ಎಸ್ಸೆಂ ಕೃಷ್ಣ ಬಿಜೆಪಿ ಸೇರಲಿ: ಒನ್ಇಂಡಿಯಾ ಓದುಗರ ಬಹುಮತ

Posted By:
Subscribe to Oneindia Kannada

ಬೆಂಗಳೂರು, ಜನವರಿ 31: ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರು ಮುಂದೆ ಯಾವ ಹಾದಿಯಲ್ಲಿ ಸಾಗಬೇಕೆಂದು ಒನ್ಇಂಡಿಯಾ ಕನ್ನಡ ಆಯೋಜಿಸಿದ್ದ ಆನ್ ಲೈನ್ ಮತದಾನದಲ್ಲಿ ಹೆಚ್ಚಿನ ಸಂಖ್ಯೆಯ ಓದುಗರು ಅವರು ಬಿಜೆಪಿ ಸೇರಬೇಕೆಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಸಖ್ಯ ತೊರೆದಿರುವ ಕೃಷ್ಣ ಅವರನ್ನು ಸ್ವಾಗತಿಸಲು ಬಿಜೆಪಿ, ಜೆಡಿಎಸ್ ಎರಡೂ ಸಿದ್ಧವಾಗಿವೆ. ಹಾಗಾಗಿ, ಕೃಷ್ಣ ಅವರ ಮುಂದಿನ ನಡೆ ಕುತೂಹಲ ಹುಟ್ಟಿಸಿದೆ. ಏತನ್ಮಧ್ಯೆ, ಕೃಷ್ಣ ಅವರ ಮುಂದಿನ ನಡೆ ಹೇಗಿರಬೇಕು ಎಂಬ ಪ್ರಶ್ನೆಯನ್ನು ಒನ್ಇಂಡಿಯಾ ಕನ್ನಡದ ಓದುಗರ ಮುಂದಿಟ್ಟಾಗ, ಆನ್ ಲೈನ್ ಮೂಲಕ ಮತದಾನದ ಮೂಲಕ ತಮ್ಮ ಅಭಿಪ್ರಾಯ ಸಲ್ಲಿಸಿರುವ ಹೆಚ್ಚಿನ ಓದುಗರು ಕೃಷ್ಣ ಅವರು ಬಿಜೆಪಿಗೆ ಸೇರ್ಪಡೆಗೊಳ್ಳಬೇಕು ಎಂದು ಹೇಳಿದ್ದಾರೆ.[ಕೃಷ್ಣ ಅವರೇ, ನಿಮ್ಮ ಉತ್ಸಾಹ ಮೆಚ್ಚತಕ್ಕದ್ದು, ಆದರೆ ಇನ್ನು ಸಾಕು!]

Majority of One India Kannada readers want SM Krishna to join BJP

'ಕಾಂಗ್ರೆಸ್ ಗೆ ಗುಡ್ ಬೈ ಹೇಳಿರುವ ಕೃಷ್ಣ ಅವರ ಮುಂದೇನು ಮಾಡಬೇಕಂತೀರಿ?' ಎಂಬ ಪ್ರಶ್ನೆ ಕೇಳಲಾಗಿತ್ತು.
ಈ ಪ್ರಶ್ನೆಗೆ - 1. ರಾಜಕೀಯ ಸನ್ಯಾಸ ತೆಗೆದುಕೊಳ್ಳಲಿ., 2. ಬಿಜೆಪಿ ಸೇರಿ ಚುನಾವಣೆಗೆ ಸ್ಪರ್ಧಿಸಲಿ., 3. ಕಾಂಗ್ರೆಸ್ ನಲ್ಲೇ ಉಳಿದುಕೊಳ್ಳಲಿ ಎಂಬ ಮೂರು ಆಯ್ಕೆಗಳನ್ನು ಕೊಡಲಾಗಿತ್ತು.

ಕಾಂಗ್ರೆಸ್‌ಗೆ ಗುಡ್ ಬೈ ಹೇಳಿರುವ ಕೃಷ್ಣ ಮುಂದೇನು ಮಾಡಬೇಕಂತೀರಿ?

ಇದಕ್ಕೆ ಸ್ಪಂದಿಸಿರುವ ಓದುಗರಲ್ಲಿ ಹೆಚ್ಚಿನವರು, ಕೃಷ್ಣ ಅವರು ಬಿಜೆಪಿ ಸೇರಲಿ ಎಂದಿದ್ದಾರೆ ಇವರ ಸಂಖ್ಯೆ ಶೇ. 53.12ರಷ್ಟಿದೆ. ಇನ್ನು, ಶೇ. 40. 01ರಷ್ಟು ಓದುಗರು ಅವರು ಯಾವ ಪಕ್ಷವನ್ನೂ ಸೇರುವುದು ಬೇಡ, ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳಲಿ ಎಂದಿದ್ದಾರೆ. ಇನ್ನು, ಶೇ. 6. 87ರಷ್ಟು ಓದುಗರು ಕೃಷ್ಣ ಅವರು ಕಾಂಗ್ರೆಸ್ಸಿನಲ್ಲೇ ಉಳಿಯಬೇಕೆಂಬ ಇರಾದೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After resigning the primary membership of the Congress party former CM of Karnataka SM Krishna, is in dilema. He has been welcomed by BJP and JDS. When we asked one india kannada readers regarding the next step of Krishna via online voting, majority of the readers said Krishna should join BJP and contest elections.
Please Wait while comments are loading...