Lokayukta Raid: ಬಿಜೆಪಿ ಶಾಸಕ ಪುತ್ರನ ಮೇಲೆ ಲೋಕಾಯುಕ್ತ ದಾಳಿ: ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ: ಸಿಎಂ

ಯಾರೇ ತಪ್ಪು ಮಾಡಿದರು ಸೂಕ್ತ ರೀತಿಯಲ್ಲಿ ತನಿಖೆಯಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರು,ಮಾರ್ಚ್3: ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್‌ ಅವರು ಬೆಂಗಳೂರಿ ಕ್ರೆಸೆಂಟ್ ರಸ್ತೆಯ ಖಾಸಗಿ ಕಚೇರಿಯಲ್ಲಿ 40 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಪ್ರಶಾಂತ್ ಮಾಡಾಳ್ ಬಂಧಿಸಿದ್ದಾರೆ.

ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್‌ ಅವರು ಮೇಲೆ ಲೋಕಾಯುಕ್ತ ರೇಡ್ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ನಾವು ಲೋಕಾಯುಕ್ತವನ್ನ ಪುನರ್ ಸ್ಥಾಪನೆ ಮಾಡಿದ್ದೇ ಭ್ರಷ್ಟಾಚಾರವನ್ನ ಮುಕ್ತವಾಗಿ ನಿಗ್ರಹಿಸಬೇಕು ಅಂತ. ಈ ಲೋಕಾಯುಕ್ತ ಇಲ್ಲದಿದ್ದರೆ ಇಂತಹ ಹಲವಾರು ಪ್ರಕರಣಗಳು ಕಾಂಗ್ರೆಸ್ ಆಡಳಿತದಲ್ಲಿ ನಡೆದು ಮುಚ್ಚಿಹೋಗಿದೆ. ಲೋಕಾಯುಕ್ತ ಬಲ ತುಂಬಿದ್ಧೇ ಭ್ರಷ್ಟಾಚಾರ ನಿಗ್ರಹಕ್ಕೆ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲಿ, ಲೋಕಾಯುಕ್ತ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿ ಎಂದು ಹೇಳಿದರು.

Lokayukta Raid On Prashant Madal House CM Basavaraj Bommai Reaction

ಭ್ರಷ್ಟಾಚಾರ ತಡೆಯುವುದಕ್ಕಾಗಿ ಲೋಕಾಯುಕ್ತ ಸ್ಥಾಪನೆ ಮಾಡಿದ್ದೇವೆ. ಕಾಂಗ್ರೆಸ್ ಶಾಸಕರ ಮೇಲು ಹಲವು ಆರೋಪಗಳಿತ್ತು, ಅವೆಲ್ಲವೂ ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ಮುಚ್ಚಿ ಹಾಕಿದ್ದು, ಆ ಎಲ್ಲ ಕೇಸ್​ಗಳ ತನಿಖೆ ಆಗಲಿ. ನಾವು ಲೋಕಾಯುಕ್ತ ಪುನರ್ ಸ್ಥಾಪನೆ ಮಾಡಿರುವುದು ಭ್ರಷ್ಟಾಚಾರ ನಿಯಂತ್ರಿಸಲು. ಹಿಂದೆ ಲೋಕಾಯುಕ್ತ ಇಲ್ಲದೆ ಕಾಂಗ್ರೆಸ್ ಕಾಲದ ಕೇಸ್​ಗಳು ಮುಚ್ಚಿಹೋಗಿದ್ದವು. ಲೋಕಾಯುಕ್ತ ಸರ್ವ ಸ್ವತಂತ್ರವಾಗಿ ಕೆಲಸ ಮಾಡಲಿ. ನಾವು ಯಾರನ್ನೂ ರಕ್ಷಣೆ ಮಾಡಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುವಂತೆ ತನಿಖೆಯಾಗಲಿ ಎಂದು ಹೇಳಿದರು.

ನಾವು ನಿಷ್ಪಕ್ಷಪಾತವಾಗಿ ತೆನಿಖೆ ಮಾಡ್ತೀವಿ ಅಂತ ಪದೇ ಪದೇ ಹೇಳುತ್ತಿದ್ದೇವೆ. ನಿಷ್ಪಕ್ಷಪಾತವಾಗಿ ತೆನಿಖೆಯಾಗಿ ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಲಿ, ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ಏನು ಮಾಹಿತಿ ಸಿಕ್ಕಿದೆ ಹಣ ಸಿಕ್ಕಿದೆ ಲೋಕಾಯುಕ್ತ ಬಳಿ ಇದೆ. ಯಾರಿಗೆ ಸೇರಿದ ಹಣ ಯಾರಿಗೋಸ್ಕರ ಆಗಿದ್ದು ಹೊರಬರಲಿ. ಸತ್ಯ ಹೊರಗಡೆ ಬರಲಿ ಅನ್ನೋದು ನಮ್ಮ ಉದ್ದೇಶ, ಯಾರು ತಪ್ಪು ಮಾಡ್ತಾರೆ ಅವರು ಶಿಕ್ಷೆ ಅನುಭಿಸುತ್ತಾರೆ ಎಂದರು.

ಈ ಹಿಂದೆ ಕಾಂಗ್ರೆಸ್ ಶಾಸಕರ ಮೇಲೆ ಹಲವಾರು ಆರೋಪವಿತ್ತು. ಅವರ ಮಂತ್ರಿಗಳ ಮೇಲೆ ಇತ್ತು, ಎಸಿಬಿ ಇದದ್ದಕ್ಕೆ ಅವರು ಕೇಸ್ ಮುಚ್ಚಿಹಾಕಿದ್ರು. ಈಗ ಲೋಕಾಯುಕ್ತ ತೆನಿಖೆಯಾದಗ ಅವರದ್ದು ಸಹ ಹೊರಗಡೆ ಬರುತ್ತೆ, ಕಾಂಗ್ರೆಸ್ ಲೋಕಾಯುಕ್ತ ಮುಚ್ಚಿಹಾಕಿರೋದಕ್ಕೆ ಇದೇ ಸಾಕ್ಷಿ. ಲೋಕಾಯುಕ್ತ ನಾಲ್ಕೈದು ವರ್ಷ ಮುಚ್ಚಿಹಾಕಿದರು. ಅದರಿಂದ ನಮಗೆ ಯಾವುದೇ ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

Lokayukta Raid On Prashant Madal House CM Basavaraj Bommai Reaction

ಬಹಳ ಸ್ಪಷ್ಟವಾಗಿ ಕೆ ಜೆ ಜಾರ್ಜ್ ಅವರು ವಿಧಾನಸಭೆಯಲ್ಲಿ ಹೇಳ್ತಾರೆ, ಎಸಿಬಿನೇ ಮುಂದುವರಿಸಿ ಅಂತ, ಅವರು ಯಾರ ಪರವಾಗಿದ್ದಾರೆ. ಈಗ ಈ ಘಟನೆ ಇಟ್ಟುಕೊಂಡು ತಾವು ದೊಡ್ಡ ಸ್ವಚ್ಛ ಪಕ್ಷ ಅಂತ ಹೇಳಿಕೊಳ್ಳಲು ಸಾಧ್ಯವಿಲ್ಲ. ಅವರು ಬಹಳ ಹಿಂದೆಯೂ ಭ್ರಷ್ಟಾಚಾರ ಮಾಡಿದ್ದಾರೆ, ಹಲವಾರು ಜನರ ಮೇಲೆ ಕೇಸ್ ಸಹ ಆಗಿದೆ. ತೆನಿಖೆ ಸಹ ಆಗುತ್ತಿದೆ. ಅವರು ಏನು ಮುಚ್ಚಿ ಹಾಕಿದ್ರೋ ಅವೆಲ್ಲ ಲೋಕಾಯುಕ್ತಕ್ಕೆ ಕೊಟ್ಟು ತೆನಿಖೆ ಮಾಡಿಸ್ತೀನಿ ಎಂದು ಹೇಳಿದರು.

ಅಬಕಾರಿ ಹಾಗೂ ಕಾರ್ಮಿಕ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿದೆ ಎಂಬ ಡಿ.ಕೆ.ಶಿವಕುಮಾರ್ ಆರೋಪ ವಿಚಾರವಾಗಿ ಮಾತನಾಡಿ, ಅಬಕಾರಿ ಹಾಗೂ ಕಾರ್ಮಿಕ ಇಲಾಖೆ ಹಗರಣ ಕೂಡ ತನಿಖೆ ಮಾಡಿಸುತ್ತೇವೆ ಎಂದ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+