BJP Candidate 2nd List: ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯೇ ದೊಡ್ಡ ಸವಾಲ್: ಎರಡನೇ ಪಟ್ಟಿ ರೀಲಿಸ್ ಯಾವಾಗ?
ಬೆಂಗಳೂರು, ಮಾರ್ಚ್ 10: ಲೋಕಸಭೆ ಚುನಾವಣಾ ದಿನಾಂಕವನ್ನ ಮುಂದಿನ ವಾರ ಚುನಾವಣಾ ಆಯೋಗ ಪ್ರಕಟಿಸಲಿದೆ. ಇತ್ತ ಬಿಜೆಪಿ ಹೈಕಮಾಂಡ್ 195 ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಸದ್ಯ ಎರಡನೇ ಪಟ್ಟಿ ಬಿಡುಗಡೆಗೆ ಕಸರುತ್ತು ಜೋರಾಗಿದೆ.
ಕರ್ನಾಟಕದಲ್ಲಿ ಆಡಳಿತರೂಢ ಕಾಂಗ್ರೆಸ್ ಗೆ ಸೋಲಿನ ರುಚಿ ತೋರಿಸಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದ್ದು, ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯೇ ಬಿಜೆಪಿ ವರಿಷ್ಠರಿಗೆ ದೊಡ್ಡ ತಲೆನೋವಾಗಿದೆ. ಈಗಾಗಲೇ ರಾಜ್ಯ ಬಿಜೆಪಿ ನಾಯಕರಾದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಸೇರಿದಂತೆ ಹಲವು ರಾಜ್ಯ ನಾಯಕರು ದೆಹಲಿಗೆ ತೆರಳಿ ರಾಜ್ಯದ ಅಭ್ಯರ್ಥಿಗಳ ಆಯ್ಕೆ ಕುರಿತು ದೆಹಲಿ ವರಿಷ್ಠರ ಜೊತೆ ಮಾತುಕತೆ ನಡೆಸಿದ್ದು,ಆದರೆ ಇದೀಗ ದೆಹಲಿಗೆ ಬರುವಂತೆ ಹೈಕಮಾಂಡ್ ರಾಜ್ಯ ಬಿಜೆಪಿ ನಾಯಕರಿಗೆ ಬುಲಾವ್ ನೀಡಿದೆ.

ಇಂದು ಸಂಜೆ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರ ಜೊತೆಗೆ ಚರ್ಚೆ ನಡೆಸಲಿದೆ. ಇನ್ನೊಂದು ಸುತ್ತಿನ ಮಾತುಕತೆಯ ಬಳಿಕ ಪಕ್ಷದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯ ನಂತರ ಬಿಜೆಪಿ ಹೈಕಮಾಂಡ್ ಕರ್ನಾಟಕಕ್ಕೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ ಪ್ರಕಟಿಸುವ ಸಾಧ್ಯತೆಯಿದೆ.
ರಾಜ್ಯ ನಾಯಕರ ಜೊತೆಗೆ ರಾಜ್ಯದಲ್ಲಿ ಹಾಲಿ ಸಂಸದರ ಕೆಲಸ ಕಾರ್ಯಗಳು, ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರಿಂದ ಆಗುವ ಅನುಕೂಲ, ಅನಾನುಕೂಲಗಳು, ಅವರ ಬಲಾಬಲ, ಸ್ಥಳೀಯ ನಾಯಕರ ಬೆಂಬಲ ಸೇರಿದಂತೆ ಹಲವು ವಿಚಾರಗಳನ್ನ ಚರ್ಚಿಸಿ, ನಂತರ ಅಭ್ಯರ್ಥಿಯನ್ನ ಪೈನಲ್ ಮಾಡಲಿದೆ. ಇತ್ತ ಹಾಲಿ ಸಂಸದರ ಪೈಕಿ 10 ಕ್ಕೂ ಹೆಚ್ಚು ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಲಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಉತ್ತರ, ಬೀದರ್, ಬೆಳಗಾವಿ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಸಂಸದರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡದಿರಲು ಮುಂದಾಗಿದೆ. ಜೆಡಿಎಸ್ ಜೊತೆಗಿನ ಮೈತ್ರಿಯಲ್ಲಿ ಮಂಡ್ಯ ಮತ್ತು ಕೋಲಾರದಂತಹ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಬಿಜೆಪಿಗೆ ಸವಾಲಾಗಿದ್ದು, ಹಾಸನದಿಂದ ಪ್ರಜ್ವಲ್ ರೇವಣ್ಣ ಕಣಕ್ಕಿಳಿಯುವುದು ಫಿಕ್ಸ್ ಆಗಿದೆ.
ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ!
ಬೆಳಗಾವಿ - ಜಗದೀಶ್ ಶೆಟ್ಟರ್
ಚಿಕ್ಕೋಡಿ - ಅಣ್ಣಾ ಸಾಹೇಬ್ ಜೊಲ್ಲೆ
ಬೀದರ್ - ಭಗವಂತ್ ಖೂಬಾ
ಕಲಬುರಗಿ - ಉಮೇಶ್ ಜಾಧವ್
ವಿಜಯಪುರ - ರಮೇಶ್ ಜಿಗಜಿಣಗಿ
ಬಾಗಲಕೋಟೆ - ಪಿಸಿ ಗದ್ದಿಗೌಡರ್
ರಾಯಚೂರು - ರಾಜಾ ಅಮರೇಶ್ವರ್ ನಾಯಕ / ಬಿವಿ ನಾಯಕ
ಕೊಪ್ಪಳ - ಸಂಗಣ್ಣ ಕರಡಿ / ಡಾ ಬಸವರಾಜ್ ಕ್ಯಾವಟರ್
ಧಾರವಾಡ - ಪ್ರಹ್ಲಾದ್ ಜೋಶಿ
ಹಾವೇರಿ - ಬಿಸಿ ಪಾಟೀಲ್ / ಕೆಇ ಕಾಂತೇಶ್
ಬಳ್ಳಾರಿ - ಬಿ ಶ್ರೀರಾಮುಲು
ದಕ್ಷಿಣ ಕನ್ನಡ - ನಳಿನ್ ಕುಮಾರ್ ಕಟೀಲ್ / ನಿರ್ಮಲಾ ಸೀತಾರಾಮನ್
ಉತ್ತರ ಕನ್ನಡ - ಅನಂತ ಕುಮಾರ್ ಹೆಗ್ಡೆ, ವಿಶ್ವೇಶ್ವರ ಹೆಗಡೆ ಕಾಗೇರಿ
ಉಡುಪಿ - ಚಿಕ್ಕಮಗಳೂರು - ಶೋಭಾ ಕರಂದ್ಲಾಜೆ
ಶಿವಮೊಗ್ಗ - ಬಿವೈ ರಾಘವೇಂದ್ರ
ಚಿತ್ರದುರ್ಗ - ಎ ನಾರಾಯಣಸ್ವಾಮಿ
ದಾವಣಗೆರೆ - ಜಿಎಂ ಸಿದ್ದೇಶ್ವರ್
ತುಮಕೂರು - ವಿ ಸೋಮಣ್ಣ
ಬೆಂಗಳೂರು ಉತ್ತರ - ನಿರ್ಮಲಾ ಸೀತಾರಾಮನ್
ಬೆಂಗಳೂರು ದಕ್ಷಿಣ - ತೇಜಸ್ವಿ ಸೂರ್ಯ
ಬೆಂಗಳೂರು ಸೆಂಟ್ರಲ್ - ಜೈಶಂಕರ್ / ಪಿಸಿ ಮೋಹನ್
ಬೆಂಗಳೂರು ಗ್ರಾಮಾಂತರ - ಡಾ ಸಿಎನ್ ಮಂಜುನಾಥ್
ಚಿಕ್ಕಬಳ್ಳಾಪುರ - ಡಾ ಕೆ ಸುಧಾಕರ್ / ಅಲೋಕ್ ವಿಶ್ವನಾಥ್
ಮೈಸೂರು - ಪ್ರತಾಪ್ ಸಿಂಹ / ಸಾರಾ ಮಹೇಶ್
ಚಾಮರಾಜನಗರ - ಡಾ ಮೋಹನ್ ಕುಮಾರ್ / ಎಸ್ ಬಾಲರಾಜ್












Click it and Unblock the Notifications