ಕರ್ನಾಟಕ: ನಿಮ್ಮ ಮಕ್ಕಳ ಬೇಸಿಗೆ ಶಿಬಿರಗಳು ಹೇಗಿರಬೇಕು?: ರಾಜ್ಯ ಮಕ್ಕಳ ಹಕ್ಕು ಆಯೋಗಕ್ಕೆ ಸಲ್ಲಿಕೆಯಾದ ಶಿಫಾರಸು ತಿಳಿಯಿರಿ

ಬೆಂಗಳೂರು, ಏಪ್ರಿಲ್ 07: ಕರ್ನಾಟಕ ರಾಜ್ಯದಲ್ಲಿ ಪರೀಕ್ಷೆಗಳು ಮುಗಿದ ಬಳಿಕ ಮಕ್ಕಳಿಗೆ ಬೇಸಿಗೆ ಶಿಬಿರಗಳನ್ನು ವ್ಯಕ್ತಿಗಳು, ಸಂಸ್ಥೆಗಳು ಆರಂಭಿಸುತ್ತವೆ. ಅಂತಹ ಬೇಸಿಗೆ ಶಿಬಿರಗಳು ಹೇಗಿರಬೇಕು, ಅವುಗಳು ಹೇಗೆ ಮಕ್ಕಳ ಶೈಕ್ಷಣಿಕ ಬೆಳಗಣಿಗೆಗೆ ಪೂರಕವಾಗಿರಬೇಕು ಎಂಬುದರ ಕುರಿತು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ಮನವಿ ಪತ್ರ ಸಲ್ಲಿಕೆಯಾಗಿದೆ.

ಬೆಂಗಳೂರಿನ ಚೈಲ್ಡ್ ರೈಟ್ಸ್ ಟ್ರಸ್ಟ್ ನಿರ್ದೇಶಕರಾದ ನಾಗಸಿಂಹ ರಾವ್ ಅವರು ಆಯೋಗಕ್ಕೆ ಪತ್ರ ಬರೆದ ಮನವಿ ಮಾಡಿಕೊಂಡಿದ್ದಾರೆ. ಮಕ್ಕಳ ನಿಪುಣತೆ, ಕೌಶಲ್ಯ, ಬುದ್ಧಿಮತ್ತೆ, ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿರುವಂತೆ ಶಿಬಿರಗಳು ನಡೆಯಬೇಕಿದೆ. 'ಮಕ್ಕಳ ಸ್ನೇಹಿ ಬೇಸಿಗೆ ಶಿಬಿರಗಳು' ನಡೆಯಬೇಕಿದ್ದು, ಈ ವಿಚಾರಗಳನ್ನು ವಿಶ್ವಸಂಸ್ಥೆಯ ಒಡಂಬಡಿಕೆಯ ಪರಿಚ್ಛೇದ 31 ಎತ್ತಿ ಹಿಡಿದಿದೆ.

Make Summer Camps Child-Friendly In Karnataka: Recommendation To State Child Rights Commission

ಮಕ್ಕಳ ಭವಿಷ್ಯದ ದೃಷ್ಟಿಯಿಂದ ಟ್ರಸ್ಟ್ ಒಂದಷ್ಟು ಶಿಫಾರಸುಗಳನ್ನು ಮಾಡಿದೆ. ಅದನ್ನು ಪರಿಗಣಿಸಿ ಸಂಬಂಧಿಸಿದ ಇಲಾಖೆ ಹಾಗೂ ಸಮಿತಿಗಳಿಗೆ ಸುತ್ತೋಲೆ ಹೊರಡಿಸಬೇಕು ಎಂದು ನಾಗಸಿಂಹ ರಾವ್ ಅವರು ಕೋರಿದ್ದಾರೆ.

ಶೀಫಾರಸ್ಸಿನ ಪತ್ರದಲ್ಲೇನಿದೆ? ತಿಳಿಯಿರಿ

ಬೇಸಿಗೆ ರಜೆಗಳು ಪ್ರಾರಂಭವಾಯಿತೆಂದರೆ ಬೇಸಿಗೆ ಶಿಬಿರಗಳನ್ನು ಮಾಡುವ ಸಂಸ್ಥೆಗಳು, ವ್ಯಕ್ತಿಗಳು ನೂರಾರು ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಮಕ್ಕಳಿಗೆ ಆಟ, ಮನೋರಂಜನೆ ನೀಡುವ ಉದ್ದೇಶ ಈ ಬೇಸಿಗೆ ಶಿಬಿರಗಳದ್ದಾಗಿದ್ದರೂ ಅಪಾರ ಮೊತ್ತದ ಹಣವನ್ನು ಪೋಷಕರು ನೀಡಬೇಕಾಗುತ್ತದೆ. ಆದರೆ ಶಿಬಿರ ನಡೆಸುವವರು ಸಂಸ್ಥೆಗಳು, ವ್ಯಕ್ತಿಗಳು ಸರ್ಕಾರದ ಯಾವುದೇ ಇಲಾಖೆಯ, ಸಮಿತಿಯ, ಆಯೋಗದ ಅನುಮತಿ ಪಡೆದಿರುವುದಿಲ್ಲ. ಈ ಎಲ್ಲ ಕಾರಣದಿಂದ ಟ್ರಸ್ಟ್ ಈ ಕೆಳಗಿನ ಅಂಶಗಳನ್ನು ಶಿಫಾರಸು ಮಾಡಿದೆ.

* ಮಕ್ಕಳಿಗಾಗಿ ಬೇಸಿಗೆ ಶಿಬಿರ ಏರ್ಪಡಿಸುವ ಸಂಸ್ಥೆ / ವ್ಯಕ್ತಿಗಳು ಸಂಬಂಧಪಟ್ಟ ಇಲಾಖೆ, ಆಯೋಗದ ಮೂಲಕ ಲಿಖಿತ ರೂಪದಲ್ಲಿ ಅನುಮತಿ ಪಡೆದಿರಬೇಕು.

* ಬೇಸಿಗೆ ಶಿಬಿರದಲ್ಲಿ ಭಾಗವಹಿಸುವ ಮಕ್ಕಳ ಸಂಪೂರ್ಣ ವಿವರ ಹಾಗೂ ಪೋಷಕರ ವಿವರಗಳನ್ನು ನೀಡಿರಬೇಕು.

ಬೇಸಿಗೆ ಶಿಬಿರ ನಡೆಯುವ ಸ್ಥಳ ಮಕ್ಕಳ ಸ್ನೇಹಿಯಾಗಿರಬೇಕು. ಅಂಗವಿಕಲ ಮಕ್ಕಳ ಸ್ನೇಹಿ ಶೌಚಾಲಯ ಹೊಂದಿರಬೇಕು. ಕುಡಿಯುವ ನೀರಿನ ವ್ಯವಸ್ಥೆ ಇರಲೇಬೇಕು.

* ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಇರಲೇಬೇಕು. ರಾತ್ರಿ ಮಲಗುವ ವ್ಯವಸ್ಥೆಯೂ ಪ್ರತೇಕವಾಗಿ ಇರಬೇಕು.

Make Summer Camps Child-Friendly In Karnataka: Recommendation To State Child Rights Commission

ಮಕ್ಕಳೊಂದಿಗೆ ಒಡನಾಟ ಹೊಂದುವ ಹಿರಿಯರ ಹಿನ್ನಲೆ ತಿಳಿದಿರಬೇಕು. ಈ ಹಿರಿಯರ ವಿವರ ಸಂಬಂಧಪಟ್ಟ ಇಲಾಖೆಗೆ ನೀಡಿರಬೇಕು.

* ಮಕ್ಕಳ ರಕ್ಷಣಾ ನೀತಿಯನ್ನು ಶಿಬಿರದಲ್ಲಿ ಅಳವಡಿಸಿಕೊಂಡಿರಲೇಬೇಕು. ಈ ಮಕ್ಕಳ ರಕ್ಷಣಾ ನಿಯಮಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿರಲೇಬೇಕು.

* ಶಿಬಿರದಲ್ಲಿ ಮಕ್ಕಳ ಸಹಾಯವಾಣಿ ಚೈಲ್ಡ್‌ಲೈನ್‌ 1098 ಹಾಗೂ 112 ಸಂಖ್ಯೆಯನ್ನು ಪ್ರದರ್ಶಿಸಿರಬೇಕು. ಮಕ್ಕಳಿಗಾಗಿ ದೂರು ಪೆಟ್ಟಿಗೆ ಇರಲೇಬೇಕು.

* ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು / ಮಕ್ಕಳ ರಕ್ಷಣಾ ಘಟಕದ ಸದಸ್ಯರು ಕಾಲಕಾಲಕ್ಕೆ ಇಂತಹ ಬೇಸಿಗೆ ಶಿಬಿರಗಳಿಗೆ ಭೇಟಿ ನೀಡುತ್ತೀರಬೇಕು.

ಮಕ್ಕಳಿಗೆ ತಾರತಮ್ಯ ಮಾಡಬಾರದು

* ಅಂಗವಿಕಲ ಮಕ್ಕಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದ ರೀತಿಯಲ್ಲಿ ಶಿಬಿರ ಆಯೋಜಿತವಾಗಿರಬೇಕು. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಯಾವುದೇ ವಿಧದಲ್ಲಿ ತಾರತಮ್ಯ ಆಗದಂತೆ ನೋಡಿಕೊಳ್ಳಬೇಕು.

* ಶಿಬಿರ ಆಯೋಜಕರು ನುರಿತ ವೈಧ್ಯರ ಸಂಪರ್ಕದಲ್ಲಿ ಇರಬೇಕು, ಶಿಬಿರದಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇರಲೇಬೇಕು.

ಶಿಬಿರದಲ್ಲಿ ಭಾಗವಹಿಸಿದ ಮಕ್ಕಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕುವ ಮೊದಲು ಮಕ್ಕಳ ಹಾಗೂ ಅವರ ಪೋಷಕರ ಅನುಮತಿಯನ್ನು ಲಿಖಿತ ರೂಪದಲ್ಲಿ ಪಡೆದುಕೊಂಡಿರಬೇಕು.

* ಶಿಬಿರದ ಹತ್ತಿರವಿರುವ ಪೊಲೀಸ್ ಠಾಣೆಯ ಮಕ್ಕಳ ಕಲ್ಯಾಣ ಅಧಿಕಾರಿ ಹಾಗೂ ಮಕ್ಕಳ ವಿಶೇಷ ಪೊಲೀಸ್ ಈ ಶಿಬಿರದ ಸಮಸ್ತ ಮಾಹಿತಿಯನ್ನು ಹೊಂದಿರಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+