ಮೈಸೂರಿನ ಪಾಗಲ್ ಪ್ರೇಮಿಗಳು ಬಾಗಲಕೋಟೆಯಲ್ಲಿ ಆತ್ನಹತ್ಯೆಗೆ ಯತ್ನ

Posted By:
Subscribe to Oneindia Kannada

ಬಾಗಲಕೋಟೆ, ಆಗಸ್ಟ್ 04 : ಮನೆಯವರು ಒಪ್ಪಲಿಲ್ಲ ಅನ್ನೋ ಕಾರಣಕ್ಕೆ ಪ್ರೇಮಿಗಳಿಬ್ಬರು ಊರು ಬಿಟ್ಟು ಬಂದು ಬಾಗಲಕೋಟೆ ನಗರದ ಹಳೇ ಕೋರ್ಟ್ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ನವೀನ್ ಕುಮಾರ್ ಹಾಗೂ ಮಾರಿಯಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಪ್ರೇಮಿಗಳು. ಮೂಲತಃ ಮೈಸೂರು ಜಿಲ್ಲೆಯ ಅಶೋಕಪುರಂ ನಗರದ ನಿವಾಸಿಗಳಾದ ನವೀನ್ ಕುಮಾರ್ ಹಾಗೂ ಮಾರಿಯಾ ಕಳೆದ ನಾಲ್ಕು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.

Lovers from Mysuru attempt suicide in Bagalkot

ಈ ವಿಷಯ ಇಬ್ಬರ ಮನೆಯಲ್ಲೂ ಗೊತ್ತಾದ ಬಳಿಕ ಮನೆಯವರು ಇವರ ಪ್ರೀತಿಯನ್ನ ಒಪ್ಪಿರಲಿಲ್ಲ. ಹೀಗಾಗಿ ಮನನೊಂದ ಪ್ರೇಮಿಗಳು ಮೈಸೂರಿನಿಂದ ಬಾಗಲಕೋಟೆಗೆ ಓಡಿ ಬಂದಿದ್ದಾರೆ.

ಬೆಳಗಿನ ಜಾವ ಬಾಗಲಕೋಟೆ ನಗರಕ್ಕೆ ಆಗಮಿಸಿದ್ದ ಪ್ರೇಮಿಗಳು ಹಳೇ ಕೋರ್ಟ್ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ವಿಷಯ ತಿಳಿದು ಸುತ್ತಮುತ್ತಲಿನ ಜನರು ಇಬ್ಬರನ್ನು 108 ಮೂಲಕ ಜಿಲ್ಲಾ ಆಸ್ಪತ್ರೆಗೆ ರವಾನಿಸಿಲಾಗಿದೆ.

ಸದ್ಯ ಈ ಪ್ರೇಮಿಗಳು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈಗ ಚೇತರಿಸಿಕೊಂಡಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Lovers from Mysuru Naveen Kumar and Mariya attempt to suicide by consuming-poison near old court, Bagalkot
Please Wait while comments are loading...