ಕರ್ನಾಟಕದಲ್ಲಿ ಬಿಜೆಪಿ 19 , ಕಾಂಗ್ರೆಸ್ 6 , ಜೆಡಿಎಸ್ ಮೂರು ಕ್ಷೇತ್ರದಲ್ಲಿ ಗೆಲುವು? ಇಲ್ಲಿದೆ ಪಟ್ಟಿ
ಬೆಂಗಳೂರು, ಜೂನ್ 04: ಕ್ಷಣ ಕ್ಷಣಕ್ಕೂ ಲೋಕಸಭಾ ಚುನಾವಣಾ ಫಲಿತಾಂಶ ತೀವ್ರ ಕುತೂಹಲ ಮೂಡಿಸುತ್ತಿದೆ. ಎಕ್ಸಿಟ್ ಪೋಲ್‌ಗಳು ನುಡಿದ ಭವಿಷ್ಯ ಮತ್ತೆ ನಿಜವಾಗುವ ಸಾಧ್ಯತೆ ಹೆಚ್ಚಾಗಿದ್ದು, ಕರ್ನಾಟಕದಲ್ಲಿ ಬಿಜೆಪಿ ಮೈತ್ರಿ ಹೆಚ್ಚು ಸ್ಥಾನ ಗೆಲ್ಲುವುದು ನಿಶ್ಚಿತವಾಗಿದೆ.
ಲೋಕಸಭಾ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆಯನ್ನ ಎದುರಿಸಿದರು ಸಹ ಬಿಜೆಪಿ ತನ್ನ ಕ್ಲೀನ್ ಸ್ವೀಪ್ ಗುರಿಯನ್ನು ತಲುಪುವುದಿಲ್ಲ ಎಂದು ಹಲವು ಸಮೀಕ್ಷೆಗಳು ತಿಳಿಸಿತ್ತು. ಈಗಾಗಲೇ ಚುಣಾವಣಾ ಫಲಿತಾಂಶ ನಡೆಯುತ್ತಿದ್ದು, ಬಹುತೇಕ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದು, ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಫೈಕಿ ಬಿಜೆಪಿ 19 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಕಾಂಗ್ರೆಸ್ ಆರು ಹಾಗೂ ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ.

ಬಿಜೆಪಿ ಗೆಲ್ಲುವ ಕ್ಷೇತ್ರಗಳು ಇಲ್ಲಿವೆ
* ಬೆಳಗಾವಿ - ಜಗದೀಶ್ ಶೆಟ್ಟರ್ - ಬಿಜೆಪಿ
* ಬಾಗಲಕೋಟೆ - ಪಿಸಿ ಗದ್ದಿಗೌಡರ್ - ಬಿಜೆಪಿ
* ವಿಜಯಪುರ - ರಮೇಶ್ ಜಿಗಜಿಣಗಿ - ಬಿಜೆಪಿ
* ಕಲಬುರಗಿ - ರಾಧಾಕೃಷ್ಣ ದೊಡ್ಮನಿ - ಕಾಂಗ್ರೆಸ್
* ರಾಯಚೂರು - ರಾಜಾ ಅಮರೇಶ್ವರ ನಾಯಕ - ಬಿಜೆಪಿ
* ಹಾವೇರಿ - ಬಸವರಾಜ ಬೊಮ್ಮಾಯಿ - ಬಿಜೆಪಿ
* ಧಾರವಾಡ - ಪ್ರಹ್ಲಾದ್ ಜೋಶಿ - ಬಿಜೆಪಿ
* ಉತ್ತರ ಕನ್ನಡ - ವಿಶ್ವೇಶ್ವರ ಹೆಗಡೆ ಕಾಗೇರಿ - ಬಿಜೆಪಿ
* ಶಿವಮೊಗ್ಗ - ಬಿವೈ ರಾಘವೇಂದ್ರ - ಬಿಜೆಪಿ
* ದಕ್ಷಿಣ ಕನ್ನಡ - ಬ್ರಿಜೇಶ್ ಚೌಟಾ - ಬಿಜೆಪಿ
* ಉಡುಪಿ - ಚಿಕ್ಕಮಗಳೂರು - ಕೋಟಾ ಶ್ರೀನಿವಾಸ ಪೂಜಾರಿ - ಬಿಜೆಪಿ
* ಚಿತ್ರದುರ್ಗ - ಬಿಎನ್ ಚಂದ್ರಪ್ಪ - ಕಾಂಗ್ರೆಸ್
* ತುಮಕೂರು - ಮುದ್ದಹನುಮೇಗೌಡ - ಕಾಂಗ್ರೆಸ್
* ಮೈಸೂರು - ಯದುವೀರ್ ಒಡೆಯರ್ - ಬಿಜೆಪಿ
* ಬೆಂಗಳೂರು ಗ್ರಾಮಾಂತರ - ಡಿಕೆ ಸುರೇಶ್ - ಕಾಂಗ್ರೆಸ್
* ಬೆಂಗಳೂರು ಉತ್ತರ - ಶೋಭಾ ಕರಂದ್ಲಾಜೆ - ಬಿಜೆಪಿ
* ಬೆಂಗಳೂರು ಸೆಂಟ್ರಲ್ - ಪಿಸಿ ಮೋಹನ್ - ಬಿಜೆಪಿ
* ಬೆಂಗಳೂರು ದಕ್ಷಿಣ - ತೇಜಸ್ವಿ ಸೂರ್ಯ - ಬಿಜೆಪಿ
* ಚಿಕ್ಕಬಳ್ಳಾಪುರ - ಡಾ ಕೆ ಸುಧಾಕರ್ - ಬಿಜೆಪಿ
ಕಾಂಗ್ರೆಸ್ ಗೆಲ್ಲುವ ಕ್ಷೇತ್ರಗಳು
* ಚಾಮರಾಜನಗರ - ಸುನೀಲ್ ಬೋಸ್ - ಕಾಂಗ್ರೆಸ್
* ಬೀದರ್ - ಸಾಗರ್ ಖಂಡ್ರೆ - ಕಾಂಗ್ರೆಸ್
*ಚಿಕ್ಕೋಡಿ - ಪ್ರಿಯಾಂಕ್ ಜಾರಕಿಹೊಳಿ- ಕಾಂಗ್ರೆಸ್
* ಕೊಪ್ಪಳ - ರಾಜಶೇಖರ್ ಹಿಟ್ನಾಳ್- ಕಾಂಗ್ರೆಸ್
* ದಾವಣಗೆರೆ - ಪ್ರಭಾ ಮಲ್ಲಿಕಾರ್ಜುನ್- ಕಾಂಗ್ರೆಸ್
* ಬಳ್ಳಾರಿ - ಇ ತುಖಾರಂ - ಕಾಂಗ್ರೆಸ್
ಮೂರು ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು
* ಕೋಲಾರ - ಮಲ್ಲೇಶ್ ಬಾಬು - ಜೆಡಿಎಸ್
* ಮಂಡ್ಯ - ಎಚ್‌ಡಿ ಕುಮಾರಸ್ವಾಮಿ - ಜೆಡಿಎಸ್
* ಹಾಸನ - ಪ್ರಜ್ವಲ್ ರೇವಣ್ಣ - ಜೆಡಿಎಸ್












Click it and Unblock the Notifications