ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

13 ಕಡೆ ಲೋಕಾಯುಕ್ತ ದಾಳಿ, 14 ಕೋಟಿ ಅಕ್ರಮ ಆಸ್ತಿ ಪತ್ತೆ

|
Google Oneindia Kannada News

ಬೆಂಗಳೂರು, ಏ. 29 : ಮಂಗಳವಾರ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು 14 ಕೋಟಿಗೂ ಅಧಿಕ ಮೊತ್ತದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ. ಐಎಎಸ್ ಅಧಿಕಾರಿ ಸೇರಿದಂತೆ ವಿವಿಧ ಹುದ್ದೆಯಲ್ಲಿರುವ 13 ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಲಾಗಿದೆ.

ಬೆಂಗಳೂರು, ಬಾಗಲಕೋಟೆ, ಬೀದರ್‌, ಮಂಗಳೂರು, ಧಾರವಾಡ, ಮಂಡ್ಯ, ಶಿವಮೊಗ್ಗ, ಕಲಬುರಗಿ ಸೇರಿದಂತೆ ಒಟ್ಟು 36 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಯಿತು ಎಂದು ಲೋಕಾಯುಕ್ತ ಎಡಿಜಿಪಿ ಪ್ರೇಮಶಂಕರ ಮೀನಾ ಅವರು ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. [ಶಿವಮೊಗ್ಗ, ಮಂಡ್ಯ ಸೇರಿ ವಿವಿಧ ಜಿಲ್ಲೆಯಲ್ಲಿ ಲೋಕಾ ದಾಳಿ]

Lokayukta

ಬೆಂಗಳೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ, ಐಎಎಸ್‌ ಅಧಿಕಾರಿ ಬಿ.ಎಂ. ವಿಜಯಶಂಕರ್ ಅವರ ಮನೆಯ ಮೇಲೆ ದಾಳಿ ಮಾಡಲಾಗಿದೆ. ವಿಜಯಶಂಕರ ಅವರ ಬಳಿ 3 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ. ಕೆಲವು ಅಧಿಕಾರಿಗಳಿಗೆ ಸೇರಿದ ಬ್ಯಾಂಕ್‌ ಲಾಕರ್‌ಗಳ ತಪಾಸಣೆ ನಡೆಯುತ್ತಿದ್ದು, ಅಕ್ರಮ ಆಸ್ತಿ ಹೆಚ್ಚಾಗುವ ಸಾಧ್ಯತೆ ಇದೆ.[ರೇಣುಕಾಚಾರ್ಯ ವಿರುದ್ಧ ಅಕ್ರಮ ಆಸ್ತಿಗಳಿಕೆ ದೂರು]

ಆಸ್ತಿಯ ವಿವರಗಳು

* ಬಿ.ಎಂ.ವಿಜಯ ಕುಮಾರ್ (ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯ)
1 ಮನೆ, 5 ನಿವೇಶನ - ಅಕ್ರಮ ಆಸ್ತಿ 3.03 ಕೋಟಿ

* ಪಿ.ನಾರಾಯಣಮೂರ್ತಿ (ಉಪ ಕಾರ್ಯದರ್ಶಿ ಬಿಡಿಎ, ಬೆಂಗಳೂರು)
2 ಮನೆ, 4 ನಿವೇಶನ - ಅಕ್ರಮ ಆಸ್ತಿ 1.54 ಕೋಟಿ

* ಅಶೋಕ್ ಕುಮಾರ್ (ಎಫ್‌ಡಿಎ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯಾದಗಿರಿ)
2 ಮನೆ, 1 ನಿವೇಶನ - ಅಕ್ರಮ ಆಸ್ತಿ 89.15 ಲಕ್ಷ

* ಡಾ.ಜಿ.ರಮೇಶ್ ಬಾಬು (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ, ಬಳ್ಳಾರಿ)
2 ಮನೆ, 1 ವಾಣಿಜ್ಯ ಸಂಕೀರ್ಣ - ಅಕ್ರಮ ಆಸ್ತಿ -1.25 ಕೋಟಿ

* ಎಸ್.ಸಿ.ಪದ್ಮರಾಜ (ಜಿಲ್ಲಾ ಯೋಜನಾಧಿಕಾರಿ, ಚಿಕ್ಕಬಳ್ಳಾಪುರ)
2 ಮನೆ, 1 ಬಾರ್, 1 ನಿವೇಶನ - ಅಕ್ರಮ ಆಸ್ತಿ 2.12 ಕೋಟಿ

* ಮಾರ್ತಾಂಡಪ್ಪ ಬಡಿಗೇರ (ಕಿರಿಯ ಸಹಾಯಕ, ಕೆಐಎಡಿಬಿ ಧಾರವಾಡ)
4 ನಿವೇಶನ - ಅಕ್ರಮ ಆಸ್ತಿ 86 ಲಕ್ಷ

* ತಿಮ್ಮಯ್ಯ (ಕಿರಿಯ ಸಹಾಯಕ ರಾಗಿ ಕೇಂದ್ರ, ತಿಪಟೂರು)
3 ಮನೆ, 3 ನಿವೇಶನ - ಅಕ್ರಮ ಆಸ್ತಿ 49.75 ಲಕ್ಷ

* ಸಿ.ವಿಜಯ ಕುಮಾರ್ ( ಕಂದಾಯ ನಿರೀಕ್ಷಕ ಶಿವಮೊಗ್ಗ)
1 ಮನೆ, 1 ನಿವೇಶನ - ಅಕ್ರಮ ಆಸ್ತಿ 32.19 ಲಕ್ಷ

* ಕೆ.ಎಸ್.ಚಂದ್ರಶೇಖರ (ಸಹಾಯಕ ಇಂಜಿನಿಯರ್ ಎನ್‌ಎಚ್‌ಎಐ, ಶೃಂಗೇರಿ)
1 ಮನೆ, 3 ಎಕರೆ ಜಮೀನು - ಅಕ್ರಮ ಆಸ್ತಿ 47.90 ಲಕ್ಷ

* ಕೆ.ಎಸ್.ಪದ್ಮನಾಭ (ಕಿರಿಯ ಇಂಜಿನಿಯರ್, ಪಟ್ಟಣ ಪಂಚಾಯಿತಿ ಮುಲ್ಕಿ)
5 ನಿವೇಶನ - ಅಕ್ರಮ ಆಸ್ತಿ 37.58 ಲಕ್ಷ

* ಕಾಶೀನಾಥ್ ಬೀದರ್‌ಕರ್ ( ಉಪ ಅಭಿವೃದ್ಧಿ ಅಧಿಕಾರಿ ಕೆಐಎಡಿಬಿ, ಕಲಬುರಗಿ)
2 ಮನೆ, 3 ನಿವೇಶನ (1.15 ಕೋಟಿ)

* ಲಕ್ಷಣ ನಿಲೋಗಲ್ (ಕಾರ್ಯನಿರ್ವಾಹಕ ನಿರ್ದೇಶಕ ಕೆಎಸ್ಎಫ್‌ಸಿ, ಬೆಂಗಳೂರು)
2 ಬಂಗಲೆ, 1 ನಿವೇಶನ (1.16 ಕೋಟಿ)

* ಎಂ.ಎಸ್.ಸಿದ್ದೇಗೌಡ (ಗ್ರಾಮ ಲೆಕ್ಕಾಧಿಕಾರಿ, ಮಂಡ್ಯ)
2 ಮನೆ, 3 ನಿವೇಶನ (43.68 ಲಕ್ಷ)

English summary
The Karnataka Lokayukta police on Tuesday conducted raids on 13 government servants including an IAS officer BM Vijaya Shankar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X