ಜಗದೀಶ್ ಶೆಟ್ಟರ್ VS ಟೆಂಗಿನಕಾಯಿ, ಬಿಜೆಪಿ ಪಕ್ಷದಲ್ಲಿ ಶಮನವಾಗುತ್ತಾ ಅಸಮಾಧಾನ?
ಕಾಂಗ್ರೆಸ್ ನಾಯಕರಿಗೆ ನಿನ್ನೆ ಭಾರಿ ಆಘಾತ ಎದುರಾಗಿತ್ತು. ಯಾಕಂದ್ರೆ ಮಾಜಿ ಮುಖ್ಯಮಂತ್ರಿ, ಜಗದೀಶ್ ಶೆಟ್ಟರ್ ಅವರು ದಿಢೀರ್ ಮರಳಿ ಗೂಡಿಗೆ ಹೋಗಿದ್ದರು. ಅಂದ್ರೆ ಬಿಜೆಪಿ ಬಿಟ್ಟಿದ್ದ ಈ ನಾಯಕ, ಮತ್ತೆ ಕಾಂಗ್ರೆಸ್‌ಗೆ ಕೈ ಕೊಟ್ಟು ಬಿಜೆಪಿಗೆ ವಾಪಸ್ ಹೋಗಿದ್ದರು. ಹೀಗಿದ್ದಾಗ ಇದೀಗ, ಜಗದೀಶ್ ಶೆಟ್ಟರ್ ಅವರ ಎದುರಾಳಿ ಆಗಿದ್ದ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಮಹತ್ವದ ಹೇಳಿಕೆ ನೀಡಿದ್ದಾರೆ!
2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ವೇಳೆ ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಸೇರ್ಪಡೆ ಆಗಿದ್ದರು. ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡದ ಕಾರಣ ಕಿಚ್ಚು ಹೊತ್ತಿಸಿತ್ತು. ಕೊನೆಗೆ ಕಾಂಗ್ರೆಸ್ ನಾಯಕರ ಜೊತೆಗೆ ಮಾತುಕತೆ ನಡೆಸಿ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಕೈಹಿಡಿದರು. ಆದರೆ ನಿನ್ನೆ ಇದ್ದಕ್ಕಿದ್ದಂತೆ ಮತ್ತೆ ಬಿಜೆಪಿ ಸೇರಿರುವ, ಜಗದೀಶ್ ಶೆಟ್ಟರ್ ಬಗ್ಗೆ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಏನ್ ಹೇಳಿದ್ದಾರೆ ಗೊತ್ತಾ?

ಶೆಟ್ಟರ್ ಬಗ್ಗೆ ಟೆಂಗಿನಕಾಯಿ ಹೇಳಿಕೆ!
ಇದೀಗ ಈ ಬಗ್ಗೆ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರು, ಭಾರತೀಯ ಜನತಾ ಪಕ್ಷಕ್ಕೆ ಮರಳಿ ಬಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಏನೇನು ಬೇಡಿಕೆ ಇಟ್ಟಿದ್ದಾರೆ ಅನ್ನೋದು ಗೊತ್ತಿಲ್ಲ. ನಮ್ಮನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡೇ ಶೆಟ್ಟರ್ ಅವರನ್ನ ವಾಪಸ್ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಹೈಕಮಾಂಡ್ ಜಗದೀಶ್ ಶೆಟ್ಟರನ್ನು ಪಕ್ಷಕ್ಕೆ ಬರಮಾಡಿಕೊಂಡಿದೆ. ಹೀಗಾಗಿ ಹೈಕಮಾಂಡ್ ತೀರ್ಮಾನ ನಾವು ಸ್ವಾಗತಿಸುತ್ತೇವೆ. ಜಗದೀಶ್ ಶೆಟ್ಟರ್ ಎಲ್ಲಿಂದ ಸ್ಪರ್ಧೆ ಮಾಡ್ತಾರೆ? ಎಂಬ ವಿಚಾರವನ್ನು ವರಿಷ್ಠರು ತೀರ್ಮಾನ ಮಾಡ್ತಾರೆ ಅಂತಾ ಟೆಂಗಿನಕಾಯಿ ಹೇಳಿದ್ದಾರೆ.
ಬಿಜೆಪಿ ಹೈಕಮಾಂಡ್ ಸ್ಥಳೀಯ ನಾಯಕರನ್ನ ವಿಶ್ವಾಸಕ್ಕೆ ತೆಗೆಸುಕೊಂಡಿಲ್ಲ ಎಂಬ ವಿಚಾರ ಕುರಿತು ಮಾತನಾಡಿದ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ, 4 ಚೌಕಟ್ಟಿನ ಸಂಧಾನ ಮಾತುಕತೆಗಳನ್ನು ನಾವು ಬಹಿರಂಗ ಮಾಡಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ನಮ್ಮನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡು ಜಗದೀಶ್ ಶೆಟ್ಟರ್ ಅವರನ್ನ ಬಿಜೆಪಿಗೆ ಮರು ಸೇರ್ಪಡೆ ಮಾಡಲಾಗಿದೆ ಅಂತಾ ತಿಳಿಸಿದ್ದಾರೆ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ.

ಮತ್ತೊಂದೆಡೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವ್ರು, ಜಗದೀಶ್ ಶೆಟ್ಟರ್ ಬಿಜೆಪಿ ಮರು ಸೇರ್ಪಡೆ ಸಮಯದಲ್ಲಿ ಗೈರು ಹಾಜರಾದ ಬಗ್ಗೆ ಮಾತನಾಡಿದರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೆ ಪಕ್ಷ ನಿರ್ಧಾರ ಮಾಡಿರುತ್ತೆ. ಈಗ ಪಕ್ಷಕ್ಕೆ ಸೇರಿದ್ದಾರೆ, ಎಲ್ಲರೂ ಒಟ್ಟಾಗಿ ಇರುತ್ತೇವೆ ಈಗ ನಾವೇನು ಹೇಳುವಂತಹದ್ದು ಇಲ್ಲ ಎಂದಿದ್ದಾರೆ ಶಾಸಕ ಮಹೇಶ್ ಟೆಂಗಿನಕಾಯಿ.












Click it and Unblock the Notifications