಆಯೋಜನೆ ಮಾಡಲಾಗಿದೆ.

      ಹುಬ್ಬಳ್ಳಿ, ಶಿವಮೊಗ್ಗ, ಮೈಸೂರು, ಬೆಂಗಳೂರು, ಚಿಕ್ಕಮಗಳೂರಿನಿಂದ ಬೈಕ್ ಜಾಥಾ ಇಂದು ಹೊರಟು, ಸೆಪ್ಟೆಂಬರ್ 7 ರಂದು ಮಂಗಳೂರು ತಲುಪಬೇಕು. ಅಂದು ಅಲ್ಲಿ ಬೃಹತ್ ಸಮಾವೇಶ ನಡೆಸಲು ಯುವಮೋರ್ಚಾ ಯೋಜನೆ ರೂಪಿಸಿದೆ. ಆದರೆ, ಹಲವು ಜಿಲ್ಲೆಗಳಲ್ಲಿ ಬೈಕ್ ಜಾಥಾ ನಡೆಸಲು ಪೊಲೀಸರು ಅನುಮತಿ ನೀಡಿಲ್ಲ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+