ಕರ್ನಾಟಕ ರಾಜಕಾರಣದಲ್ಲಿ ಲಿಂಗಾಯತರ-ಒಕ್ಕಲಿಗರ ಪ್ರಾಬಲ್ಯ: ಇದರ ಕಾರಣಗಳೇನು ಗೊತ್ತೇ?
ಬೆಂಗಳೂರು, ಮೇ 08: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ದಶಕಗಳಿಂದಲೂ ಬಹುಸಂಖ್ಯಾತರು ಎನಿಸಿಕೊಂಡಿರುವ ಎರಡು ಜಾತಿ ಸಮುದಾಯಗಳು ಪ್ರಾಬಲ್ಯ ಸಾಧಿಸುತ್ತಾ ಬಂದಿವೆ. ಅನೇಕ ಜಾತಿಗಳ ಜನರು ರಾಜಕಾರಣಕ್ಕೆ ಪೂರಕವಾಗಿದ್ದರೂ ಸಹ ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯುವಲ್ಲಿ 'ಲಿಂಗಾಯತ-ಒಕ್ಕಲಿಗ' ಸಮುದಾಯಗಳು ನೀರ್ಣಾಯಕವಾಗಿವೆ.
ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿಗೆ, ಜೆಡಿಎಸ್ ಹಾಗೂ 70 ವರ್ಷ ದೇಶವಾಳಿದ ಕಾಂಗ್ರೆಸ್‌ಗೆ ಈ ಎರಡು ಜಾತಿ ಸಮುದಾಯಗಳ ಬೆಂಬಲ ಅಗತ್ಯವಾಗಿದೆ. ಲಿಂಗಾಯತರಲ್ಲಿ ಬಹುತೇಕರು ಬಿಜೆಪಿ ಬೆಂಬಲಿಸಿದರೆ, ಒಕ್ಕಲಿಗರಲ್ಲಿ ಬಹುತೇಕರು ಸ್ಥಳೀಯ ಪಕ್ಷ ಜೆಡಿಎಸ್ ಬೆಂಬಲಿಸುತ್ತಾರೆ.

ಈ ಕಾರಣದಿಂದಲೇ ಜಾತ್ಯಾತೀತ ಜನತಾದಳ (JDS) ಹಳೇ ಮೈಸೂರು ಭಾಗದಲ್ಲಿ ನೆಲೆ ಕಂಡಿದೆ. ಹಿಂದಿನಿಂದಲೂ ಈ ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಸಾಧಿಸಿದ್ದರ ಹಿಂದೆ ಇದೇ ಒಕ್ಕಲಿಗರ ಮತಗಳು ಕೆಲಸ ಮಾಡಿವೆ. ಕಳೆದ ಬಾರಿ ಸಹ ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಅಧಿಪತ್ಯ ಸಾಧಿಸಿತ್ತು. ಇನ್ನೂಳಿದಂತೆ ಕಾಂಗ್ರೆಸ್ ಅನ್ನು ಸಹ ಕೆಲವರು (ಒಕ್ಕಲಿಗರು) ಬೆಂಬಲಿಸುತ್ತಾರೆ.
ಸರ್ಕಾರ ರಚನೆಯಲ್ಲಿ ಈ ಸಮುದಾಯಗಳದ್ದು ಮಹತ್ವದ ಪಾತ್ರ
ರಾಜ್ಯದ ಒಟ್ಟು ಜನಸಂಖ್ಯೆ ಪೈಕಿ ಸುಮಾರು ಶೇಕಡಾ 15ರಷ್ಟು ಒಕ್ಕಲಿಗರಿದ್ದಾರೆ. ಅವರು ಬೆಂಗಳೂರಿನ ಕೆಲವೆಡೆ ಮತ್ತು ಹಳೇ ಮೈಸೂರು ಭಾಗದಲ್ಲಿ ನೆಲೆಸಿದ್ದಾರೆ. ಇನ್ನೂ ಲಿಂಗಾಯತರು ಸುಮಾರು ಶೇ. 17ರಷ್ಟಿದ್ದಾರೆ. ಇವರೆಲ್ಲ ದಕ್ಷಿಣ ಕರ್ನಾಟಕದ ಒಂದೆರಡು ಕಡೆ ಹಾಗೂ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ, ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಹಬ್ಬಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚನೆಯಾಗುವಷ್ಟರ ಮಟ್ಟಿಗೆ ಇವೆರಡು ಬಹುಸಂಖ್ಯಾತ ಜಾತಿ ಸಮುದಾಯಗಳು ಪ್ರಭಾವ ಬೀರುತ್ತಲೇ ಬಂದಿವೆ.
ಬಿಜೆಪಿಗೂ ಮೊದಲು ಏಳು ದಶಕ ಆಡಳಿತ ನೀಡಿದ್ದ ಕಾಂಗ್ರೆಸ್ ಅನ್ನೇ ಲಿಂಗಾಯತರು ಬೆಂಬಲಿಸುತ್ತಿದ್ದರು ಎನ್ನಲಾಗುತ್ತದೆ. ಆದರೆ 1990ರಲ್ಲಿ ರಾಜೀವ್ ಗಾಂಧಿಯವರು ಲಿಂಗಾಯತ ನಾಯಕ ವೀರೇಂದ್ರ ಪಾಟೀಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದರು. ಇದರಿಂದ ಅಸಮಾಧಾನಗೊಂಡ ರಾಜ್ಯ ಲಿಂಗಾಯತರು ಅಂದು ಕಾಂಗ್ರೆಸ್ ನಿಂದ ದೂರ ಸರಿದಿದ್ದರು.

2008ರಲ್ಲಿ ಜೆಡಿಎಸ್‌ನಿಂದಲೂ ದೂರಾದ ಲಿಂಗಾಯತರು
ಇದಲ್ಲದೇ ರೈತಪರ ಕಾಳಜಿಯಿಂದಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತಿದ್ದ ಒಂದಷ್ಟು ಲಿಂಗಾಯತರು, ತಮ್ಮ ಸಮುದಾಯದಲ್ಲಿ ಅಗ್ರನಾಯಕರಾಗಿರುವ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ 2008ರಲ್ಲಿ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಸರ್ಕಾರ ರಚನೆ ವೇಳೆ ಮೋಸ ಮಾಡಿದ್ದರು ಎಂದು ಅವರು ಸಹ ದೂರ ಸರಿದರು. ಇವೆಲ್ಲ ಅನುಭವಗಳಿಂದ ಇತರ ಪಕ್ಷಗಳಲ್ಲಿ ಲಿಂಗಾಯತ ನಾಯಕರಿದ್ದರು ಸಹ ಬಿಜೆಪಿಯನ್ನೇ ಲಿಂಗಾಯರು ಬೆಂಬಲಿಸಿಕೊಂಡು ಬಂದಿದ್ದಾರೆ. ಇದು ಬಿಜೆಪಿಗೆ ರಾಜಕಾರಣದಲ್ಲಿ ಕಮಲ ಅರಳಿಸಲು, ಅಧಿಪತ್ಯ ಸಾಧಿಸಲು ಕಾರಣವಾಗಿದೆ.
ಕಿತ್ತೂರು ಕರ್ನಾಟಕದಲ್ಲಿರುವ 50 ಕ್ಷೇತ್ರಗಳಲ್ಲಿ ಲಿಂಗಾಯತರು ಪ್ರಾಬಲ್ಯ ಹೊಂದಿದ್ದು, ಇಲ್ಲಿ ಬಿಜೆಪಿ ಬಹುಮತ ಸಾಧಿಸಿದೆ. ಅದೇ ರೀತಿ ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕದಲೂ ಲಿಂಗಾಯತರೇ ಹೆಚ್ಚಿದ್ದು, ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಕಾರಣರಾಗಿದ್ದಾರೆ.
ಬಹುಸಂಖ್ಯಾತರಿಗೆ ಸಿಎಂ ಪಟ್ಟ ಧಕ್ಕಿದ್ದು ತೀರಾ ವಿರಳ
ಸ್ವಾತಂತ್ರ್ಯಾ ನಂತರ ಕರ್ನಾಟಕದ ಬಹುಸಂಖ್ಯಾತ ಇದೇ ಲಿಂಗಾಯತ ನಾಯಕರ ಪೈಕಿ ಮುಖ್ಯಮಂತ್ರಿ ಆಗಿದ್ದು ಬೆರಳೆಣಿಕೆಯಷ್ಟು ಮಾತ್ರ. ಬಸಪ್ಪ ದಾನಪ್ಪ ಜತ್ತಿ (1958), ಎಸ್.ನಿಜಲಿಂಗಪ್ಪ (1956 & 1962), ವಿರೇಂದ್ರ ಪಾಟಿಲ್ (1968 & 1989), ಎಸ್.ಆರ್.ಕಂಠಿ (1962), ಬಿ.ಎಸ್.ಯಡಿಯೂರಪ್ಪ (2007, 2008, 2011, 2018), ಜಗದೀಶ್ ಶೆಟ್ಟರ್ (2012). ಈ ಏಳು ಮಂದಿ ಮಾತ್ರವೇ ರಾಜ್ಯವನ್ನಾಳಿದ್ದಾರೆ. ಅದರಲ್ಲಿ ಪೂರ್ಣ ಪ್ರಮಾಣದಲ್ಲಿ ಆಡಳಿತ ನಡೆಸಿದವರು ಬಸಪ್ಪ ದಾನಪ್ಪ ಜತ್ತಿ ಮತ್ತು ಎಸ್. ನಿಜಲಿಂಗಪ್ಪನವರು ಮಾತ್ರ ಎಂದು ಇತಿಹಾಸ ಹೇಳುತ್ತದೆ.

ದಲಿತ, ಹಿಂದುಳಿದ, ಒಕ್ಕಲಿಗ ಸೇರಿದಂತೆ ಇನ್ನಿತರರೇ ಸಿಎಂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ದಲಿತ ನಾಯಕ, ಅಹಿಂದ ನಾಯಕ ಎನ್ನಲಾಗುವ ಸಿದ್ದರಾಮಯ್ಯನವರು ಕಾಂಗ್ರೆಸ್‌ನಿಂದ 2014ರಿಂದ 2018ರವರೆಗೆ ಪೂರ್ಣ ಪ್ರಯಾಣದಲ್ಲಿ ಸಿಎಂ ಆಗಿ ಆಡಳಿತ ನೀಡಿದರು.
ಒಕ್ಕಲಿಗರ ಬೆಂಬಲಕ್ಕೆ ಬಿಜೆಪಿ-ಕಾಂಗ್ರೆಸ್ ಕಸರತ್ತು
ಅಲ್ಪಸಂಖ್ಯಾತರು, ಹಿಂದುಳಿದವರು ಸೇರಿದಂತೆ ಇನ್ನಿತರ ಜಾತಿ ಸಮುದಾಯಗಳು ಕಾಂಗ್ರೆಸ್ ಬೆಂಬಲಿಸಿದರೆ, ಒಕ್ಕಲಿಗರಲ್ಲಿ ಬಹುತೇಕರು ಜೆಡಿಎಸ್ ಅನ್ನೇ ಬೆಂಬಲಿಸುತ್ತಿವೆ. ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರ ಕುಟುಂಬ ಒಕ್ಕಲಿಗ ಕುಟುಂಬ. ಈ ಸಮುದಾಯಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌ನಲ್ಲಿನ ಮತ್ತೊಬ್ಬ ಪ್ರಬಲ ಒಕ್ಕಲಿಗ ನಾಯಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹಳೇ ಮೈಸೂರು ಭಾಗದಲ್ಲಿ ಪ್ರಾಬಲ್ಯ ಹೊಂದಲು ಹಾತೊರೆಯುತ್ತಿದ್ದಾರೆ.
ಇತ್ತ ಬಿಜೆಪಿ ನಾಯಕರಾದ ಆರ್. ಅಶೋಕ್ ಮತ್ತು ಡಾ.ಸಿ.ಎನ್. ಅಶ್ವಥ್ ನಾರಾಯಣ್ ಸಹ ಒಕ್ಕಲಿಗರಾಗಿದ್ದು, ಅವರು ಸಹ ತಮ್ಮ ಸಮುದಾಯದವರ ಬೆಂಬಲ ಬಯಸುತ್ತಿದ್ದಾರೆ. ಇದೆಲ್ಲ ಕಾರಣಗಳಿಂದಲೇ 2023ರ ಚುನಾವಣೆಯಲ್ಲಿ ನೀರಿಕ್ಷೆಗಳು ಹೆಚ್ಚಾಗಿವೆ. ಪ್ರಮುಖ ಮೂರು ಪಕ್ಷಗಳ ಮಧ್ಯೆ ತೀವ್ರ ಪೈಪೋಟಿ ಕಂಡು ಬರುತ್ತಿದೆ.
ಮೊನ್ನೆಯಷ್ಟೇ ಉತ್ತರ ಕರ್ನಾಟಕದಲ್ಲಿ ರೋಡ್ ಶೋ ನಡೆಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ 'ಲಿಂಗಾಯತ ಅಸ್ತ್ರ' ಪ್ರಯೋಗಿಸಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿಯವರು ನೀವು ಲಿಂಗಾಯತರನ್ನು ಹೇಗೆ ನಡೆಸಿಕೊಂಡಿದ್ದೀರಿ, ಕಾಂಗ್ರೆಸ್‌ನಲ್ಲಿ ಎಷ್ಟು ಮಂದಿ 'ಲಿಂಗಾಯತರು ಸಿಎಂ' ಆಗಿದ್ದಾರೆ ಎಂದು ನಾಡಿಗೆ ಗೊತ್ತಿದೆ ಎನ್ನವು ಮೂಲಕ ತಿರುಗೇಟು ನೀಡಿತ್ತು. ಅಲ್ಲದೇ ಪಕ್ಷ ಸೇರ್ಪಡೆಯಾದ ಲಿಂಗಾಯತ ನಾಯಕ 'ಜಗದೀಶ್ ಶೆಟ್ಟರ್' ಅವರನ್ನು ಸಿಎಂ 'ಅಭ್ಯರ್ಥಿ' ಎಂದು ಘೋಷಿಸಿ ಎಂದು ಕಮಲ ಪಡೆ ಸವಾಲೆಸೆದಿತ್ತು.
ಹಾಗೆಯೇ ಹಳೇ ಮೈಸೂರು ಭಾಗದಲ್ಲಿ ಕಣ್ಣಿಟ್ಟಿರುವ ಬಿಜೆಪಿಯು ದೆಹಲಿ ವರಿಷ್ಠರನ್ನು ಕರೆತಂದು ಮಂಡ್ಯ, ಮೈಸೂರು, ರಾಮನಗರ ಭಾಗದಲ್ಲಿ ಭರ್ಜರಿ ರೋಡ್ ಶೋ ನಡೆಸಿತ್ತು. ಈ ಮೂಲಕ ಲಿಂಗಾಯತ ಸಮುದಾಯ ನಂತರದ ಬಹುಸಂಖ್ಯಾತ ಜಾತಿ ಸಮುದಾಯವಾದ ಒಕ್ಕಲಿಗರನ್ನು ತನ್ನತ್ತ ಸೆಳೆಯಲು ಯತ್ನಿಸಿತ್ತು. ಆದರೆ ಜೆಡಿಎಸ್ ಭದ್ರಕೋಟೆಯಾಗಿರುವ ಹಳೇ ಮೈಸೂರು ಭಾಗವನ್ನು ಅಲುಗಾಡಿವುದಾಗಲಿ, ಅಲ್ಲಿ ಕಮಲ ಅರಳಿಸುವುದಾಗಲಿ ಅಷ್ಟು ಸುಲಭವಲ್ಲ ಎಂಬುದು ಬಿಜೆಪಿಗೂ ಗೊತ್ತಿದೆ. ಇದೇ ರೀತಿ ಕಾಂಗ್ರೆಸ್ ಪಡೆ ಸಹ ಹಳೇ ಮೈಸೂರು ಭಾಗವನ್ನು ಕಬ್ಜಾ ಮಾಡಲು ಪ್ರಯತ್ನ ನಡೆಸಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications