Lorry Owners strike: ಗುರುವಾರ ಮಧ್ಯ ರಾತ್ರಿಯಿಂದಲೇ ಲಾರಿ ಮಾಲೀಕರ ಮುಷ್ಕರ, ಸರಕು-ಸಾಗಾಣೆ ವ್ಯತ್ಯಯ, ಕಾರಣ ತಿಳಿಯಿರಿ
ಕರ್ನಾಟಕ ರಾಜ್ಯದಲ್ಲಿ ನಾಳೆ ಶುಕ್ರವಾರ ಬೆಳಗ್ಗೆಯಿಂದ ಸರಕು ಸೇವೆ, ಸಾಗಾಣೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಈ ಕುರಿತು ಎಚ್ಚರಿಕೆ ವಹಿಸುವ ಅಗತ್ಯತೆ ಇದೆ. ಏಕೆ ಕಾರಣ ತಿಳಿಯಿರಿ.
ಬೆಂಗಳೂರು, ಮಾರ್ಚ್ 16: ಕರ್ನಾಟಕ ರಾಜ್ಯದಲ್ಲಿ ನಾಳೆ ಶುಕ್ರವಾರ ಬೆಳಗ್ಗೆಯಿಂದ ಸರಕು ಸೇವೆ, ಸಾಗಾಣೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಈ ಕುರಿತು ಎಚ್ಚರಿಕೆ ವಹಿಸುವ ಅಗತ್ಯತೆ ಇದೆ.
ಸರ್ಕಾರದ ಕೆಲ ನಿರ್ಧಾರಗಳನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಇಂದು ಗುರುವಾರ (ಮಾರ್ಚ್ 16) ಮಧ್ಯರಾತ್ರಿಯಿಂದಲೇ ಅನಿದಿಷ್ಟಾವಧಿಗೆ ಮುಷ್ಕರ/ಪ್ರತಿಭಟನೆ ನಡೆಸಲು ಕರ್ನಾಟಕದ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟವು ಕರೆ ನೀಡಿದೆ.

ಸರ್ಕಾರ ವಾಣಿಜ್ಯ ವಾಹನಗಳ ಎಫ್.ಸಿ ನವೀಕರಣಕ್ಕೆ ಕ್ಯೂಆರ್ ಕೋಡ್ ಇರುವ ರೆಟ್ರೋ ರಿಫ್ಲೆಕ್ಟರ್ ಟೇಪ್ ಅಳವಡಿಕೆಯನ್ನು ಕಡ್ಡಾಯ ಮಾಡಿದೆ. ಇಲ್ಲವಾದರೆ ನವೀಕರಣಕ್ಕೆ ಅವಕಾಶ ಇಲ್ಲ ಎಂದು ತಿಳಿಸಿದೆ. ಈ ಆದೇಶವನ್ನು ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟವು ಖಂಡಿಸಿದೆ. ಜತೆಗೆ ಬೆಂಗಳೂರು ನಗರಕ್ಕೆ ಹೊರಗಿನಿಂದ ಬರುವ ಸರಕು ಸಾಗಣೆ ವಾಹನಗಳ ಪ್ರವೇಶವನ್ನು ರದ್ದು ಮಾಡಿದೆ. ಇದೆಲ್ಲದವರ ವಿರುದ್ಧ ಒಕ್ಕೂಟ ಸರಕು ಸೇವೆ ಬಂದ್ ಮಾಡಿ ಪ್ರತಿಭಟನೆ/ಮುಷ್ಕರ ನಡೆಸಲು ನಿರ್ಧರಿಸಿದೆ. ಇದಕ್ಕೆ ಲಾರಿ ಮಾಲೀಕರು, ಚಾಲಕರು ಒಪ್ಪಿಗೆ ನೀಡಿದ್ದಾರೆ.
ಲಾರಿ ಮಾಲೀಕರ ಮುಷ್ಕರ ಹಿನ್ನೆಲೆಯಲ್ಲಿ ಸರಕು ಸಾಗಣೆಯಲ್ಲಿ ವ್ಯತ್ಯಯವಾಗಲಿದೆ. ಗುರುವಾಋ ಮಧ್ಯ ರಾತ್ರಿಯಿಂದಲೇ ಹೂವು, ಹಣ್ಣು, ಹಾಲು ತರಕಾರಿಗಳ ಸರಬರಾಜಿಗೆ ಲಘು ವಾಹನಗಳು ಸಿಗುವುದಿಲ್ಲ. ನಾಳೆಯಿಂದ ಪರಿಸ್ಥಿತಿ ಹೇಳತೀರದಂತಾಗಲಿದೆ.
ಬೇಡಿಕೆಗಳು ಏನೇನು?
ವಾಹನಗಳ ನವೀಕರಣ ವೇಳೆ ಕ್ಯೂಆರ್ ಕೋಡ್ ಆಧಾರಿತ ರಿಫ್ಲ್ಕ್ಟರ್ ಟೇಪುಗಳನ್ನು ಅಳವಡಿಸಿಕೊಳ್ಳಬೇಕು ಅನ್ನೋ ನಿಯಮ ಹಿಂಪಡೆಯಬೇಕು. ಬೆಂಗಳೂರು- ಮೈಸೂರು ರಸ್ತೆಯಲ್ಲಿ ದ್ವಿಚಕ್ರ ಮತ್ತು ಮಂದಗತಿಯಲ್ಲಿ ಚಲಿಸುವ ಟ್ರಾಕ್ಟರ್ ಆಟೋರಿಕ್ಷಾಗಳ ಓಡಾಟ ನಿಷೇಧಿಸಬೇಕು.

ಲಾರಿ ಬಾಡಿಗೆ ಸಹಿತ ಟೋಲ್ ಸುಂಕವನ್ನು ಬಾಡಿಗೆ ನೀಡಿದವರೆ ಕೊಡಬೇಕು. ಬೆಂಗಳೂರಿನ ಒಳಗೆ ಅವೈಜ್ಞಾನಿಕ ವಾಹನ ನಿಷೇಧಿಸಿರುವ ನಿಯಮ ಹಿಂಪಡೆಬೇಕು. ಮುಖ್ಯವಾಗಿ ಇನ್ನೂ ನೈಸ್ ರಸ್ತೆಯಲ್ಲಿ ಹಿಂದಿನ 10 ವರ್ಷದಿಂದಲೂ ಟೋಲ್ ಹಣ ತೆಗೆದುಕೊಳ್ಳುತ್ತಿದ್ದಾರೆ. ಇದು ಹಗಲು ದರೋಡೆ ಎಂದಿರುವ ಒಕ್ಕೂಟ ಅದರ ತೆರವಿಗೆ ಒತ್ತಾಯಿಸಿದೆ.












Click it and Unblock the Notifications