Karnataka Lok Sabha: 28 ಕ್ಷೇತ್ರಗಳ ಜಾತಿವಾರು ಅಭ್ಯರ್ಥಿಗಳು ಯಾರು? ಮಾಹಿತಿ ಇಲ್ಲಿದೆ
ಬೆಂಗಳೂರು, ಮಾರ್ಚ್ 29: ಕರ್ನಾಟಕದಲ್ಲಿ ಲೋಸಕಭಾ ಚುನಾವಣಾ ಕಣ ರಂಗೇರುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳು ಪ್ರಚಾರ ಆರಂಭಿಸಿವೆ. ಒಟ್ಟು ರಾಜ್ಯದ 28 ಲೋಕಸಭಾ ಸ್ಥಾನಗಳಲ್ಲಿ ಯಾವ ಪಕ್ಷಗಳು ಯಾವೆಲ್ಲ ಸಮುದಾಯಗಳ ಅಭ್ಯರ್ಥಿಗಳನ್ನು ಕಣಕ್ಕಳಿಸಿದ್ದಾರೆ, ಕ್ಷೇತ್ರಗಳು, ಸಮುದಾಯಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.
ಕರ್ನಾಟಕ ಬಿಜೆಪಿಯು ಒಟ್ಟು 28 ಲೋಕಸಭಾ ಕ್ಷೇತ್ರಗಳಲ್ಲಿ 09 ಲಿಂಗಾಯತರು, 04 ವಕ್ಕಲಿಗರು, 03 ಬ್ರಾಹ್ಮಣರು ಮತ್ತು OBC ಅಭ್ಯರ್ಥಿಗಳನ್ನು ಲೋಕಸಭೆ ಅಖಾಡಕ್ಕೆ ಇಳಿಸಿದೆ. ಅದು ಸ್ಪರ್ಧಿಸುತ್ತಿರುವ 04 ಎಸ್‌ಸಿ ಮೀಸಲು ಸ್ಥಾನಗಳ ಪೈಕಿ 01 ಬಂಜಾರ, 02 ಮಾದಿಗ ಮತ್ತು ಒಬ್ಬರು ಛಲವಾದಿ ಸಮುದಾಯದ ನಾಯಕನನ್ನು ಕಣಕ್ಕಿಳಿಸಿದೆ. ಇನ್ನೂ ಬಿಜೆಪಿ ಮೈತ್ರಿ ಪಕ್ಷವಾದ ಜೆಡಿಎಸ್ ಪಕ್ಷ ತನಗೆ ಸಿಕ್ಕ ಮೂರು ಕ್ಷೇತ್ರಗಳಲ್ಲಿ ಎರಡರಲ್ಲಿ ಒಕ್ಕಲಿಗರು ಮತ್ತು ಒಂದರಲ್ಲಿ ದಲಿತ ನಾಯಕನನ್ನು ಅಭ್ಯರ್ಥಿಯಾಗಿ ಮಾಡಿದೆ ಎಂದು 'ಡಿಎಚ್' ವರದಿ ಮಾಡಿದೆ.

ಕಾಂಗ್ರೆಸ್ ನಿಂದ ಒಕ್ಕಲಿಗರಿಗೆ ಹೆಚ್ಚು ಟಿಕೆಟ್
ಇನ್ನೂ ರಾಜ್ಯ ಆಡಳಿತ ಪಕ್ಷ ಕಾಂಗ್ರೆಸ್ ಎಲ್ಲ ಕ್ಷೇತ್ರಗಳ ಪೈಕಿ 07 ಏಳು ಒಕ್ಕಲಿಗರು, 05 ಲಿಂಗಾಯತರು ಮತ್ತು 06 ಒಬಿಸಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. 05 ಎಸ್‌ಸಿ ಮೀಸಲು ಸ್ಥಾನಗಳಲ್ಲಿ ಬಹುತೇಕ ಸ್ಥಾನಗಳು ದಲಿತರ ಛಲವಾದಿ ಪಂಗಡದಿಂದ ಭರ್ತಿಯಾಗಿವೆ. ಒಬ್ಬ ಮುಸ್ಲಿಂ ಅಭ್ಯರ್ಥಿಗೂ ಕಾಂಗ್ರೆಸ್‌ನಿಂದ ಸ್ಥಾನ ನೀಡಲಾಗಿದೆ.
ಕಾಂಗ್ರೆಸ್ ಟಿಕೆಟ್ ನೀಡಿದ 06 ಒಬಿಸಿಗಳ ಅಭ್ಯರ್ಥಿಗಳ ಪೈಕಿ ಇಬ್ಬರು ಕುರುಬ ಸುದಾಯವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿ ಕುರುಬ ಸಮುದಾಯದ ಒಬ್ಬೇ ಒಬ್ಬ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ. ಹಾವೇರಿಯಿಂದ ಕಾಂತೇಶ್ ಅವರಿಗೆ ಟಿಕೆಟ್ ನೀಡಿದ್ದರೆ ಒಬ್ಬರಿಗೆ ಕುರುಬರಿಗೂ ಟಿಕೆಟ್ ನೀಡದಂತಾಗುತ್ತಿತ್ತು.

ಸಮುದಾಯವಾರು ಬಿಜೆಪಿ ಟಿಕೆಟ್ ಮಾಹಿತಿ
ಟಿಕೆಟ್ ಪಡೆದವರಲ್ಲಿ ಹೆಚ್ಚಿರುವ 09 ಲಿಂಗಾಯತ ನಾಯಕರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಬೆಳಗಾವಿ ಮತ್ತು ಬಸವರಾಜ ಬೊಮ್ಮಾಯಿ ಅವರು ಹಾವೇರಿಯಿಂದ ಟಿಕೆಟ್ ಪಡೆದಿದ್ದಾರೆ.
ಇನ್ನೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಲ್ಲಿ ಟಿಕೆಟ್ ಪಡೆದವರಲ್ಲಿ ಮೈಸೂರು ರಾಜಮನೆತನದ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು ಇದ್ದಾರೆ.
ಧಾರವಾಡದಿಂದ ಕಣಕ್ಕಿಳಿದ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ತೇಜಸ್ವಿ ಸೂರ್ಯ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳಾದರೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ.ಸಿ.ಎನ್.ಮಂಜುನಾಥ್ ಬಿಜೆಪಿಯಿಂದ ಒಕ್ಕಲಿಗ ಅಭ್ಯರ್ಥಿಗಳಾಗಿ ಅಖಾಡದಲ್ಲಿದ್ದಾರೆ.
ಒಬ್ಬ ಮುಸ್ಲಿಂ ನಾಯಕರಿಗೆ ಕಾಂಗ್ರೆಸ್ ಟಿಕೆಟ್
ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಿನವರು ಅಲ್ಪಸಂಖ್ಯಾತ ಮತದಾರರು ಹೆಚ್ಚಿದ್ದಾರೆ. ಹೀಗಿದ್ದರೂ ಈ ಬಾರಿ ಒಬ್ಬ ಮುಸ್ಲಿಂ ಸಮುದಾಯದ ನಾಯಕರಿಗೆ ಕಾಂಗ್ರೆಸ್ ಲೋಕಸಭೆ ಟಿಕೆಟ್ ನೀಡಿದೆ. ಈ ಬಾರಿ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಕ್ರೈಸರ ಹೆಸರು ಶಿಫಾರಸು ಮಾಡಿರಲಿಲ್ಲ ಎಂದು ತಿಳಿದು ಬಂದಿದೆ.
ಇನ್ನೂ ಬಾಕಿ ಉಳಿದ ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ. ಇತ್ತ ಚಿತ್ರದುರ್ಗದಲ್ಲಿ ಬಂಡಾಯ ಶುರುವಾಗಿದೆ. ಟಿಕೆಟ್ ಮಿಸ್ ಆಗಿದ್ದಕ್ಕೆ ಕೆಲವು ನಾಯಕ ಬಂಡಾಯ ಆರಂಭಿಸಿದ್ದಾರೆ. ಇತ್ತ ಪಕ್ಷಗಳು ಜಾತಿ, ಸಮುದಾಯವಾರು ಅಭ್ಯರ್ಥಿಗಳಗೆ ಟಿಕೆಟ್ ನೀಡಿದ್ದೇವೆ ಎಂಬ ಖುಷಿಲ್ಲಿವೆ.












Click it and Unblock the Notifications