ಲೋಕಸಭಾ ಚುನಾವಣೆ: 14 ಕ್ಷೇತ್ರದಿಂದ ನಾಮಪತ್ರ ಅರ್ಹವಾಗಿದ್ದೆಷ್ಟು?, ಹಿಂದಪಡೆದವರೆಷ್ಟು, ಮಹಿಳೆ-ಪುರುಷರೆಷ್ಟು? ವಿವರ
ಬೆಂಗಳೂರು, ಏಪ್ರಿಲ್ 09: ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ಒಟ್ಟು 14 ಕ್ಷೇತ್ರಗಳಿಗೆ ಸಲ್ಲಿಕೆಯಾಗಿದ್ದ ಎಲ್ಲ ನಾಮಪತ್ರಗಳ ಪೈಕಿ 53 ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದಾರೆ. ಹತ್ತಾರು ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಸೋಮವಾರ ಏಪ್ರಿಲ್ 8 ಅರ್ಜಿ ಹಿಂಪಡೆಯಲು ಕೊನೆಯ ದಿನವಾಗಿತ್ತು. ಚುನಾವಣಾ ಅಭ್ಯರ್ಥಿಗಳು ಏಪ್ರಿಲ್ 4ರವರೆಗೆ ಎಲ್ಲ ಕ್ಷೇತ್ರದಿಂದ 358 ಅಭ್ಯರ್ಥಿಗಳು ಒಟ್ಟು 492 ನಾಮಪತ್ರ ಸಲ್ಲಿಸಿದ್ದಾರೆ. ಇದರಲ್ಲಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಇದ್ದಾರೆ.

ನಾಮಪತ್ರ ಸಲ್ಲಿಕೆ ಗಡುವು ಮುಗಿದ ನಂತರ, 74 ನಾಮಪತ್ರಗಳು ತಿರಸ್ಕೃತಗೊಂಡಿವೆ. 53 ಅಭ್ಯರ್ಥಿಗಳು ಉಮೇದುವಾರಿಕೆ ಹಿಂಪಡೆದಿದ್ದಾರೆ. ಸದ್ಯ ಕಣದಲ್ಲಿ 247 ಅಭ್ಯರ್ಥಿಗಳು ಇದ್ದು, ಭರ್ಜರಿ ಪ್ರಚಾರದ ಮೂಲಕ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.
ಚುನಾವಣಾ ಅಖಾಡದಲ್ಲಿರುವ 247 ಅಭ್ಯರ್ಥಿಗಳ ಪೈಕಿ 226 ಮಂದಿ ಎಲ್ಲ ಪಕ್ಷಗಳು ಪುರುಷ ಅಭ್ಯರ್ಥಿಗಳು 21 ಮಹಿಳಾ ಅಭ್ಯರ್ಥಿಗಳು ಪೈಪೋಟಿ ಒಡ್ಡಲಿದ್ದಾರೆ. ಇದೇ ತಿಂಗಳ 26 ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಸದ್ಯ ಉಮೇದುವಾರಿಕೆ ಸಲ್ಲಿಕೆ, ಪರಿಶೀಲನೆ, ವಾಪಸ್ ಪಡೆಯುವ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಇತ್ತ ಚುನಾವಣಾ ಮತಗಟ್ಟೆಗಳಲ್ಲಿ ಅಧಿಕಾರಿಗಳಿಗೆ ಚುನಾವಣೆ ತರಬೇತಿ ಕೊಡಲಾಗುತ್ತಿದೆ. ಮೇಲಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಹೆಚ್ಚು & ಕಡಿಮೆ ಅಭ್ಯರ್ಥಿಗಳ ಕ್ಷೇತ್ರಗಳು
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಮತ್ತು ದಕ್ಷಿಣ ಕನ್ನಡ ಕ್ಷೇತ್ರ ಸೇರಿದಂತೆ ಒಟ್ಟು ಹದಿನಾಲ್ಕು ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಅತ್ಯಧಿಕ ಅಭ್ಯರ್ಥಿಗಳು ಅಂದರೆ 29 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಉಳಿದಂತೆ ಅತೀ ಕಡಿಮೆ ಅಭ್ಯರ್ಥಿಗಳು 09 ಮಂದಿ ಇರುವುದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಕ್ಷೇತ್ರವಾರು ಅಭ್ಯರ್ಥಿಗಳ ಅಂಕಿ-ಸಂಖ್ಯೆ
ಹಾಸನ ಕ್ಷೇತ್ರ: 15 ಅಭ್ಯರ್ಥಿಗಳು
ಮೈಸೂರು ಕ್ಷೇತ್ರ: 18 ಅಭ್ಯರ್ಥಿಗಳು
ಚಿತ್ರದುರ್ಗ ಕ್ಷೇತ್ರ: 20 ಅಭ್ಯರ್ಥಿಗಳು
ತುಮಕೂರು ಕ್ಷೇತ್ರ: 18 ಅಭ್ಯರ್ಥಿಗಳು
ಬೆಂಗಳೂರು ಉತ್ತರ ಕ್ಷೇತ್ರ: 21 ಅಭ್ಯರ್ಥಿಗಳು
ಬೆಂಗಳೂರು ದಕ್ಷಿಣ ಕ್ಷೇತ್ರ: 22 ಅಭ್ಯರ್ಥಿಗಳು
ಬೆಂಗಳೂರು ಕೇಂದ್ರ ಕ್ಷೇತ್ರ: 24 ಅಭ್ಯರ್ಥಿಗಳು
ಬೆಂಗಳೂರು ಗ್ರಾಮಾಂತರ ಕ್ಷೇತ್ರ: 15 ಅಭ್ಯರ್ಥಿಗಳು
ಮಂಡ್ಯ ಕ್ಷೇತ್ರ: 14 ಅಭ್ಯರ್ಥಿಗಳು
ಕೋಲಾರ ಕ್ಷೇತ್ರ: 18 ಅಭ್ಯರ್ಥಿಗಳು
ಚಿಕ್ಕಬಳ್ಳಾಪುರ ಕ್ಷೇತ್ರ: 29 ಅಭ್ಯರ್ಥಿಗಳು
ಉಡುಪಿ-ಚಿಕ್ಕಮಗಳೂರು ಕ್ಷೇತ್ರ: 10 ಅಭ್ಯರ್ಥಿಗಳು
ಚಾಮರಾಜನಗರ ಕ್ಷೇತ್ರ: 14 ಅಭ್ಯರ್ಥಿಗಳು
ದಕ್ಷಿಣ ಕನ್ನಡ ಕ್ಷೇತ್ರ: 19 ಅಭ್ಯರ್ಥಿಗಳು












Click it and Unblock the Notifications