ಮಂಡ್ಯ ಅಮೃತ ಮಹೋತ್ಸವಕ್ಕೆ ಲಾಂಛನ, ಘೋಷವಾಕ್ಯ ರಚಿಸಿ
ಮಂಡ್ಯ, ಜ.5: ಮೈಸೂರಿನಿಂದ ಬೇರ್ಪಟ್ಟು ಮಂಡ್ಯ ಜಿಲ್ಲೆ ರಚನೆಯಾಗಿ 75 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಅಮೃತ ಮಹೋತ್ಸವ ಆಚರಿಸಲಾಗುತ್ತಿದ್ದು, ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲೂ ಬಳಸಲು ಸೂಕ್ತವಾದ ಒಂದು ಲಾಂಛನ (ಲೋಗೋ) ಮತ್ತು ಮೂರು ಘೋಷವಾಕ್ಯಗಳನ್ನು ರಚಿಸಬೇಕಾಗಿದೆ.
ಮಂಡ್ಯ ಜಿಲ್ಲೆಯ ಇತಿಹಾಸ, ಪರಂಪರೆ, ಸಂಸ್ಕೃತಿಯನ್ನು, ಸಂಪ್ರದಾಯ ಮುಂತಾದವುಗಳನ್ನು ಬಿಂಬಿಸುವ ಒಂದು ಲಾಂಛನ ಹಾಗೂ ಮೂರು ಘೋಷವಾಕ್ಯಗಳನ್ನು ಸಾರ್ವಜನಿಕರಿಂದ ಪಡೆಯಲು ಉದ್ದೇಶಿಸಲಾಗಿದ್ದು, ಆಯ್ಕೆಯಾಗುವ ಅತ್ಯುತ್ತಮ ಲಾಂಛನ ಮತ್ತು ಘೋಷವಾಕ್ಯಗಳಿಗೆ ಪ್ರತ್ಯೇಕವಾಗಿ ನಗದು ಬಹುಮಾನವನ್ನು ನೀಡಲಾಗುತ್ತದೆ.

ಘೋಷವಾಕ್ಯವನ್ನು ಲಾಂಛನದಲ್ಲಿ ಸೇರಿಸಿ ಸಹ ಕೊಡಬಹುದು ಅಥವಾ ಪ್ರತ್ಯೇಕವಾಗಿಯೂ ಕೊಡಬಹುದು. ಲಾಂಛನ ನೋಡಲು ಸರಳವಾಗಿ, ಸುಂದರವಾಗಿ, ಆಕರ್ಷಕವಾಗಿ ಹಾಗೂ ಅರ್ಥಪೂರ್ಣವಾಗಿರಬೇಕು. ಸ್ವಂತ ಸೃಜನಶೀಲತೆಯಿಂದ ಕೂಡಿರಬೇಕು.
ಒಬ್ಬರಿಗೆ ಗರಿಷ್ಠ ಮೂರು ಲಾಂಛನ ಹಾಗೂ ಮೂರು ಘೋಷವಾಕ್ಯಗಳನ್ನು ಕಳುಹಿಸಲು ಕೊಡಲು ಅವಕಾಶವಿದ್ದು, 2015ರ ಜನವರಿ 12ರ ಸಂಜೆ 5 ಗಂಟೆಯೊಳಗೆ ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹೆಚ್.ಕೆ.ವೀರಣ್ಣಗೌಡ ರಸ್ತೆ, ಮಂಡ್ಯ ಇಲ್ಲಿಗೆ ಸಲ್ಲಿಸಬೇಕೆಂದು ಅಮೃತ ಮಹೋತ್ಸವದ ಪ್ರಚಾರ ಸಮಿತಿ ಕಾರ್ಯಾಧ್ಯಕ್ಷರಾದ ಡಾ.ಎಚ್.ಎಲ್. ನಾಗರಾಜು ಅವರು ಮನವಿ ಮಾಡಿದ್ದಾರೆ.












Click it and Unblock the Notifications