Get Updates
Get notified of breaking news, exclusive insights, and must-see stories!

Mahadayi; ಸಿಎಂ ಜೊತೆ ಚರ್ಚಿಸಲು ರೈತರಿಗೆ ಸಮಯ ನಿಗದಿ

ಬೆಂಗಳೂರು, ಫೆಬ್ರವರಿ 22; ಮಹದಾಯಿ ಯೋಜನೆ ಅನುಷ್ಠಾನ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಲಿದ್ದಾರೆ. ಈ ಯೋಜನೆಗೆ ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿದೆ.

ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಬೆಳೆವಿಮೆ ಪರಿಹಾರ, ಬೆಳೆ ಪರಿಹಾರ, ಮಹದಾಯಿ ಯೋಜನೆ ಅನುಷ್ಠಾನ ಕುರಿತು ಮಹದಾಯಿ ಹೋರಾಟಗಾರರ ಹಾಗೂ ಜಿಲ್ಲೆಯ ರೈತ ಮುಖಂಡರ ಸಭೆ ನಡೆಯಿತು.

Mahadayi Project Farmers To Meet Chief Minister Siddaramaiah

ಸಭೆಯಲ್ಲಿ ರೈತ ಮುಖಂಡರು ಮಹದಾಯಿ ನೀರಾವರಿ ಯೋಜನೆ ಅನಷ್ಠಾನ, ಹೆಸ್ಕಾಂದಿಂದ ನಿರಂತರ ವಿದ್ಯುತ್ ಪೂರೈಕೆ, ಕುಂದುಗೋಳ ಭಾಗದ ರೈತರ ಜಮೀನುಗಳಲ್ಲಿ ಚಿಗರಿ ಹಾವಳಿ, ಬೆಳೆವಿಮೆ ಪರಿಹಾರ, ಮಧ್ಯಂತರ ಬೆಳೆವಿಮೆ ಪರಿಹಾರ, ಅತಿವೃಷ್ಟಿಯಲ್ಲಿನ ಮನೆಹಾನಿ ಪರಿಹಾರ ಬಿಡುಗಡೆ, ಬ್ಯಾಂಕ್‍ಗಳಿಂದ ಓಟಿಎಸ್ ತೊಂದರೆ, ಅಣ್ಣಿಗೇರಿಯ ಗ್ರಾಮ ಚಾವಡಿ, ಜಿಲ್ಲೆಯ ಕೆರೆಗಳಿಗೆ ಕಾಳಿನದಿ ನೀರು ಪೂರೈಕೆ, ನಮ್ಮ ಹೊಲ-ನಮ್ಮ ದಾರಿ ಯೋಜನೆ ಜಾರಿ ಮತ್ತು ಮಹದಾಯಿ ಹಾಗೂ ಉತ್ತರ ಕರ್ನಾಟಕದ ಕೃಷಿ, ನೀರಾವರಿ, ರೈತರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ರೈತ ಮುಖಂಡರಿಗೆ ಸಮಯಾವಕಾಶ ನೀಡಲು ಮನವಿ ಮಾಡಲಾಯಿತು.

ಬರ ಪರಿಸ್ಥಿತಿ ಬಗ್ಗೆ ಚರ್ಚೆ: ಸಭೆಯಲ್ಲಿ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ದನಗಳಿಗೆ ಮೇವು ಪೂರೈಕೆ, ಕುಡಿಯುವ ನೀರು, ಉದ್ಯೋಗ ನೀಡುವ ಬಗ್ಗೆ ಕಾಳಜಿ ವಹಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ರೈತರು ವಿನಂತಿಸಿದರು.

ಸಭೆಯಲ್ಲಿ ಮಾತನಾಡಿದ ನವಲಗುಂದ ಶಾಸಕ ಎನ್. ಎಚ್. ಕೋನರಡ್ಡಿ, "ಮಹದಾಯಿ ಯೋಜನೆ ಜಾರಿಗೆ ನಾನು ಒಬ್ಬ ರೈತನಾಗಿ, ಹೋರಾಟಗಾರನಾಗಿ ಬದ್ಧನಾಗಿದ್ದೇನೆ. ಪ್ರಸಕ್ತ ರಾಜ್ಯ ಬಜೆಟದಲ್ಲಿ ಮುಖ್ಯಮಂತ್ರಿಗಳು ಅನುದಾನ ನೀಡಿದ್ದಾರೆ. ಕೇಂದ್ರ ಸಚಿವರು ಆಗಿರುವ ನಮ್ಮ ಸಂಸದರೊಂದಿಗೆ ರೈತರ ಸಭೆ ನಡೆಸಿ, ಕೇಂದ್ರದ ಸಹಕಾರದಲ್ಲಿ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಕ್ರಮವಹಿಸೋಣ" ಎಂದರು.

"ಧಾರವಾಡ ಜಿಲ್ಲೆಯ ರೈತರಿಗೆ ಮಧ್ಯಂತರ ಬೆಳೆ ಪರಿಹಾರವಾಗಿ ಈಗಾಗಲೇ ಸುಮಾರು 70 ಕೋಟಿ ಬಿಡುಗಡೆ ಆಗಿದೆ. ಶೀಘ್ರದಲ್ಲಿ ಪೂರ್ಣ ಪ್ರಮಾಣದ ಬೆಳೆವಿಮೆ ಬಿಡುಗಡೆ ಆಗುತ್ತದೆ. ರಾಜ್ಯ ಸರ್ಕಾರ ಆರಂಭಿಕವಾಗಿ ರೂ. 2 ಸಾವಿರ ಬೆಳೆ ಪರಿಹಾರ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಿದೆ. ಇನ್ನು ಇದು ಪ್ರಗತಿಯಲ್ಲಿದೆ. ಕೇಂದ್ರದಿಂದ ಸುಮಾರು 17 ಸಾವಿರ ಕೋಟಿ ಪರಿಹಾರ ಬಿಡುಗಡೆ ಆಗುವ ನಿರೀಕ್ಷೆ ಇದೆ. ಇದಕ್ಕೆ ರಾಜ್ಯದ ಪಾಲು ಸೇರಿಸಿ, ರೈತರಿಗೆ ಪರಿಹಾರ ಹಣ ನೀಡಲಾಗುವುದು" ಎಂದು ಶಾಸಕರು ಹೇಳಿದರು.

"ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ಕ್ರಮವಹಿಸಿ, ಈಗಾಗಲೇ 50ಕ್ಕೂ ಹೆಚ್ಚು ವಿವಿಧ ರೈತ ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಎಲ್ಲಾ ಪ್ರಕರಣಗಳನ್ನು ಪರಿಶೀಲಿಸಿ, ಕ್ರಮವಹಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಮಹದಾಯಿ ಹಾಗೂ ಉತ್ತರ ಕರ್ನಾಟಕದ ರೈತರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ರೈತರ ಸಭೆ ನಡೆಸಲು ಚುನಾವಣಾ ಪೂರ್ವದಲ್ಲಿ ಅಥವಾ ಚುನಾವಣೆ ನಂತರ ಸಮಯ ನಿಗದಿಪಡಿಸಲು ಪ್ರಯತ್ನಿಸುತ್ತೇನೆ ಮತ್ತು ಮುಖ್ಯಮಂತ್ರಿಗಳ ಸಮಯಾವಕಾಶ ನೋಡಿಕೊಂಡು ನವಲಗುಂದ ಕಾರ್ಯಕ್ರಮದಲ್ಲಿ ರೈತ ಮುಖಂಡರನ್ನು ಭೇಟಿ ಮಾಡಿಸಲು ಪ್ರಯತ್ನಿಸಲಾಗುವುದು" ಎಂದು ಶಾಸಕರು ಭರವಸೆ ನೀಡಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, "ಧಾರವಾಡ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಧಾರವಾಡ ಮಾದರಿ ಜಿಲ್ಲೆ ಆಗಬೇಕು. ಇದಕ್ಕೆ ಧಾರವಾಡ ಜಿಲ್ಲೆಯ ಪ್ರತಿಯೊಬ್ಬರ ಸಹಕಾರ ಬೇಕು. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರು, ಜನ ಜಾನುವಾರು ಮೇವು, ನೀರಿನ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಗೋಶಾಲೆ ಪ್ರಾರಂಭವಾಗಿದೆ. ಜಿಲ್ಲೆಯ 14 ಸ್ಥಳಗಳಲ್ಲಿ ಮೇವು ಬ್ಯಾಂಕ್ ಆರಂಭಿಸಲು ಸ್ಥಳ ಗುರುತಿಸಲಾಗಿದೆ. ರೈತರಿಗೆ ಬ್ಯಾಂಕ್‍ಗಳಲ್ಲಿ ಆಗುತ್ತಿರುವ ಓಟಿಎಸ್ ಸಮಸ್ಯೆ ಪರಿಹರಿಸಲು ಲೀಡ್ ಬ್ಯಾಂಕ್ ಮ್ಯಾನೇಜರ್ ಮೂಲಕ ಎಲ್ಲಾ ಬ್ಯಾಂಕ್‍ಗಳಿಗೆ ನಿರ್ದೇಶನ ನೀಡಲಾಗುವುದು. ರೈತರಿಗೆ ಯಾವುದೇ ಸಮಸ್ಯೆಗಳಿದ್ದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತಂದರೆ, ಸಮಸ್ಯೆ ಪರಿಹರಿಸಲು ಕ್ರಮ ವಹಿಸಲಾಗುವುದು" ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+