ಮಹದಾಯಿ ವಿವಾದ : ಸುಪ್ರೀಂಕೋರ್ಟ್‌ಗೆ ಸೋಮವಾರ ಕರ್ನಾಟಕ ಅರ್ಜಿ

ಬೆಂಗಳೂರು, ನವೆಂಬರ್ 11 : ಮಹದಾಯಿ ನ್ಯಾಯಾಧೀಕರಣದ ಅಂತಿಮ ತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಕರ್ನಾಟಕ ಸರ್ಕಾರ 36.5 ಟಿಎಂಸಿ ನೀರನ್ನು ನೀಡಬೇಕು ಎಂದು ಮನವಿ ಮಾಡಲಿದೆ.

ಆಗಸ್ಟ್ 14ರಂದು ಮಹದಾಯಿ ನ್ಯಾಯಾಧೀಕರಣದ ಅಂತಿಮ ತೀರ್ಪು ಪ್ರಕಟವಾಗಿತ್ತು. ಕರ್ನಾಟಕಕ್ಕೆ 13.42 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿತ್ತು. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವಿನ ಜಲವಿವಾದ ಇದಾಗಿದೆ.

ಜಲನಂಪನ್ಮೂಲ ಇಲಾಖೆ ಅಧಿಕಾರಿಗಳ ಮಾಹಿತಿಯಂತೆ ನವೆಂಬರ್ 12ರ ಸೋಮವಾರ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಿದೆ. ಕರ್ನಾಟಕಕ್ಕೆ 36.5 ಟಿಎಂಸಿ ನೀರು ಸಿಗಬೇಕು ಎಂಬುದು ರಾಜ್ಯ ವಾದವಾಗಿದೆ.

Mahadayi dispute : Karnataka to approach Supreme Court

ಕರ್ನಾಟಕ ಸರ್ಕಾರ ಕುಡಿಯುವ ನೀರಿನ ಉದ್ದೇಶಕ್ಕೆ 7.86 ಟಿಎಂಸಿ ನೀರನ್ನು ನೀಡಬೇಕು ಎಂದು ಬೇಡಿಕೆ ಇಡಲಿದೆ. ಮಹದಾಯಿ ನ್ಯಾಯಾಧೀಕರಣ 5.5 ಟಿಎಂಸಿ ನೀರನ್ನು ಹಂಚಿಕೆ ಮಾಡಿದೆ.

ಮಹದಾಯಿ ನೀರು ಹಂಚಿಕೆ ವಿಚಾರದಲ್ಲಿ ಗೋವಾ ರಾಜ್ಯದ ಜೊತೆ ಕರ್ನಾಟಕ ಸರ್ಕಾರ ದಶಕಗಳ ಕಾಲ ಹೋರಾಟ ನಡೆಸಿದೆ. ಮುಂಬೈ-ಕರ್ನಾಟಕ ಭಾಗದ 13 ತಾಲೂಕುಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಕರ್ನಾಟಕ ಹೆಚ್ಚಿನ ನೀರನ್ನು ಕೇಳುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+