Lok Sabha Election 2024: ಧಾರವಾಡದಲ್ಲಿ ಶೇ.74ರಷ್ಟು ಮತದಾನ ಪ್ರಮಾಣ, ಜಾತಿ ಲೆಕ್ಕಚಾರದಲ್ಲಿ ಯಾರಿಗಿದೆ ಅಧಿಕಾರ ಅದೃಷ್ಟ?

ಹುಬ್ಬಳ್ಳಿ , ಮೇ 11: ಧಾರವಾಡ ಲೋಕಸಭೆ ಕ್ಷೇತ್ರಕ್ಕೆ ಮತದಾನ ಪ್ರಕ್ರಿಯೆ ಮೇ 7 ರಂದು ಮುಗಿದ ನಂತರ ಈಗ ವಿಧಾನಸಭೆ ಕ್ಷೇತ್ರವಾರು ಆದ ಮತದಾನದ ಪ್ರಮಾಣ ಮುಂದಿಟ್ಟುಕೊಂಡು ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ.

ಧಾರವಾಡ ಕ್ಷೇತ್ರದ 1,901 ಮತಗಟ್ಟೆಗಳಲ್ಲಿ ಶೇ. 74.37 ಮತದಾನವಾಗಿದೆ. 18,31,975 ಮತದಾನ ಪೈಕಿ 6,99,244 &, 6,63,151 ಮಹಿಳೆಯರು, 26 ಇತರರು ಸೇರಿ 13,62,421 ಜನ ಹಕ್ಕು ಚಲಾಯಿಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಯ ಪ್ರಹ್ಲಾದ್ ಜೋಶಿ, ಕಾಂಗ್ರೆಸ್‌ನ ವಿನೋದ ಅಸೂಟಿ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿತ್ತು‌. ಇತರ ರಾಜಕೀಯ, ಪ್ರಾದೇಶಿಕ ಪಕ್ಷಗಳು ಮತ್ತು ಪಕ್ಷೇತರರು ಸೇರಿ 18 ಜನ ಕಣದಲ್ಲಿದ್ದರು. ಬಿರು ಬೇಸಿಗೆಯಲ್ಲಿ ನಡೆದ ಚುನಾವಣೆಯಲ್ಲಿಯೂ ಮತದಾರರು ಅಭ್ಯರ್ಥಿಗಳ ಹಣೆ ಬರಹ ಬರೆದಿದ್ದಾರೆ.

Lok Sabha Poll Who Has Power And Luck In Cost Accounting In Dharwad

ಎರಡು ಚುನಾವಣೆಗೆ ಹೋಲಿಸಿದಾಗ ಮತದಾನ ಪ್ರಮಾಣವೂ ಹೆಚ್ಚಾಗಿದೆ. ಬಿಜೆಪಿ ಭದ್ರಕೋಟೆಯಾಗಿರುವ ಧಾರವಾಡ ಕ್ಷೇತ್ರವನ್ನು ಬಿಜೆಪಿಯ ಪ್ರತಿನಿಧಿಸಿದ್ದಾರೆ. ಸತತ 4 ಬಾರಿ ಗೆದ್ದು ಕೇಂದ್ರ ಸಚಿವರೂ ಆಗಿರುವ ಅವರೆದುರು ಕಾಂಗ್ರೆಸ್‌ ಯುವ ನಾಯಕ ವಿನೋದ ಅಸೂಟಿ ಸ್ಪರ್ಧಿಸಿದ್ದಾರೆ. ಇಬ್ಬರೂ ಅಭ್ಯರ್ಥಿಗಳ ಪರ ನಾಯಕರು ಬಿರುಸಿನ ಪ್ರಚಾರ ನಡೆಸಿದ್ದರು. ಮತದಾನದ ನಂತರ ಎರಡೂ ಪಕ್ಷಗಳ ಪಾಳೆಯದಲ್ಲಿ ಗೆಲುವು ನಮ್ಮದೇ ಎಂಬ ನಿರೀಕ್ಷೆ ಇದ್ದಾರೆ.

10 ವರ್ಷಗಳ ಮತದಾನ ವಿವರ

ವರ್ಷ ಶೇಕಡ

* 2024 74.37

* 2019. 70.12

* 2014 65.98

ಧಾರವಾಡ ಜಿಲ್ಲೆಯ ನವಲಗುಂದ, ಕುಂದಗೋಳ, ಧಾರವಾಡ, ಹು- ಧಾ ಪೂರ್ವ, ಹು-ಧಾ ಪಶ್ಚಿಮ, ಹು-ಧಾ ಸೆಂಟ್ರಲ್, ಕಲಘಟಗಿ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರಗಳು ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿವೆ. 8 ಕ್ಷೇತ್ರಗಳಲ್ಲಿ ತಲಾ 4 ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರಿದ್ದಾರೆ. ಶೇ. 67.09 ಮತದಾನವಾಗಿರುವ ಪಶ್ಚಿಮ ಕ್ಷೇತ್ರ ಪ್ರತಿನಿಧಿಸುವ ಶಾಸಕ ಅರವಿಂದ ಬೆಲ್ಲದ, ಜೋಶಿಅವರಿಗೆ 3 ಲಕ್ಷಕ್ಕೂ ಅಧಿಕ ಲೀಡ್ ಪಕ್ಕಾ ಎನ್ನಲಾಗಿದೆ.

ಮಹೇಶ್ ಟೆಂಗಿನಕಾಯಿ ಸಹ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಹೆಚ್ಚಿನ ಮತ ಬಿಜೆಪಿಗೆ ಬರಲಿದ್ದು. ತಾವು 35 ಸಾವಿರ ಮತಗಳ ಅಂತರದಿಂದ ಗೆದ್ದಿದ್ದು, ಇದಕ್ಕೂ ಹೆಚ್ಚು ಅಂತರ ತಮ್ಮ ಕ್ಷೇತ್ರದಿಂದ ಜೋಶಿ ಅವರಿಗೆ ಕೊಡಲಾಗಿದೆ ಎನ್ನಲಾಗಿದೆ. ಎಂ.ಆರ್. ಪಾಟೀಲ ಶಾಸಕರಾಗಿರುವ ಕುಂದಗೋಳದಲ್ಲಿ ಶೇ. 80.22 ಮತದಾನವಾಗಿದ್ದು, ಬಿಜೆಪಿಗೇ ಲೀಡ್ ಬರಲಿದೆ ಎನ್ನಲಾಗಿದೆ.

ವಿಧಾನಸಭೆ ಚುನಾವಣೆಗೂ ಮೊದಲು 5 ಗ್ಯಾರಂಟಿಗಳನ್ನು ಘೋಷಿಸಿದ್ದ ಕಾಂಗ್ರೆಸ್, ನಂತರ ಅನುಷ್ಠಾನ ಕೂಡ ಮಾಡಿದೆ. ಹೀಗಾಗಿ ಗ್ಯಾರಂಟಿ ಯೋಜನೆಗಳು 'ಕೈ' ಹಿಡಿಯಲಿವೆ ಎಂಬುದು ಕಾಂಗ್ರೆಸ್ಸಿಗರ ಲೆಕ್ಕಾಚಾರ. ಉಚಿತ ಬಸ್ ಪ್ರಯಾಣ, ವಿದ್ಯುತ್, ಪಡಿತರ ಮತ್ತು ಹೆಚ್ಚುವರಿ ಹಣ, ಗೃಹಲಕ್ಷ್ಮಿ ಅಡಿ ತಿಂಗಳಿಗೆ 2,000 ರೂ. ಹಾಗೂ ಯುವನಿಧಿ ಕಾರ್ಯಕ್ರಮಗಳನ್ನು ಜನ ಮೆಚ್ಚಿದ್ದಾರೆ. ಹೀಗಾಗಿ ತಮ್ಮ ಪರ ಫಲಿತಾಂಶ ಬರಲಿದೆ ಎಂಬುದು ಕಾಂಗ್ರೆಸ್ ನಿರೀಕ್ಷೆ ಎನ್ನುತ್ತಾರೆ ಕಾಂಗ್ರೆಸ್ ಹಿಂಬಾಲಕರದ್ದಾಗಿದೆ.

ಇನ್ನು ತಮ್ಮ ಕ್ಷೇತ್ರದಲ್ಲಿ 35,000 ಮತಗಳ ಲೀಡ್ ಖಚಿತ ಎಂದು ಮಾಜಿ ಶಾಸಕ ಅಮೃತ ದೇಸಾಯಿ ಘೋಷಿಸಿದ್ದಾರೆ. ಶೇ. 82.27 ಮತದಾನವಾಗಿರುವ ಕಲಘಟಗಿ ಉಸ್ತುವಾರಿ ಸಚಿವ ಸಂತೋಷ ಲಾಡ್ ಪ್ರತಿನಿಧಿಸುವ ಕ್ಷೇತ್ರ. ಮತದಾನ ಪ್ರಮಾಣ ಹೆಚ್ಚಳವಾಗಿರುವುದು ಕಾಂಗ್ರೆಸ್‌ಗೆ ವರದಾನವಾಗಬಹುದು. ಆದರೆ, ಜೋಶಿಗೆ ಅಪ್ತ ಆಗಿರುವ ನಾಗರಾಜ ಛಬ್ಬಿ ಕಾಲಿಗೆ ಚಕ್ರ ಕಟ್ಟಿಕೊಂಡ ರೀತಿಯಲ್ಲಿ ಪ್ರಚಾರ ಮಾಡಿದ್ದರು.

ಮೋದಿಯೇ ಗ್ಯಾರಂಟಿ ಬೆಲೆ ಏರಿಸಿ ಜನರಿಂದ ಹಣ ಕಿತ್ತುಕೊಂಡುಗ್ಯಾರಂಟಿ ಯೋಜನೆಗಳಿಗೆ ಸುರಿಯಲಾಗಿದೆ ಎಂದು ಬಿಜೆಪಿ ಪ್ರಚಾರ ಸಂದರ್ಭದಲ್ಲಿ ಮತದಾರರಿಗೆ ಮನದಟ್ಟು ಮಾಡಲು ಯತ್ನಿಸಿದೆ. ಗ್ಯಾರಂಟಿ ಯೋಜನೆಗಳಿಗೆ ಮರುಳಾಗಲಾರರು. ರಾಷ್ಟ್ರ ಹಿತ, ಸುಭದ್ರ ಆರ್ಥಿಕ ವ್ಯವಸ್ಥೆಗಾಗಿ ನರೇಂದ್ರ ಮೋದಿಯೇ 'ಗ್ಯಾರಂಟಿ' ಎಂಬುದು ಕಮಲ ಪಡೆಯ ನಂಬಿಕೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಜನ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ.

ವಿನೋದ ಅಸೂಟಿ ನವಲಗುಂದ ಕ್ಷೇತ್ರದವರು, ಹೀಗಾಗಿ ಈ ಕ್ಷೇತ್ರದಲ್ಲಿ ಹೆಚ್ಚಿನ ಲೀಡ್ ಸಿಗಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಶಾಸಕ ಎನ್.ಎಚ್. ಕೋನರೆಡ್ಡಿ ಸಹ ಬೆನ್ನಿಗೆ ನಿಂತು ಪ್ರಚಾರ ಮಾಡಿದ್ದಾರೆ.ಹು-ಧಾ ಪೂರ್ವದಲ್ಲಿ ಅಲ್ಪಸಂಖ್ಯಾತರು ಹೆಚ್ಚಿದ್ದು 25 ಸಾವಿರಕ್ಕೂ ಹೆಚ್ಚು ಮತಗಳು ಅಸೂಟಿ ಪರವಾಗಿ ಬರಲಿದೆ ಎನ್ನುವ ವಿಶ್ವಾಸ ಶಾಸಕ ಪ್ರಸಾದ ಅಬ್ಬಯ್ಯ ಅವರದ್ದು. ಆಯಾ ಪಕ್ಷದ ಮುಖಂಡರು ತಮ್ಮ ತಮ್ಮ ಪಕ್ಷದ ಪರವಾಗಿಯೇ ಲೆಕ್ಕ ಹೇಳುತ್ತಿದ್ದಾರೆ. ಆದರೆ, ಅಸಲಿ ಭವಿಷ್ಯ ಮಾತ್ರ ಮತದಾರ ಬರೆದಿದ್ದಾನೆ. ಜೂ. 4ರಂದು ಪಕ್ಕಾ ಲೆಕ್ಕ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+