ಲೋಕಸಭೆ ಚುನಾವಣೆ : ಕರ್ನಾಟಕ ಬಿಜೆಪಿಯಿಂದ ಪ್ರಭಾರಿಗಳ ನೇಮಕ
ಬೆಂಗಳೂರು, ನವೆಂಬರ್ 21 : ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಕರ್ನಾಟಕ ಬಿಜೆಪಿ 28 ಲೋಕಸಭಾ ಕ್ಷೇತ್ರಗಳಿಗೆ ಪ್ರಭಾರಿಗಳನ್ನು ನೇಮಕ ಮಾಡಿದೆ. 20+ ಕ್ಷೇತ್ರಗಳಲ್ಲಿ ಜಯಗಳಿಸುವ ಗುರಿಯನ್ನು ಪಕ್ಷ ಹೊಂದಿದೆ.
ಬುಧವಾರ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು 28 ಕ್ಷೇತ್ರಗಳಿಗೆ ಪ್ರಭಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದರು. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಪ್ರಭಾರಿಗಳನ್ನು ಆಯ್ಕೆ ಮಾಡಲಾಗಿದೆ.
ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ, ಸಿ.ಎಂ.ಉದಾಸಿ, ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಹಲವು ನಾಯಕರನ್ನು ಯಾವ ಕ್ಷೇತ್ರಕ್ಕೂ ಪ್ರಭಾರಿಗಳನ್ನಾಗಿ ನೇಮಕ ಮಾಡಿಲ್ಲ.
ಪ್ರಭಾರಿಗಳು ತಮ್ಮ ವ್ಯಾಪ್ತಿಯ ಲೋಕಸಭಾ ಕ್ಷೇತ್ರದಲ್ಲಿನ ಸ್ಥಿತಿ-ಗತಿ, ಟಿಕೆಟ್ ಅಕಾಂಕ್ಷಿಗಳು, ಅಭ್ಯರ್ಥಿಗೆ ಇರುವ ಜನ ಬೆಂಬಲ, ಕ್ಷೇತ್ರದಲ್ಲಿನ ಜನಾಭಿಪ್ರಾಯ ಮುಂತಾದ ಮಾಹಿತಿಗಳನ್ನು ಸಂಗ್ರಹಿಸಿ ವರದಿ ನೀಡಲಿದ್ದಾರೆ. ಯಾವ ಕ್ಷೇತ್ರಕ್ಕೆ ಯಾರು ಪ್ರಭಾರಿಗಳು ಚಿತ್ರಗಳಲ್ಲಿ ನೋಡಿ.....

ಕೆ.ಎಸ್.ಈಶ್ವರಪ್ಪ
* ಮೈಸೂರು-ಕೊಡಗು - ಕೆ.ಎಸ್.ಈಶ್ವರಪ್ಪ
* ಚಾಮರಾಜನಗರ - ಎಲ್.ನಾಗೇಂದ್ರ
* ಮಂಡ್ಯ - ಇ.ಅಶ್ವತ್ಥ ನಾರಾಯಣ್
* ಹಾಸನ - ಸಿ.ಟಿ.ರವಿ
* ದಕ್ಷಿಣ ಕನ್ನಡ - ಸುನೀಲ್ ಕುಮಾರ್
* ಉಡುಪಿ-ಚಿಕ್ಕಮಗಳೂರು - ಆರಗ ಜ್ಞಾನೇಂದ್ರ
* ಶಿವಮೊಗ್ಗ - ವಿಶ್ವೇಶ್ವರ ಹೆಗಡೆ ಕಾಗೇರಿ

ಗೋವಿಂದ ಕಾರಜೋಳ
* ಉತ್ತರ ಕನ್ನಡ -ಲಿಂಗರಾಜ ಪಾಟೀಲ್
* ಹಾವೇರಿ - ಬಸವರಾಜ ಬೊಮ್ಮಾಯಿ
* ಧಾರವಾಡ - ಗೋವಿಂದ ಕಾರಜೋಳ
* ಬೆಳಗಾವಿ - ಮಹಾಂತೇಶ ಕವಟಗಿಮಠ್
* ಚಿಕ್ಕೋಡಿ - ಸಂಜಯ್ ಪಾಟೀಲ್
* ಬಾಗಲಕೋಟೆ - ಸಿ.ಸಿ.ಪಾಟೀಲ್
* ವಿಜಯಪುರ - ಲಕ್ಷ್ಮಣ ಸವದಿ
* ಬೀದರ್ - ಅಮರನಾಥ ಪಾಟೀಲ್

ಬಳ್ಳಾರಿ ಉಸ್ತುವಾರಿ ಶೆಟ್ಟರ್
* ಕಲಬುರಗಿ - ಎನ್.ರವಿಕುಮಾರ್
* ರಾಯಚೂರು - ಹಾಲಪ್ಪ ಆಚಾರ್
* ಕೊಪ್ಪಳ - ಬಿ.ಶ್ರೀರಾಮುಲು
* ಬಳ್ಳಾರಿ -ಜಗದೀಶ್ ಶೆಟ್ಟರ್
* ದಾವಣಗೆರೆ - ಆಯನೂರು ಮಂಜುನಾಥ್
* ಚಿತ್ರದುರ್ಗ - ವೈ.ಎ.ನಾರಾಯಣಸ್ವಾಮಿ
* ತುಮಕೂರು - ಅರವಿಂದ ಲಿಂಬಾವಳಿ

ವಿ.ಸೋಮಣ್ಣ ಚಿಕ್ಕಬಳ್ಳಾಪುರಕ್ಕೆ
* ಬೆಂಗಳೂರು ಗ್ರಾಮಾಂತರ - ಅಶ್ವತ್ಥ ನಾರಾಯಣ್
* ಚಿಕ್ಕಬಳ್ಳಾಪುರ - ವಿ.ಸೋಮಣ್ಣ
* ಕೋಲಾರ - ಕಟ್ಟಾ ಸುಬ್ರಮಣ್ಯ ನಾಯ್ಡು
* ಬೆಂಗಳೂರು ದಕ್ಷಿಣ - ಸುಬ್ಬನರಸಿಂಹ
* ಬೆಂಗಳೂರು ಕೇಂದ್ರ - ಡಾ.ಅಶ್ವತ್ಥ ನಾರಾಯಣ್
* ಬೆಂಗಳೂರು ಉತ್ತರ - ಬಿ.ಎಚ್.ಕೃಷ್ಣಾ ರೆಡ್ಡಿ












Click it and Unblock the Notifications