Transfer: ಲೋಕಸಭಾ ಚುಣಾವಣೆ ಏಫೆಕ್ಟ್; ಮತ್ತೆ 11 ಡಿವೈಎಸ್‌ಪಿ, 51 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ
ಬೆಂಗಳೂರು, ಫೆಬ್ರವರಿ 13 : ಮುಂದಿನ ಲೋಕಸಮರಕ್ಕೆ ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇತ್ತ ಲೋಕಸಭಾ ಚುನಾವಣೆ ಹಿನ್ನಲೆ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆದಿದ್ದು, 11 ಡಿವೈಎಸ್‌ಪಿ ಮತ್ತು 51 ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹೌದು, ಕಳೆದ ಕೆಲ ದಿನಗಳ ಹಿಂದೆ ರಾಜ್ಯ ಸರ್ಕಾರವೂ 13 ಡಿವೈಎಸ್‌ಪಿಗಳು ಹಾಗೂ 30 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಆದೇಶವನ್ನು ಹೊರಡಿಸಲಾಗಿತ್ತು. ಇದೀಗ 11 ಡಿವೈಎಸ್‌ಪಿ ಮತ್ತು 51 ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡದೆ. ಲೋಕಸಭಾ ಚುನಾವಣೆ ನಿಮಿತ್ತ ಮಾಡಿದ್ದ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಆದೇಶವನ್ನು ಭಾಗಶಃ ಮಾರ್ಪಡಿಸಿ ಆದೇಶ ಹೊರಡಿಸಿದೆ.

ಇನ್ನೂ 11 ಡಿವೈಎಸ್‌ಪಿ ಮತ್ತು 51 ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡಿದ್ದು, ಸಂಬಂಧಪಟ್ಟ ಘಟಕಾಧಿಕಾರಿಗಳು, ವರ್ಗಾವಣೆಗೊಂಡ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಯಾವುದೇ ಹೆಚ್ಚಿನ ಸಮಯ ತೆಗೆದುಕೊಳ್ಳದೇ ವರ್ಗಾಯಿಸಲಾದ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಪೊಲೀಸ್ ಇಲಾಖೆ ನಿರ್ದೇಶನ ನೀಡಿದೆ.
ಡಿವೈಎಸ್‌ಪಿ ಶಿವಕುಮಾರ್ ಟಿ.ಎಂ. ಅವರನ್ನು ಕಲಬುರಗಿ ಸಂಚಾರ ಉಪವಿಭಾಗ, ಮೊಹಮ್ಮದ್ ಶರೀಫ್ ರಾವುತರ್ ಕೋದಂಡ ರಾಮ. ಟಿ (ಸಿಸಿಬಿ, ಮಂಗಳೂರು) ಸೇರಿ 11 ಡಿವೈಎಸ್‌ಪಿಗಳನ್ನು ವರ್ಗಾವಣೆ ಮಾಡಲಾಗಿದೆ.
ವಸಂತ ಕೆ.ಎಂ. ಅವರನ್ನು ಸೋಮವಾರಪೇಟೆ ಪೊಲೀಸ್ ಠಾಣೆ, ರಾಘವೇಂದ್ರ ಎಂ. ಬೈಂದೂರು (ಕಾವೂರು ಪೊಲೀಸ್ ಠಾಣೆ, ಮಂಗಳೂರು), ಸುರೇಶ್ ಪಿ. ಶಿಂಗಿ (ಉಡುಪಿ ನಗರ) ಸೇರಿ 51 ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾಯಿಸಲಾಗಿದೆ.
ಒಂದು ತಿಂಗಳಲ್ಲೇ ರಾಜ್ಯ ಸರ್ಕಾರವೂ 150ಕ್ಕೂ ಹೆಚ್ಚು ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಡಿವೈಎಸ್‌ಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಮತ್ತೆ 11 ಡಿವೈಎಸ್‌ಪಿ ಮತ್ತು 51 ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡಿದೆ.

ಈ ಹಿಂದೆ ವರ್ಗಾವಣೆಯಾದವರ ಪಟ್ಟಿ ಇಲ್ಲಿದೆ
- ಶೇಖರ್ ಜಿ. - ಜಾಲಹಳ್ಳಿ ಸಂಚಾರ ಪೊಲೀಸ್ ಠಾಣೆ, ಬೆಂಗಳೂರು
- ಶಿವಕುಮಾರ್ ಪಿ, - ಬೈಯಪ್ಪನಹಳ್ಳಿ ಪೊಲೀಸ್ ಠಾಣೆ, ಬೆಂಗಳೂರು
- ಸತೀಶ್ ಕುಮಾರ್, ಗಿರಿನಗರ ಪೊಲೀಸ್ ಠಾಣೆ, ಬೆಂಗಳೂರು
- ಯೇರಿಸ್ವಾಮಿ ಈ, ಕಾಟನ್ ಪೇಟೆ ಪೊಲೀಸ್ ಠಾಣೆ, ಬೆಂಗಳೂರು
- ತಿಪ್ಪೇಸ್ವಾಮಿ ಬಿ.ಎಂ, ಆನೇಕಲ್ ಪೊಲೀಸ್ ಠಾಣೆ
- ಸತೀಶ್ ಬಿ.ಎಸ್, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ
- ಗೋವಿಂದರಾಜು, ಪುಲಕೇಶಿ ನಗರ ಪೊಲೀಸ್ ಠಾಣೆ, ಬೆಂಗಳೂರು
ಈ ಏಳು ಜನ ಅಧಿಕಾರಿಗಳು ಸೇರಿದಂತೆ 25 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಲಾಗಿದೆ.
ಈ ಹಿಂದೆ ಐವರು ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ರದ್ದು
- ನರೇಂದ್ರ ಬಾಬು, ಸಿಐಡಿಯಿಂದ ಕಾಟನ್‌ಪೇಟೆಗೆ ವರ್ಗಾವಣೆ ಆಗಿದ್ದ ಇನ್ಸ್‌ಪೆಕ್ಟರ್
- ಐಯಣ್ಣ ರೆಡ್ಡಿ ಬಿ. ಹೆಬ್ಬಗೋಡಿಯಿಂದ ವರ್ಗಾವಣೆ ಆಗಿದ್ದ ಇನ್ಸ್‌ಪೆಕ್ಟರ್
- ಮುನಿರೆಡ್ಡಿ ವಿ, ಪರಪ್ಪನ ಅಗ್ರಹಾರಕ್ಕೆ ವರ್ಗಾವಣೆ ಆಗಿದ್ದ ಇನ್ಸ್‌ಪೆಕ್ಟರ್
- ಸುಬ್ರಮಣ್ಯ ಸ್ವಾಮಿ ಎಂ.ಎಲ್, ವಿವಿ ಪುರಂ ಸಂಚಾರ ಠಾಣೆಯಿಂದ ವರ್ಗಾವಣೆಯಾಗಿದ್ದ ಇನ್ಸ್‌ಪೆಕ್ಟರ್
- ಮುನಿಕೃಷ್ಣ ಡಿ.ಎಚ್, ಮಾಸ್ತಿ ಪೊ.ಠಾಣೆಗೆ ವರ್ಗಾವಣೆ ಆಗಿದ್ದ ಇನ್ಸ್‌ಪೆಕ್ಟರ್












Click it and Unblock the Notifications