ಯತ್ನಾಳ್ ಅವರೇ, ನಿಮ್ಮ ರೋಷಾವೇಷವನ್ನು!
ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್. ಸಿ. ಮಹದೇವಪ್ಪ ಅವರು ಶೂ ಹಾಕಿಕೊಳ್ಳಲು ಬೆಂಗಾವಲು ಸಿಬ್ಬಂದಿಯ ಸಹಾಯ ಪಡೆದುಕೊಂಡಿದ್ದು ಸದ್ಯ ವಿವಾದಕ್ಕೆ ಕಾರಣವಾಗಿದೆ. ಘಟನೆ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಮಹದೇವಪ್ಪ ಸ್ಪಷ್ಟನೆ ನೀಡಿದ್ದರು.
ಎಕ್ಸ್ (ಟ್ವಿಟರ್) ಖಾತೆಯಲ್ಲಿ ಘಟನೆ ಬಗ್ಗೆ ಸ್ಪಷ್ಟ ಪಡಿಸಿದ ಅವರು, ಆರೋಗ್ಯ ಸಮಸ್ಯೆಯಿಂದಾಗಿ ಶೂ ಹಾಕಿಕೊಳ್ಳಲು ಕಷ್ಟವಾದ ಕಾರನ ಸಿಬ್ಬಂದಿಯ ಸಹಾಯ ಪಡೆದಿದ್ದಾಗಿ ಹೇಳಿದ್ದರು. ಘಟನೆ ವಿವಾದದ ಸ್ವರೂಪ ಪಡೆದಿದ್ದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದರು.

"ವೈಯಕ್ತಿಕವಾಗಿ ವ್ಯಕ್ತಿ ಗೌರವ ಮತ್ತು ಘನತೆಯಲ್ಲಿ ನಂಬಿಕೆ ಇಟ್ಟಿರುವ ನನಗೆ ಒಬ್ಬರಿಂದ ಶೂ ಹಾಕಿಸಿಕೊಳ್ಳಬೇಕೆಂಬ ದರ್ಪದ ಇರಾದೆ ಇಲ್ಲ. ಆದರೆ ಹಿಂದೆ 'ಹಿಪ್ ಜಾಯಿಂಟ್ ನೀ' ತೊಂದರೆ ಸಿಲುಕಿ ಶಸ್ತ್ರಚಿಕಿತ್ಸೆಗೆ ಒಳಗಾದ ಸಂದರ್ಭದಿಂದ ಬಾಗುವುದು ಕಷ್ಟವಾಗಿದ್ದ ಕಾರಣ ನಮ್ಮ ಆತ್ಮೀಯ ವಲಯದಿಂದ ಸಹಾಯ ಪಡೆದಿದ್ದೇನೆ" ಎಂದಿದ್ದರು.
"ಬಹು ವರ್ಷಗಳ ಕಾಲ ನನ್ನೊಡನೆಯೇ ಒಂದು ಕುಟುಂಬದಂತೆ ಇರುವ ನಮ್ಮ ಕೆಲ ಸಿಬ್ಬಂದಿಗಳ ಬಳಿ ಕಾಲಿನ ಸಮಸ್ಯೆಯ ಹಿನ್ನಲೆಯಲ್ಲಿ ಪಡೆದುಕೊಂಡಿರುವ ಈ ಸಹಾಯಕ್ಕೆ ಮಾನವೀಯ ನೆಲೆ ಇದೆ, ಸಹಾಯಕ್ಕೆ ಅಂಹಕಾರ, ಅಧಿಕಾರದ ಅಮಲು ಎಂಬ ಶಬ್ದಗಳನ್ನು ಬಳಸುವುದು ಸರಿಯಾದ ಕ್ರಮವಲ್ಲ. ಇನ್ನು ನನ್ನನ್ನು ಬಲ್ಲ ಎಲ್ಲರಿಗೂ ವ್ಯಕ್ತಿ ಗೌರವಕ್ಕೆ ಸಂಬಂಧಿಸಿದ ನನ್ನ ನಿಲುವುಗಳ ಬಗ್ಗೆ ಚೆನ್ನಾಗಿಯೇ ತಿಳಿದಿರುವ ಕಾರಣ ಇಂತಹ ಸಣ್ಣಪುಟ್ಟ ವಿವಾದಗಳಿಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಸಹಾಯಕ್ಕಾಗಿ ನನ್ನ ಅಂಗರಕ್ಷಕನಿಗೆ ಧನ್ಯವಾದಗಳು." ಎಂದು ಹೇಳಿದ್ದರು.
ಬಸನಗೌಡ ಯತ್ನಾಳ್ ಟೀಕೆ
ಇನ್ನು ಮಹದೇವಪ್ಪ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, "ಇಷ್ಟು ಆರೋಗ್ಯ ಸಮಸ್ಯೆ ಇರುವವರು ಮನೆಯಲ್ಲಿ ವಿಶ್ರಾಂತಿ ಪಡೆಯಿರಿ. ಯಾವ ವ್ಯಕ್ತಿ ಗೌರವದ ಬಗ್ಗೆ ಮಾತನಾಡುತ್ತಿದ್ದಿರಿ? ವಿವಾದವಾಗಿದ್ದು ದುರದೃಷ್ಟಕರವಲ್ಲ ನಿಮ್ಮಂತಹ ನಾಟಕೀಯ ಮಜವಾದಿಗಳು ಸಮಾಜವಾದದ ಬಗ್ಗೆ ಮಾತನಾಡುವುದು ದುರದೃಷ್ಟಕರ." ಎಂದು ಟೀಕಿಸಿದ್ದರು.
ಯತ್ನಾಳ್ ಅವರೇ,
— Dr H.C.Mahadevappa (@CMahadevappa) November 8, 2023
ಮಾನವೀಯ ಸಹಾಯದ ವಿಷಯದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ.
ನಿಮ್ಮ ಈ ರೋಷಾವೇಷವನ್ನು, ನಿಮ್ಮ ಹೈಕಮಾಂಡ್ ಮುಂದೆ ರಾಜ್ಯಕ್ಕೊಬ್ಬ ವಿಪಕ್ಷೀಯ ನಾಯಕನ ಸ್ಥಾನವನ್ನು ಆರಿಸುವುದಕ್ಕಾಗಿ ಬಳಸಿಕೊಳ್ಳಿ.
ಇಲ್ಲವೇ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲನ್ನು ಕೇಳುವುದಕ್ಕಾದರೂ ಬಳಸಿ.
ಸುಮ್ಮನೇ ಕಾಲಹರಣ ಮಾಡಬೇಡಿ https://t.co/V9BmtcWqVK
ತಿರುಗೇಟು ಕೊಟ್ಟ ಮಹದೇವಪ್ಪ
ಇನ್ನು ಯತ್ನಾಳ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಹದೇವಪ್ಪ ಅವರು, ನಿಮ್ಮ ರೋಷಾವೇಷವನ್ನು ಹೈಕಮಾಂಡ್ ಮುಂದೆ ತೋರಿಸಿ ಎಂದು ಸಲಹೆ ನೀಡಿದ್ದಾರೆ.
ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಮಹದೇವಪ್ಪ, "ಯತ್ನಾಳ್ ಅವರೇ, ಮಾನವೀಯ ಸಹಾಯದ ವಿಷಯದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ನಿಮ್ಮ ಈ ರೋಷಾವೇಷವನ್ನು, ನಿಮ್ಮ ಹೈಕಮಾಂಡ್ ಮುಂದೆ ರಾಜ್ಯಕ್ಕೊಬ್ಬ ವಿಪಕ್ಷೀಯ ನಾಯಕನ ಸ್ಥಾನವನ್ನು ಆರಿಸುವುದಕ್ಕಾಗಿ ಬಳಸಿಕೊಳ್ಳಿ. ಇಲ್ಲವೇ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲನ್ನು ಕೇಳುವುದಕ್ಕಾದರೂ ಬಳಸಿ. ಸುಮ್ಮನೇ ಕಾಲಹರಣ ಮಾಡಬೇಡಿ." ಎಂದು ಹೇಳಿದ್ದಾರೆ.












Click it and Unblock the Notifications