Man-Animal Conflict: ಟಾಸ್ಕ್‌ಫೋರ್ಸ್ ಆಧುನಿಕರಣಕ್ಕೆ ರೂ.10 ಕೋಟಿ ಬಿಡುಗಡೆ
ಬೆಂಗಳೂರು, ಫೆಬ್ರವರಿ 20: ಕರ್ನಾಟಕದ ಅರಣ್ಯ ಪ್ರದೇಶಗಳ ಭಾಗದಲ್ಲಿ ಉಂಟಾಗುತ್ತಿರುವ ಮಾನವ ಮತ್ತು ಪ್ರಾಣಿ ಸಂಘರ್ಷ ತಡೆಗೆ ರಾಜ್ಯ ಸರ್ಕಾರ ಕಾರ್ಯಪಡೆಗಳನ್ನು ರಚಿಸಿದೆ. ಈ ಕಾರ್ಯಪಡೆ ಗಳ ಸುಧಾರಣೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ.
ಹೌದು, ಮಾನವ-ಪ್ರಾಣಿ ಸಂಘರ್ಷ ತಡೆಗೆ ವಿವಿಧ ಕಾರ್ಯಪಡೆಗಳನ್ನು (ಟಾಸ್ಕ್‌ಫೋರ್ಸ್) ಸರ್ಕಾರ ರಚಿಸಿದೆ. ಈ ಕಾರ್ಯಪಡೆಗಳನ್ನು ಆಧುನೀಕರಣಗೊಳಿಸಲು, ಹೊಸ ತಂತ್ರಜ್ಞಾನಗಳ ಅಳವಡಿಕೆಗೆ ಸಹಾಯವಾಗಲೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚಿನ ಬಜೆಟ್‌ನಲ್ಲಿ 10 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದರು.

ಇದಷ್ಟೇ ಅಲ್ಲದೇ ಫೆ. 16ರಂದು ರಾಜ್ಯ ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿಗಳು, ಕಲ್ಯಾಣ ಕರ್ನಾಟಕದ ಜಿಲ್ಲೆಯಾದ ಬೀದರ್‌ನಲ್ಲಿ ಹುಲ್ಲುಗಾವಲು ಪ್ರವಾಸೋದ್ಯಮಕ್ಕೆ ಸರ್ಕಾರ 15 ಕೋಟಿ ರೂಪಾಯಿ ಒದಗಿಸಲಿದೆ ಎಂದು ತಿಳಿಸಿರುವುದಾಗಿ TNIE ಮಾಹಿತಿ ನೀಡಿದ್ದಾರೆ.
78 ಕಿ.ಮೀ ರೈಲ್ವೆ ಮಾರ್ಗಕ್ಕೆ ಬ್ಯಾರಿಕೇಡ್
ಕಾಡಾನೆಗಳು ಜನವಸತಿ ಪ್ರದೇಶಕ್ಕೆ ನುಗ್ಗದಂತೆ ತಡೆಯಲು ಈವರೆಗೆ ಒಟ್ಟು 100 ಕೋಟಿ ರೂ.ವೆಚ್ಚದಲ್ಲಿ 78 ಕಿ.ಮೀ ಉದ್ದದ ರೈಲು ಮಾರ್ಗಕ್ಕೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಇದರ ಅಳವಡಿಕೆ ಮುಂದುವರಿಯಲಿದೆ. ರಾಜ್ಯದಲ್ಲಿ ಇದುವರೆಗೆ 40 ಕೋಟಿ ರೂಪಾಯಿ ವೆಚ್ಚದಲ್ಲಿ ಏಳು ಆನೆ ಕಾರ್ಯಪಡೆ ಮತ್ತು ಎರಡು ಚಿರತೆ ಕಾರ್ಯಪಡೆಗಳನ್ನು ರಚಿಸಲಾಗಿದೆ.
ಕಾರ್ಯಪಡೆ ಬಲಪಡಿಸಲು ಅನುದಾನ ಹಂಚಿಕೆ
ಈ ವರ್ಷ ಬಂಡೀಪುರದಲ್ಲಿ ಮತ್ತೊಂದು ಕಾರ್ಯಪಡೆಯನ್ನು ರಚಿಸಲಾಗುವುದು. ಮನುಷ್ಯ ಶಕ್ತಿ ಮತ್ತು ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಈ ಟಾಸ್ಕ್‌ಫೋರ್ಸ್ ಬಲಪಡಿಸುವ ಸದುದ್ದೇಶದಿಂದ 10 ಕೋಟಿ ರೂ. ಹಣ ನೀಡಲಾಗುತ್ತಿದೆ. ಮಾನವ-ಪ್ರಾಣಿ ಸಂಘರ್ಷ ತಗ್ಗಿಸಲು 201 ಕೋಟಿ ರೂ. ವೆಚ್ಚದಲ್ಲಿ ಅರಣ್ಯದ ಪರಿಧಿಯಲ್ಲಿನ ಜನರು, ಬೆಳೆಗಳು ಮತ್ತು ಜೀವನವನ್ನು ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದ್ದರು.

ಕರ್ನಾಟಕದಲ್ಲಿ ಹಸಿರು ಹೆಚ್ಚಿಸಲು 50,225 ಹೆಕ್ಟೇರ್ ಪ್ರದೇಶದಲ್ಲಿ 2.74 ಲಕ್ಷ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಇಷ್ಟು ಸಸಿಗಳು ರಸ್ತೆ ವಿಭಜಕಗಳು ಮತ್ತು ಮೀಡಿಯಾನ್‌ಗಳು, ಟ್ರೀ ಪಾರ್ಕ್‌ಗಳು ಮತ್ತು ತೋಪುಗಳಲ್ಲಿ ನೆಡಲಾಗುತ್ತಿದೆ.
ನೀರಿನ ಪರೀಕ್ಷೆಗೆ ಪ್ರಯೋಗಾಲಯ
ಹೊನ್ನಿಕೇರಿ ಮೀಸಲು ಪ್ರದೇಶದಲ್ಲಿನ ಹುಲ್ಲುಗಾವಲುಗಳಲ್ಲಿ ಪರಿಸರ ಪ್ರವಾಸೋದ್ಯಮವನ್ನು ಪ್ರಾರಂಭಿಸಲಾಗುವುದು. ರಾಜ್ಯದಲ್ಲಿ ಕೃಷ್ಣಮೃಗಗಳು ಮತ್ತು ಚಿಂಕಾರಗಳಿಗೆ ಹೆಸರುವಾಸಿಯಾದ ಜೈವಿಕ ವೈವಿಧ್ಯತೆಯ ತಾಣವಾಗಿ ಮಾಡಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದರು. ಇನ್ನೂ ಕರ್ನಾಟಕದಲ್ಲಿ 17 ನದಿಗಳ ನೀರಿನ ಗುಣಮಟ್ಟವನ್ನು ಪರೀಕ್ಷಿಸಲು ಎರಡು ಪ್ರಯೋಗಾಲಯಗಳು ಮತ್ತು ಏಳು ತನಿಖಾ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಬಜೆಟ್ ವೇಳೆ ಅವರು ಹೇಳಿದ್ದಾರೆ.
ಇದರೊಂದಿಗೆ ಬೆಂಗಳೂರಿನಂತಹ ಅಪಾರ್ಟ್‌ಮೆಂಟ್‌ಗಳಲ್ಲಿ ಕಟ್ಟಡಗಳಲ್ಲಿನ ನೀರಿನ ಮರುಬಳಕೆ ಮತ್ತು ಮರುಬಳಕೆಗೆ ವಿಧಾನಗಳ ಅಳವಡಿಕೆಗೆ ಪ್ರೋತ್ಸಾಹಿಸಲಾಗುವುದು ಎಂದು ಅವರು ತಿಳಿಸಿದರು.












Click it and Unblock the Notifications