ಪೋಷಕರ ಪಾಲನೆ ಮಕ್ಕಳ ಬಾಧ್ಯತೆ, ಚಾರಿಟಿಯಲ್ಲ; ಕೋರ್ಟ್

ಬೆಂಗಳೂರು, ನವೆಂಬರ್ 14: ಮಕ್ಕಳು ಪೋಷಕರನ್ನು ನೋಡಿಕೊಳ್ಳುವುದು ಚಾರಿಟಿಯಲ್ಲ, ಅದು ಅವರ ಬಾಧ್ಯತೆ. ಕಾನೂನು ಧರ್ಮ ಮತ್ತು ನೈತಿಕತೆಯನ್ವಯ ಅದು ಆದ್ಯ ಕರ್ತವ್ಯ ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ. ಉಪವಿಭಾಗಾಧಿಕಾರಿಯ ಕ್ರಮವನ್ನು ನ್ಯಾಯಾಲಯ ಎತ್ತಿಹಿಡಿದಿದೆ.

ಮಗಳು ಮತ್ತು ಅಳಿಯ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರ್ಲೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

Looking After Aged Parents Not A Charity Says High Court

ಗಿಫ್ಟ್ ಡೀಡ್ ರದ್ದು: ಏಕಸದಸ್ಯಪೀಠದ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೆಂದು ಹೇಳಿರುವ ವಿಭಾಗೀಯ ಪೀಠ, "ಇತ್ತೀಚಿನ ದಿನಗಳಲ್ಲಿ ಪೋಷಕರ ಮೇಲಿನ ಹಲವು ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿದೆ, ಹಲವು ಕಾರಣಗಳಿಂದಾಗಿ ಅವುಗಳಲ್ಲಿಎಲ್ಲೂ ಪೋಷಕರು ಕಾಣಿಸಿಕೊಳ್ಳುವುದಿಲ್ಲ. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳು, ಪ್ರಾಧಿಕಾರಿಗಳು ಸೂಕ್ಷ್ಮವಾಗಿರಬೇಕು, ಹಿರಿಯ ನಾಗರಿಕರ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ" ಎಂದು ನ್ಯಾಯಪೀಠ ಹೇಳಿದೆ.

"ಪೋಷಕರು ಸಂಧ್ಯಾಕಾಲದಲ್ಲಿದ್ದಾಗ ಅವರನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ, ಅದರಲ್ಲೂ ಮಕ್ಕಳು ಉಡುಗೊರೆ ರೂಪಲ್ಲಿ ಆಸ್ತಿಯನ್ನು ಪಡೆದಿದ್ದಾಗ ಅದನ್ನು ಮಾಡಬೇಲೇಕು. ವಯಸ್ಸಾದ ಅಪ್ಪ ಮತ್ತು ಅಮ್ಮನನ್ನು ನೋಡಿಕೊಳ್ಳುವುದು ಚಾರಿಟಿಯಲ್ಲ, ಶಾಸನಬದ್ಧ ಬಾಧ್ಯತೆ" ಎಂದು ನ್ಯಾಯಪೀಠ ಹೇಳಿದೆ.

ಶತಮಾನಗಳ ಹಿಂದೆಯೇ ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ರಕ್ಷಂತಿ ಸಥ್ವಿರೇ ಪುತ್ರ ಅಂದರೆ ಪೋಷಕರ ಸಂಧ್ಯಾಕಾಲದಲ್ಲಿದ್ದಾಗ ಅವರನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯವಾಗಿದೆ. 1991ರಲ್ಲಿ ವಿಶ್ವಸಂಸ್ಥೆ ಕೂಡ ಹಿರಿಯರ ಆರೈಕೆಗೆ ನಿರ್ಣಯ ಕೈಗೊಂಡಿದೆ ಎಂದು ಆದೇಶಿಸಿದೆ. ಅರ್ಜಿದಾರರು ತಾವು ರಾಜಶೇಖರಯ್ಯ ಅವರ ಆರೋಗ್ಯಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದೇವೆ. ಹಾಗಾಗಿ ಎಸಿ ಆದೇಶ ರದ್ದುಗೊಳಿಸಬೇಕು ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ ಏನು?; ರಾಜಶೇಖರಯ್ಯ ಅವರ ಪುತ್ರಿ, ಆರ್‌. ಕವಿತಾ ತುಮಕೂರು ಜಿಲ್ಲೆಯ ಬಸವಾಪಟ್ಟಣದ ಯೋಗೇಶ್‌ ಅವರನ್ನು ಮದುವೆಯಾಗಿದ್ದರು. 2018ರ ಸೆ.28ರಂದು ತನ್ನ ಆಸ್ತಿಯನ್ನು ಮಗಳಿಗೆ ಗಿಫ್ಟ್‌ ಡೀಡ್‌ ಮಾಡಿದ್ದರು. ನಂತರ ರಾಜಶೇಖರಯ್ಯ ಅವರು ಪೋಷಕರು, ಹಿರಿಯ ನಾಗರಿಕ ಕಲ್ಯಾಣ ಮತ್ತು ನಿರ್ವಹಣಾ ಕಾಯಿದೆ 2007ರ ಅನ್ವಯ ಉಪವಿಭಾಗಾಧಿಕಾರಿ ಮುಂದೆ ಅರ್ಜಿ ಹೂಡಿದ್ದರು.

ಅವರು ತನ್ನ ಮಗಳು ಮತ್ತು ಅಳಿಯ ತಹಸೀಲ್ದಾರ್‌ ಕಚೇರಿಗೆ ವೃದ್ಧಾಪ್ಯ ವೇತನ ಮಾಡಿಸಲು ಎಂದು ಕರೆದುಕೊಂಡು ಹೋಗಿ ಹಲವು ಕಾಗದ ಪತ್ರಗಳಿಗೆ ಸಹಿ ಹಾಕಿಸಿಕೊಂಡಿದ್ದರು. ಅಲ್ಲದೆ, ತನ್ನಿಂದ ಮನೆ ನಿರ್ಮಾಣಕ್ಕೆ 10 ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದರು ಮತ್ತು ಮನೆ ನಿರ್ಮಾಣಕ್ಕೆ ಮಾಡಿರುವ ಸಾಲ ತೀರಿಸಲು ಆಸ್ತಿ ಮಾರಾಟ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದರು.

ಅದಕ್ಕೆ ಪ್ರತಿಯಾಗಿ ಎಸಿ ಮುಂದೆ ಹಾಜರಾದ ಮಗಳು ಮತ್ತು ಅಳಿಯ, ತಾವೇ ರಾಜಶೇಖರಯ್ಯ ಮತ್ತು ಮತ್ತೊಬ್ಬ ಮಗಳು ನಿರ್ಮಲಾರನ್ನು ಅವರನ್ನು ನೋಡಿಕೊಳ್ಳುತ್ತಿದ್ದೇವೆ. ಅವರ ವೈದ್ಯಕೀಯ ಚಿಕಿತ್ಸೆಗಾಗಿ 30 ಲಕ್ಷ ಖರ್ಚು ಮಾಡಿದ್ದೇವೆ ಎಂದು ವಾದಿಸಿದ್ದರು.

ಆದರೆ ಉಪವಿಭಾಗಾಧಿಕಾರಿ 2021ರ ಫೆ.24ರಂದು ಗಿಫ್ಟ್‌ ಡೀಡ್‌ ನಲ್ಲಿಕವಿತಾ ತನ್ನ ತಂದೆಯನ್ನು ನೋಡಿಕೊಳ್ಳಬೇಕೆಂಬ ಷರತ್ತು ವಿಧಿಸಲಾಗಿದೆ. ಆದರೆ ಮಗಳು ಮತ್ತು ಅಳಿಯ ರಾಜಶೇಖರಯ್ಯ ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಿ ಗಿಫ್ಟ್‌ ಡೀಡ್‌ ಅನ್ನು ರದ್ದುಗೊಳಿಸಿದ್ದರು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಏಕಸದಸ್ಯಪೀಠದ ಮೊರೆ ಹೋಗಿದ್ದರು. ಏಕಸದಸ್ಯಪೀಠವೂ ಎಸಿ ಆದೇಶ ಎತ್ತಿಹಿಡಿದ ಹಿನ್ನೆಲೆಯಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+