ಸಿದ್ದರಾಮಯ್ಯನವರ ಲೋಕಾಯುಕ್ತ ವಿಚಾರಣೆ ಹೇಗಿತ್ತು? ಪೊಲೀಸರು ಕೇಳಿದ ಪ್ರಮುಖ ಪ್ರಶ್ನೆಗಳು ಇಲ್ಲಿವೆ
ಮೈಸೂರು, ನವೆಂಬರ್ 06: 40 ವರ್ಷಗಳ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆ ಎದುರಿಸುತ್ತಿದ್ದಾರೆ. ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿನಲ್ಲಿರುವ ಲೋಕಾಯುಕ್ತ ಕಚೇರಿಗೆಯಲ್ಲಿ ವಿಚಾರಣೆಗೆ ಹಾಜರಾಗಿದ್ದು, ಮುಡಾ ಹಗರಣ ಸಂಬಂಧ ಹಲವು ಪ್ರಶ್ನಿಗಳನ್ನ ಸಿದ್ದರಾಮಯ್ಯ ಅವರ ಮುಂದಿಟ್ಟಿದ್ದಾರೆ.
ಮುಡಾ ಹಗರಣದ ಎ 1 ಆರೋಪಿಯಾಗಿರುವ ಸಿದ್ದರಾಮಯ್ಯಗೆ ಕೇಳಲು ಸುಮಾರು 20ಕ್ಕೂ ಹೆಚ್ಚು ಪ್ರಶ್ನೆಗಳನ್ನು ಲೋಕಾಯುಕ್ತ ಪೊಲೀಸರು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭೂಮಿ ಹಂಚಿಕೆ, ಅಧಿಕಾರ ದುರ್ಬಳಕೆ, ಮತ್ತು ಆರ್ಥಿಕ ಲಾಭದ ಆರೋಪಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಸೇರಿವೆ ಎಂದು ತಿಳಿದು ಬಂದಿದೆ.

ಮೊದಲಿಗೆ ಸಿಎಂ ಕೂಡ ನೀವು ಎಷ್ಟು ಪ್ರಶ್ನೆ ಬೇಕಿದ್ರು ಕೇಳಿ ನಾನು ಉತ್ತರಿಸುತ್ತೇನೆ ಅಂದಿದ್ದಾರೆ. ಸಿಎಂ ಅನ್ನುವ ಭಯ ಬೇಡ, ಬೇರೆ ಆರೋಪಿಗಳಿಗೆ ವಿಚಾರಣೆ ಪ್ರಕ್ರಿಯೆ ಏನಿದೆ ಅದನ್ನೇ ನನಗೂ ಫಾಲೋ ಮಾಡಿ ಅಂದಿದ್ದಾರೆ. ಆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಎಸ್‌ಪಿ ಉದೇಶ್ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.
ಲೋಕಾಯುಕ್ತ SP ಉದೇಶ್ ಸಿಎಂ ಸಿದ್ದರಾಮಯ್ಯ ಗೆ ಸಾಲು ಸಾಲು ಪ್ರಶ್ನೆಗಳು ಇಲ್ಲಿವೆ
* 14 ನಿವೇಶನಗಳನ್ನು ನಿಮ್ಮ ಪತ್ನಿ ಮುಡಾದಿಂದ ಪಡೆದರುವುದು ನಿಮ್ಮ ಪ್ರಭಾವದಿಂದ ಎಂಬ ಆರೋಪ ಇದೆ ಏನಂತೀರಿ ..?
* ನಿಮ್ಮ ಅಧಿಕಾರದವನ್ನ ದುರುಪಯೋಗ ಪಡಿಸಿಕೊಂಡಿದ್ದೀರಾ ಎಂಬ ಆರೋಪ ಇದೆ ಇದು ನಿಜನಾ.?
* ನೀವು ಅಧಿಕಾರದಲ್ಲಿದ್ದಾಗಲೇ ನಾಲ್ಕು ಹಂತದಲ್ಲಿ ಪ್ರಭಾವ ನಡೆದಿಯೆಂತೆ. ನಿಮ್ಮ ವೈಫ್ ಇದ್ರ ಬಗ್ಗೆ ನಿಮ್ಮ ಬಳಿ ಮಾತಾಡಿದ್ದಾರಾ?
* ಭೂಮಿ ಕಳೆದಕೊಂಡ ಬಡವಾಣೆ ಬಿಟ್ಟು ಸಮಾನಾಂತರ ಬಡವಾಣೆಯಲ್ಲಿ ಹೊರತುಪಡಿಸಿ ವಿಜಯನಗರದಲ್ಲಿ ನಿವೇಶನ ಬೇಕು ಅಂತ ಅರ್ಜಿ ಹಾಕಿದ್ರಾ .. ಇದು ನಿಮ್ಮ ಗಮನಕ್ಕೆ ಬಂದಿತ್ತಾ?
* ವಿಜಯನಗರದಲ್ಲಿ 14 ನಿವೇಶನ ನಿಮ್ಮ ಪತ್ನಿ ಹೆಸರಿಗೆ ಬಂದಿದ್ದು ನಿಮಗೆ ಗೊತ್ತಿದ್ಯಾ? ಯಾವಾಗ ಗೊತ್ತಾಯಿತು. ನಿಮ್ಮ ಪತ್ನಿಗೆ ಈ ಬಗ್ಗೆ ಪ್ರಶ್ನೆ ಮಾಡಲಿಲ್ವಾ?
* ನಿಮ್ಮ ಬಾಮೈದ ನಿಮ್ಮ ಪತ್ನಿಗೆ ಭೂಮಿಯನ್ನ ಅರಿಶಿಣ ಕುಂಕುಮಕ್ಕೆ ದಾನ ಕೊಟ್ಟಾಗ ನಿಮಗೆ ಮಾಹಿತಿ ಇತ್ತಾ.. ?
* ಭೂಮಿಯ ವಿವಾದದ ಹಿನ್ನೆಲೆ ನಿಮಗೆ ಯಾವಾಗ ಗೊತ್ತಾಯಿತು? ನಿವೇಶನ ಹಂಚಿಕೆ ಮಾಡುವಾಗ ಮುಡಾ ಆಯುಕ್ತರನ್ನ ಸಂಪರ್ಕ ಮಾಡಿದ್ರಾ..?
* ನಿಮ್ಮ ಪುತ್ರ ಯತೀಂದ್ರ ನಿವೇಶನ ಹಂಚಿಕೆ ಸಂಧರ್ಭದಲ್ಲಿ ಮುಡಾ ಸಭೆಗೆ ಇದ್ರು ಎಂಬ ಆರೋಪ ಇದೆ. ಮಗಿನಿಂದ ಮಾಹಿತಿ ಪಡೆದಿದ್ರಾ..?
* ಆರ್ಥಿಕ ಲಾಭಕ್ಕಾಗಿ ಇದೇ ವಿಜಯನಗರ ವ್ಯಾಪ್ತಿಯಲ್ಲಿ 14 ನಿವೇಶನ ಪಡೆದಿದ್ದಾರೆ ಎಂಬ ಆರೋಪ .. ಅಧಿಕಾರಿಗಳಿಗೆ ಒತ್ತಡ ಹೇರಿದ್ರಾ?
* ವೈಟ್ನರ್ ಹಿಂದಿರುವ ಪದಗಳು ಏನು ನೀವೇ ತಿದ್ದುಪಡಿ ಮಾಡಿಸಿದ್ದು ಅನ್ನೋ ಆರೋಪ ಇದೆ?
* ನಿಮ್ಮ ಪತ್ನಿ ಪಾರ್ವತಿ ಅವರು ಕೊಟ್ಟ ಪತ್ರದಲ್ಲಿ ಇದ್ದ ಬದಲಿ ನಿವೇಶನದ ಮಾಹಿತಿ ಹೇಳಿ..?
* ನಿಮ್ಮ ಪತ್ನಿ ಹಾಗೂ ನಿಮಗೆ ಸೈಟ್ ವಿಚಾರವಾಗಿ ಆರ್ಥಿಕ ವ್ಯವಹಾರ ನಡೆದಿದ್ಯಾ..?












Click it and Unblock the Notifications