ಮಂಡ್ಯ ಲೋಕಸಭಾ ಚುನಾವಣಾ ಫಲಿತಾಂಶ ಬರುವ ಮುನ್ನವೇ ಗೆದ್ರಾ ಕುಮಾರಸ್ವಾಮಿ?

ಮಂಡ್ಯ, ಏಪ್ರಿಲ್‌ 26: ದೇಶಾದ್ಯಂತ ಲೋಕಸಭೆ ಚುನಾವಣೆಗೆ 7 ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಇಂದು ಎರಡನೇ ಹಂತದ ಮತದಾನ ನಡೆಯುತ್ತಿದೆ. ಕರ್ನಾಟಕ ಸೇರಿದಂತೆ 13 ರಾಜ್ಯಗಳಲ್ಲಿ ಒಟ್ಟು 88 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ಚುನಾವಣಾ ಫಲಿತಾಂಶಕ್ಕೂ ಮುನ್ನ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಚ್‌ ಡಿ ಕುಮಾರಸ್ವಾಮಿ ಅವರು ಜನ ನನ್ನದು ಎಂದು ಹೇಳಿದ್ದಾರೆ.

ಈ ಕುರಿತು ಶುಕ್ರವಾರ ಮಂಡ್ಯದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಕುಮಾರಸ್ವಾಮಿ,ಈ ಜಯ ನನ್ನದಲ್ಲಾ ಜಿಲ್ಲೆಯ ಎಲ್ಲಾ ಜನರದ್ದು. ನನ್ನ ಪರವಾಗಿ ಮಂಡ್ಯ ಜಿಲ್ಲೆ ಎಲ್ಲಾ ಜನ ಚುನಾವಣೆ ನಡೆಸಿದ್ದಾರೆ.

Lok Sabha Poll I Will Win With Majority In Mandya Says HD Kumaraswamy

ಈ ಜಯ ನನ್ನದಲ್ಲಾ ಇದು ಎಲ್ಲರ ಜಯ. ಮಂಡ್ಯ ಜಿಲ್ಲೆಯ ಎಲ್ಲಾ ಪಕ್ಷದಲ್ಲಿರುವ ನನ್ನ ಅಭಿಮಾನಿಗಳ ಜಯ ಎಂದು ಕುಮಾರಸ್ವಾಮಿ ಫಲಿತಾಂಶಕ್ಕೂ ಮುನ್ನವೇ ಚುನಾವಣಾ ಗೆಲುವಿನ ಕುರಿತು ಮಾತನಾಡಿದ್ದಾರೆ.

ಸುಮಲತಾ ಮಂಡ್ಯದಲ್ಲಿ ಕುಮಾರಸ್ವಾಮಿ ಗೆ ಸಪೋರ್ಟ್ ಮಾಡಿಲ್ಲ ಎಂದು ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡರ ಹೇಳಿಕೆ ವಿಚಾರವಾಗಿ ಮಾತನಾಡಿ, ದೇವೇಗೌಡರು ಆ ರೀತಿ ಯಾಕೆ ಹೇಳಿದ್ದಾರೆ ಅಂತ ನನಗೆ ಗೊತ್ತಿಲ್ಲ.

ಸುಮಲತಾ ಅವರ ಪ್ರಶ್ನೆ ಇಲ್ಲಿ ಬರಲ್ಲ, ದೇವೇಗೌಡರು ಯಾಕೆ ಹಾಗೆ ಹೇಳಿದ್ದಾರೆ ಗೊತ್ತಿಲ್ಲ. ದೇವೇಗೌಡರಿಗೆ ಮಾಹಿತಿ ಕೊರತೆ ಆಗಿರಬೇಕು ಅನಿಸುತ್ತದೆ. ಪಕ್ಷ ಭೇದ ಮರೆತು ಕಾಂಗ್ರೆಸ್, ಬಿಜೆಪಿಯವ್ರು ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ಯಾರು ವಿರೋಧ ಮಾಡಿಲ್ಲ ಎಲ್ಲರೂ ನನಗೆ ಸಹಾಯ ಮಾಡಿದ್ದಾರೆ ಎಂದು ಹೇಳಿದರು.

ಕುಮಾರಸ್ವಾಮಿ ಪರ ಪ್ರಚಾರಕ್ಕೆ ಯಾರು ನನ್ನ ಕರೆಯಲಿಲ್ಲ ಎಂಬ ಸುಮಲತಾ ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ಅವರ ಮನೆ ಬಾಗಿಲಿಗೆ ಹೋಗಿ ಸಹಕಾರ ಕೇಳಿದ್ದೇನೆ. ಇದಕ್ಕಿಂತ ಇನ್ನೇನು ಮಾಡಬೇಕು ನಾನು.

ಅಂಬರೀಶ್ ಅಭಿಮಾನಿಗಳು ಸಹ ನನಗೆ ಸಹಾಯ ಮಾಡಿದ್ದಾರೆ. ನಾನು ಮೈಸೂರಿನ ಮೋದಿ ಕಾರ್ಯಕ್ರಮದಲ್ಲೂ ಕೂಡ ಸುಮಲತಾ ಅವರನ್ನಎರಡು ದಿನ ಪ್ರಚಾರಕ್ಕೆ ಬರುವಂತೆ ಕೋರಿದ್ದೆ. ಗೊಂದಲದ ಪ್ರಚಾರ ಮಾಡೋದು ಬೇಡ. ಬೆಂಗಳೂರಿನಿಂದ ಬಂದು ಸುಮಲತಾ ನನಗೆ ಓಟ್ ಮಾಡಿದ್ದಾರೆ, ಪಕ್ಷ ಭೇದ ಮರೆತು ಕೆಲಸ ಮಾಡಿದ್ದಾರೆ ರಾಜ್ಯದಲ್ಲೆ ಅತ್ಯಂತ ಬಹುಮತಗಳಿಂದ ಗೆಲ್ಲಲಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+