ಕುಂಭಮೇಳ ಮುಗಿದರೂ ರಾಜಕೀಯ ಚರ್ಚೆಗಳು ನಿಲ್ಲಲ್ಲ: ಯಾಕೆ ಗೊತ್ತಾ?
ಬೆಂಗಳೂರು, ಮಾರ್ಚ್ 04: ಕುಂಭಮೇಳ ಮುಗಿಯುವುದರೊಂದಿಗೆ ಅದರ ಸುತ್ತ ಸುತ್ತಿಕೊಂಡಿದ್ದ ರಾಜಕೀಯ ಲೆಕ್ಕಾಚಾರಗಳು ಮುಗಿದು ಹೋಗುತ್ತದೆಯಾ? ಎಂಬ ಪ್ರಶ್ನೆಗೆ ಇಲ್ಲ ಎಂಬ ಉತ್ತರ ಬರುತ್ತಿದೆ. ಕಾರಣ ಮಳೆ ನಿಂತರೂ ಮರದಹನಿ ನಿಲ್ಲಲ್ಲ ಎಂಬಂತೆ ಕುಂಭಮೇಳದ ಯಶಸ್ಸು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವರ್ಚಸ್ಸನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಹಾಗೆಯೇ ನಿರೀಕ್ಷೆಗೂ ಮೀರಿ ಭಕ್ತರು ಪಾಲ್ಗೊಂಡಿರುವುದು ಕುಂಭಮೇಳವನ್ನು ವಿರೋಧಿಸುತ್ತಾ ಬಂದಿದ್ದ ರಾಜಕೀಯ ಪಕ್ಷಗಳಿಗೆ ಆತಂಕವನ್ನು ತಂದೊಡ್ಡಿದೆ. ಹೀಗಾಗಿ ಕುಂಭಮೇಳದ ಸುತ್ತಲೂ ರಾಜಕೀಯ ಲಾಭನಷ್ಟದ ಚರ್ಚೆಗಳು ನಡೆಯುತ್ತಿವೆ.
ಬಹುಶಃ ಕುಂಭಮೇಳದ ಬಗ್ಗೆ ಏನನ್ನೂ ಮಾತನಾಡದೆ ಸುಮ್ಮನಿದ್ದಿದ್ದರೆ ಬಿಜೆಪಿಯನ್ನು ವಿರೋಧಿಸುವ ರಾಜಕೀಯ ಪಕ್ಷಗಳಿಗೆ ಯಾವುದೇ ಭಯವನ್ನು ತಂದೊಡ್ಡುತ್ತಿರಲಿಲ್ಲವೇನೋ? ಆದರೆ ಕುಂಭಮೇಳದ ಬಗ್ಗೆ ಹಗುರವಾಗಿ ಅಥವಾ ಅಲ್ಲಿನ ಲೋಪದೋಷಗಳನ್ನು ಎತ್ತಿ ಹಿಡಿದರೆ ಭಕ್ತರು ಅಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗಲ್ಲ. ಆಗ ಬಿಜೆಪಿಗೆ ಮುಖಭಂಗವಾಗುತ್ತದೆ ಎಂಬ ಆಲೋಚನೆಗಳು ಬಿಜೆಪಿಯನ್ನು ವಿರೋಧಿಸುವ ವಿವಿಧ ಪಕ್ಷದ ನಾಯಕರ ತಲೆಯಲ್ಲಿ ಬಂದಿತ್ತು. ಅಷ್ಟೇ ಅಲ್ಲದೆ, ಕುಂಭಮೇಳಕ್ಕೆ ಹೋಗದಂತೆ ಜನರನ್ನು ತಡೆಯುವ ಮೂಲಕ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಟಕ್ಕರ್ ನೀಡಬಹುದು ಎಂಬ ಆಲೋಚನೆಯೂ ಇತ್ತು.

ಉತ್ತರ ಪ್ರದೇಶದಲ್ಲಿ ಯಾವುದೇ ಪಕ್ಷ ಆಡಳಿತದಲ್ಲಿದ್ದಿದ್ದರೂ ಕುಂಭಮೇಳವನ್ನು ಆಯೋಜಿಸಲೇ ಬೇಕಾಗಿತ್ತು. ಹಾಗೆಂದು ಆ ಕುಂಭಮೇಳ ಆ ಪಕ್ಷದ ಪ್ರಾಯೋಜಕತ್ವದಲ್ಲಿ ನಡೆಯುತ್ತದೆ ಎಂದು ಹೇಳಲು ಸಾಧ್ಯವೇ? ಉತ್ತರ ಪ್ರದೇಶದ ಸಿಎಂಗೆ ಕುಂಭಮೇಳದ ಮೂಲಕ ಹಿಂದೂಗಳನ್ನು ಒಂದೆಡೆ ಸೇರಿಸಬೇಕೆನ್ನುವುದು ಬಯಕೆಯಾಗಿತ್ತು. ಅದನ್ನು ಅವರು ಮಾಡಿ ಮುಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಂದಷ್ಟು ಅವಘಡಗಳು, ಸಮಸ್ಯೆಗಳು ಆಗಿದ್ದರೂ ಅದೆಲ್ಲವನ್ನು ಮೀರಿ ಕುಂಭಮೇಳದ ಪವಿತ್ರ ಸ್ನಾನ ಯಶಸ್ವಿಯಾಗಿದೆ.
ಕುಂಭಮೇಳದಿಂದ ಯಾರಿಗೆ ಲಾಭ?
ರಾಜಕೀಯವನ್ನು ಹೊರತು ಪಡಿಸಿ ನೋಡಿದರೆ ಕುಂಭಮೇಳದಿಂದ ಜನರಿಗೆ, ಉದ್ಯಮಿಗಳಿಗೆ, ವ್ಯಾಪಾರಿಗಳಿಗೆ ಹೀಗೆ ಹತ್ತು ಹಲವು ವಿಧದಲ್ಲಿ ಲಾಭವಾಗಿದೆ. ಉತ್ತರ ಪ್ರದೇಶದ ಸರ್ಕಾರದ ತಿಜೋರಿಗೂ ಹಣ ಹರಿದು ಬಂದಿದೆ. ಇದರ ಜತೆಗೆ ರಾಜ್ಯ, ದೇಶ, ವಿದೇಶಗಳಿಂದ ಜನ ಹರಿದು ಬಂದಿದ್ದರಿಂದ ಹಲವು ಬಗೆಯಲ್ಲಿ ಉತ್ತರ ಪ್ರದೇಶದ ಆಚೆಗೂ ಟ್ರಾವೆಲ್ಸ್, ವಿಮಾನಯಾನ ಹೀಗೆ ಎಲ್ಲರಿಗೂ ಪ್ರಯೋಜನವಾಗಿದೆ. ಇನ್ನು ರಾಜಕೀಯವಾಗಿ ಯಾರಿಗೆ ಲಾಭವಾಗಿದೆ ಎನ್ನುವುದೇ ಈಗ ದೊಡ್ದದಾಗಿ ಚರ್ಚೆಯಾಗುತ್ತಿರುವ ವಿಚಾರವಾಗಿದೆ.

ಕಾಂಗ್ರೆಸ್ ಸೇರಿದಂತೆ ಬಿಜೆಪಿಯನ್ನು ವಿರೋಧಿಸುವ ಬಹುತೇಕ ಪಕ್ಷಗಳಿಗೆ 65 ಲಕ್ಷದಷ್ಟು ಜನರು ಕುಂಭಮೇಳದಲ್ಲಿ ಭಾಗವಹಿಸಿರುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಹಿಂದೂ ಧಾರ್ಮಿಕ ಕಾರ್ಯಕ್ರಮ ಎಂದ ತಕ್ಷಣ ಅದನ್ನು ಬಿಜೆಪಿ ಮತ್ತು ಆರ್ ಎಸ್ ಎಸ್ ಕಾರ್ಯಕ್ರಮದಂತೆ ಬಿಂಬಿಸುವ ಪಕ್ಷಗಳಿಗೆ ಇದೊಂದು ರೀತಿಯ ಆತಂಕ ತಂದಿದೆ. ಆದರೆ ಇಲ್ಲಿ ನಾವು ಮಾಡಿಕೊಂಡ ಯಡವಟ್ಟಿನಿಂದ ಬಿಜೆಪಿಗೆ ಲಾಭವಾಯಿತು ಎಂಬುದು ಇನ್ನೂ ಅವರ ಅರಿವಿಗೆ ಬಂದಂತೆ ಕಾಣಿಸುತ್ತಿಲ್ಲ. ಒಂದು ರಾಜಕೀಯ ಪಕ್ಷ ಬಲಿಷ್ಟವಾಗಿ ನಿಲ್ಲಬೇಕಾದರೆ ಆ ಪಕ್ಷದಲ್ಲಿ ಎಲ್ಲ ಜಾತಿ, ಧರ್ಮದ ನಾಯಕರು, ಕಾರ್ಯಕರ್ತರು ಇರಲೇ ಬೇಕು ಎಂಬ ಕನಿಷ್ಟ ಜ್ಞಾನ ಇಟ್ಟುಕೊಳ್ಳದಿರುವುದೇ ಸಮಸ್ಯೆಯನ್ನು ತಂದೊಡ್ಡಿದೆ.
ಬಿಜೆಪಿ ಟೀಕಿಸುವ ಭರದಲ್ಲಿ ಎಡವಿದ ಕಾಂಗ್ರೆಸ್
ಐದಾರು ದಶಕಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷವಾಗಲೀ, ಅದರ ನಾಯಕರಾಗಲೀ, ಸೂಕ್ಷ್ಮತೆಯನ್ನು ಅರಿಯದೆ ಬಿಜೆಪಿ ಮತ್ತು ಆರ್ ಎಸ್ ಎಸ್ ನ್ನು ಟೀಕಿಸುವ ಭರದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವಂತೆ ನಡೆದುಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಟೀಕೆ ಮಾಡುವುದಾದರೆ ನೇರವಾಗಿ ಬಿಜೆಪಿಯನ್ನು ಮತ್ತು ಆ ಪಕ್ಷದ ನಾಯಕರನ್ನೇ ಟಾರ್ಗೆಟ್ ಮಾಡಿ ಟೀಕೆಯನ್ನು ಮಾಡಲಿ. ಆದರೆ ಅದನ್ನು ಬಿಟ್ಟು ಹಿಂದೂಗಳ ಭಾವನೆಯನ್ನು ಕೆಣಕುವಂತಹ ಹೇಳಿಕೆಗಳನ್ನು ನೀಡುವುದೆಷ್ಟು ಸರಿ? ಇದು ನಾಯಕರಿಗೆ ಅರ್ಥವಾಗದಿರುವುದೇ ಕಾಂಗ್ರೆಸ್ ಹೀನಾಯ ಸ್ಥಿತಿಗೆ ಬರಲು ಕಾರಣವಾಗುತ್ತಿದೆ.

ಕುಂಭಮೇಳದ ಬಗ್ಗೆ ಹಗುರವಾಗಿ ಮಾತನಾಡಿದ ಬಳಿಕವೂ ಕಾಂಗ್ರೆಸ್ ನ ಹಲವು ನಾಯಕರು ಹಿರಿಯ ನಾಯಕರ ಮಾತಿಗೆ ಮನ್ನಣೆ ನೀಡದೆ ಕುಂಭಮೇಳದಲ್ಲಿ ಸ್ನಾನ ಮಾಡಿರುವುದು ಪಕ್ಷಕ್ಕೆ ಮತ್ತು ಪಕ್ಷದ ನಾಯಕರಿಗೆ ಮುಜುಗರ ತಂದಿದೆ. ಇಲ್ಲಿ ಹಿರಿಯ ನಾಯಕರು ಯಾವ ಉದ್ದೇಶಗಳನ್ನಿಟ್ಟುಕೊಂಡು ಹೇಳಿಕೆ ನೀಡಿದರೋ ಗೊತ್ತಿಲ್ಲ. ಆದರೆ ಶಾಸಕರಾಗಲು, ಸಂಸದರಾಗಲು ಎಲ್ಲ ಧರ್ಮದ ಮತದಾರರ ಬೆಂಬಲ ಬೇಕಾಗುತ್ತದೆ. ಬಹುಸಂಖ್ಯಾತರ ಮತವಿಲ್ಲದೆ ಕಾಂಗ್ರೆಸ್ ದೇಶದಲ್ಲಿ ಚುನಾವಣೆ ಹೋಗಲು ಸಾಧ್ಯನಾ?
ಬಿಜೆಪಿಗೆ ಲಾಭ ಮಾಡಿಕೊಟ್ಟ 'ಕೈ' ನಾಯಕರು
ಹಿರಿಯ ನಾಯಕರ ಹೇಳಿಕೆಗಳು, ಹಿಂದೂ ವಿರೋಧಿ ಭಾವನೆ ಹುಟ್ಟಿಸುವ ಅವರ ವರ್ತನೆಗಳು, ಬಿಜೆಪಿಯನ್ನು ವಿರೋಧಿಸುವ ಪಕ್ಷಗಳ ಕೆಲವು ನಾಯಕರಲ್ಲಿ ಆತಂಕವನ್ನು ಸೃಷ್ಟಿ ಮಾಡಿತ್ತು. ಹೀಗಾಗಿಯೇ ಕೆಲವು ನಾಯಕರು ಕುಂಭಮೇಳಕ್ಕೆ ಹೋಗಿ ಸ್ನಾನ ಮಾಡಿ ಬಂದಿದ್ದಾರೆ. ಮತ್ತು ಅದನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. ಇಂತಹ ನಾಯಕರ ಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕಿದಂತಾಗಿದೆ. ಇತ್ತ ತಮ್ಮ ಕ್ಷೇತ್ರದ ಹಿಂದೂ ಮತದಾರರ ಓಲೈಕೆಗೆ ಅದು ಅನಿವಾರ್ಯವಾಗಿದ್ದರೆ, ಅತ್ತ ಹಿರಿಯ ನಾಯಕರ ಕೆಂಗಣ್ಣಿಗೆ ಗುರಿಯಾಗಬೇಕಾದ ಪರಿಸ್ಥಿತಿ ಎದುರಾಗಿದೆ.
ಕುಂಭಮೇಳಕ್ಕೆ ಹೋದವರು ಹಿಂದೂಗಳೇ ಆಗಿರಬಹುದು. ಆದರೆ ಅವರು ಬಿಜೆಪಿಯ ಕಾರ್ಯಕರ್ತರಾಗಲೀ, ಆರ್ ಎಸ್ ಎಸ್ ನವರರಾಗಲೀ ಆಗಿರಲಿಲ್ಲ. ಆದರೆ ಕಾಂಗ್ರೆಸ್ ಸೇರಿದಂತೆ ಕೆಲವೊಂದು ಪಕ್ಷದ ನಾಯಕರು ಪವಿತ್ರ ಸ್ನಾನ ಮಾಡಲು ಹೋದವರೆಲ್ಲರನ್ನು ಬಿಜೆಪಿಯವರು ಎಂಬಂತೆ ಬಿಂಬಿಸಿ ಬಿಜೆಪಿಗೆ ಲಾಭ ಮಾಡಿಕೊಟ್ಟರಾ? ಬಿಜೆಪಿ ಮತ್ತು ಆರ್ ಎಸ್ ಎಸ್ ನ್ನು ದೂಷಿಸುವ ಭರದಲ್ಲಿ ಸಮಸ್ತ ಹಿಂದೂಗಳ ಭಾವನೆಯನ್ನೇ ಕೆರಳಿಸಿದರಾ? ಹೀಗೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಬಿಜೆಪಿ ರಾಜಕೀಯವಾಗಿ ಎಲ್ಲವನ್ನೂ ತುಂಬಾ ಚೆನ್ನಾಗಿ ಬಳಸಿಕೊಳ್ಳುತ್ತದೆ.
ಕಾಂಗ್ರೆಸ್ ಎಚ್ಚೆತ್ತುಕೊಳ್ಳುವುದು ಯಾವಾಗ?
ಕುಂಭಮೇಳದ ಕುರಿತಂತೆ ಕಾಂಗ್ರೆಸ್ ಮತ್ತು ಇಂಡಿ ಒಕ್ಕೂಟದ ಪಕ್ಷಗಳ ನಾಯಕರ ಹೇಳಿಕೆಗಳನ್ನು ಬಳಸಿಕೊಂಡು ಹಿಂದೂ ವಿರೋಧಿಗಳು ಎಂಬಂತೆ ಬಿಂಬಿಸುವಲ್ಲಿ ಬಿಜೆಪಿ ಹಿಂದೆ ಬೀಳುವುದಿಲ್ಲ. ಇದನ್ನು ಮುಂದಿನ ಎಲ್ಲ ಚುನಾವಣೆಗಳಿಗೂ ಅಸ್ತ್ರವಾಗಿ ಬಳಸಿಕೊಳ್ಳುವುದರಲ್ಲಿ ಹಿಂದೆ ಬೀಳುವುದಿಲ್ಲ. ಹೀಗೆ ಆದರೆ ಅದರ ಪರಿಣಾಮಗಳು ಏನಾಗಬಹುದು ಎಂಬುದಕ್ಕೆ ಮುಂದೆ ಬರುವ ಚುನಾವಣೆಗಳು ಸಾಕ್ಷಿಯಾಗಲಿವೆ. ಕಾಂಗ್ರೆಸ್ ನಾಯಕರು ಕೆಲವೊಂದು ವಿಚಾರಗಳಲ್ಲಿ ಎಚ್ಚರಿಕೆ ವಹಿಸದೆ ಹೋದರೆ ಅದರಲ್ಲೂ ಹಿಂದೂ ಧರ್ಮದ ಬಗ್ಗೆ ಮಾತನಾಡುವಾಗ ನಿಗಾ ವಹಿಸದೆ ಹೋದರೆ ಸಂಕಷ್ಟ ತಪ್ಪಿದಲ್ಲ.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ












Click it and Unblock the Notifications